ಹಡಗಿನ 11ನೇ ಅಂತಸ್ತಿಂದ ತಾತನ ಕೈನಿಂದ ಜಾರಿ ಬಿದ್ದು ಹೆಣ್ಣುಮಗು ಸಾವು

ಐಷಾರಾಮಿ ಹಡಗಿನ ಹನ್ನೊಂದನೇ ಅಂತಸ್ತಿನಿಂದ ಬಿದ್ದು ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಪೋರ್ಟೋ ರಿಕೋದಲ್ಲಿ ನಡೆದಿದೆ. ನಿಲ್ಲಿಸಲಾಗಿದ್ದ ಹಡಗಿನಿಂದ ತನ್ನ ತಾತನ ಕೈಯಿಂದ ಜಾರಿಬಿದ್ದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಸಂಬಂಧಿಕರು ದಿಗ್ಭ್ರಮೆಗೊಂಡಿದ್ದು, ಯಾರ ವಿಚಾರಣೆಯನ್ನೂ ಮಾಡಲು ಸಾಧ್ಯವಾಗಿಲ್ಲ. ತನಿಖೆ ಪೂರ್ಣಗೊಳ್ಳುವ ತನಕ ಇಲ್ಲೇ ಇರುತ್ತಾರೆ ಎಂದು ಕೂಡ ಮಾಹಿತಿ ನೀಡಿದ್ದಾರೆ.

ಆ ಹೆಣ್ಣುಮಗು ತನ್ನ ಪೋಷಕರ ಜತೆಗೆ ಪ್ರವಾಸದಲ್ಲಿತ್ತು. ಸೋದರರು, ಅಜ್ಜಿ- ತಾತಂದಿರು ಕೂಡ ಈ ಪ್ರವಾಸದಲ್ಲಿದ್ದರು. ಸ್ಯಾನ್ ಜುವಾನ್ ನಲ್ಲಿ ಭಾನುವಾರ ಈ ದುರ್ಘಟನೆ ಸಂಭವಿಸಿದೆ. ಮಗುವನ್ನು ಅದರ ತಾಯಿಯ ತಂದೆ ಎತ್ತಿಕೊಂಡಿದ್ದರು. ಇದೀಗ ವಿಚಾರಣೆ ನಡೆಯುತ್ತಾ ಇದೆ.

ಇಡೀ ಕುಟುಂಬವು ಐಷಾರಾಮಿ ಹಡಗಿನ ಹನ್ನೊಂದನೇ ಅಂತಸ್ತಿನ ಡೈನಿಂಗ್ ಹಾಲ್ ಬಳಿ ಅಥವಾ ಡೈನಿಂಗ್ ಹಾಲ್ ನಲ್ಲಿ ಸೇರಿತ್ತು. ತಾತ ತನ್ನ ಮೊಮ್ಮಗುವನ್ನು ಕಿಟಕಿಯ ತುದಿಯಲ್ಲಿ ಕೂರಿಸಿದ್ದರು. ಕಿಟಕಿ ಅದಾಗಲೇ ತೆರೆದಿತ್ತೋ ಅಥವಾ ಯಾರಾದರೂ ಅದನ್ನು ತೆರೆದರೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

One year old girl baby died after slipped by 11th floor of cruise from grandfather hand

ಈ ಐಷಾರಾಮಿ ಹಡಗು ಸೋಮವಾರದಂದು ಪೋರ್ಟೋ ರಿಕೋದಿಂದ ಹೊರಡಬೇಕಿತ್ತು. ಮುಂದಿನ ಪ್ರವಾಸಕ್ಕೆ ಎಲ್ಲ ಸಿದ್ಧತೆ ಆಗಿತ್ತು ಎಂದು ರಾಯಲ್ ಕೆರಬಿಯನ್ ಕ್ರೂಸಸ್ ನ ವಕ್ತಾರರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+