ಲಸಿಕೆ ರಕ್ಷಣೆಯನ್ನು ಓಮಿಕ್ರಾನ್ ಸಂಪೂರ್ಣ ಕುಗ್ಗಿಸುವುದು ಅಸಂಭವ: WHO
ಜಿನಿವಾ, ಡಿಸೆಂಬರ್ 08: "ಕೊರೊನಾ ವೈರಸ್ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್ ಈ ಹಿಂದಿನ ರೂಪಾಂತರಗಳಂತೆ ಅಧಿಕ ಗಂಭೀರವಾದ ರೋಗ ಲಕ್ಷಣವನ್ನು ಅಥವಾ ಪರಿಣಾಮವನ್ನು ಉಂಟು ಮಾಡುವುದಿಲ್ಲ, ಇದು ಕೋವಿಡ್ ಲಸಿಕೆಯ ರಕ್ಷಣೆಯಿಂದ ಕಡಿಮೆ ಮಾಡುವುದು ಅತೀ ಅಸಂಭವ. ಓಮಿಕ್ರಾನ್ ಕೋವಿಡ್ ಲಸಿಕೆಯ ರಕ್ಷಣೆಯನ್ನು ಕುಗ್ಗಿಸುವುದಿಲ್ಲ," ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಎಫ್‌ಪಿಗೆ ಮಾಹಿತಿ ನೀಡಿದೆ. "ಈ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಇನ್ನೂ ಹಲವಾರು ವಿಚಾರವನ್ನು ನಾವು ತಿಳಿದು ಕೊಳ್ಳುವುದು ಬಾಕಿ ಉಳಿದಿದೆ. ಆದರೆ ಈ ಅಧಿಕವಾಗಿ ತಳಿಗಳನ್ನು ಹೊಂದಿರುವ ಕೋವಿಡ್ ರೂಪಾಂತರ ಓಮಿಕ್ರಾನ್ ಡೆಲ್ಟಾ ಹಾಗೂ ಇತರೆ ರೂಪಾಂತರಕ್ಕಿಂತ ಅಧಿಕವಾಗಿ ಜನರನ್ನು ಗಂಭೀರ ಅನಾರೋಗ್ಯಕ್ಕೆ ಒಳಪಡಿಸಲ್ಲ ಎಂಬುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ," ಎಂದು ತಿಳಿಸಿದೆ.
"ಈ ಓಮಿಕ್ರಾನ್ ಅತೀ ಗಂಭೀರವಾದ ರೋಗ ಲಕ್ಷಣಗಳನ್ನು ಉಂಟು ಮಾಡುತ್ತದೆ ಎಂಬುವುದುನ್ನು ಪ್ರಾಥಮಿಕ ವರದಿಯು ಉಲ್ಲೇಖ ಮಾಡುವುದಿಲ್ಲ. ಬದಲಾಗಿ ಈ ಓಮಿಕ್ರಾನ್ ಕಡಿಮೆ ತೀವ್ರತೆಯನ್ನು ಹೊಂದಿದೆ ಎಂದು ಪ್ರಾಥಮಿಕ ಮಾಹಿತಿಯು ಹೇಳುತ್ತದೆ," ಎಂದು ಸಂದರ್ಶನವೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಮೈಕೆಲ್ ರಯಾನ್ ಹೇಳಿದರು. ಈ ಸಂದರ್ಭದಲ್ಲೇ "ಈ ಬಗ್ಗೆ ಅಧಿಕ ಸಂಶೋಧನೆ ನಡೆಸುವ ಅಗತ್ಯವಿದೆ," ಎಂದು ಕೂಡಾ ಹೇಳಿದ್ದಾರೆ.

ಕೋವಿಡ್ ಲಸಿಕೆಯ ರಕ್ಷಣೆಯನ್ನು ಕುಗ್ಗಿಸಲ್ಲ ಓಮಿಕ್ರಾನ್
"ಓಮಿಕ್ರಾನ್ ಕೊರೊನಾ ಲಸಿಕೆಯ ರಕ್ಷಣೆಯನ್ನು ಕುಗ್ಗಿಸಲ್ಲ," ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. "ಎಲ್ಲಾ ಕೋವಿಡ್ ರೂಪಾಂತರಗಳ ವಿರುದ್ಧವಾಗಿ ಸಫಲವಾಗಿ ಕಾರ್ಯನಿರ್ವಹಣೆ ಮಾಡುವ ಕೊರೊನಾ ಲಸಿಕೆಯನ್ನು ನಾವು ಹೊಂದಿದ್ದೇವೆ. ಪ್ರಸ್ತುತ ಲಭ್ಯವಿರುವ ಕೋವಿಡ್ ಲಸಿಕೆಯು ಗಂಭೀರ ಅನಾರೋಗ್ಯ ಹಾಗೂ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯನ್ನು ಕಡಿಮೆ ಮಾಡುತ್ತದೆ," ಎಂದು ಕೂಡಾ ವಿಶ್ವ ಆರೋಗ್ಯ ಸಂಸ್ಥೆಯು ಉಲ್ಲೇಖ ಮಾಡಿದೆ.
"ಓಮಿಕ್ರಾನ್ ಗಂಭೀರ ಆಗುತ್ತದೆ ಎಂದು ಹೇಳಲು ಯಾವುದೇ ಸಾಕ್ಷಿಗಳು ಇಲ್ಲ. ದಕ್ಷಿಣ ಆಫ್ರಿಕಾದ ಆರಂಭಿಕ ಡೇಟಾವನ್ನು ನಾವು ನೋಡಿದಾಗ ಕೋವಿಡ್ ಲಸಿಕೆಗಳು ಕನಿಷ್ಠ ರೋಗದ ಗಂಭೀರತೆಯನ್ನು ತಡೆಗಟ್ಟುತ್ತದೆ ಎಂಬುವುದು ದೃಢಪಡುತ್ತದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಮೈಕೆಲ್ ರಯಾನ್ ಉಲ್ಲೇಖಿಸಿದ್ದಾರೆ.
ಲಸಿಕೆ ಕಡಿಮೆ ಪರಿಣಾಮಕಾರಿ ಎಂದು ಸಾಬೀತುಕೂಡಾ ಪಡಿಸಬಹುದು
"ಅಸ್ತಿತ್ವದಲ್ಲಿರುವ ಲಸಿಕೆಗಳು ಓಮಿಕ್ರಾನ್ ವಿರುದ್ಧ ಕಡಿಮೆ ಪರಿಣಾಮಕಾರಿ ಎಂದು ಸಾಬೀತುಪಡಿಸುವ ಸಾಧ್ಯತೆಯಿದೆ," ಎಂದು ಉಲ್ಲೇಖ ಮಾಡಿದ ರಯಾನ್ ಇದ್ದಕ್ಕೆ ವಿವರಣೆಯನ್ನು ನೀಡಿದ್ದಾರೆ. "ಕೊರೊನಾ ವೈರಸ್ ಮೇಲ್ಲೈಯಲ್ಲಿ ಚುಕ್ಕೆಗಳು ಇರುವ ಸ್ಲೈಕ್ ಪ್ರೋಟೀನ್‌ನಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳು ಇದೆ.
ಇದು ಜೀವಕೋಶವನ್ನು ಆಕ್ರಮಣ ಮಾಡಲು ಅವಕಾಶ ನೀಡುತ್ತದೆ," ಎಂದಿದ್ದಾರೆ. "ಆದರೆ ಕೋವಿಡ್ ಲಸಿಕೆಯ ಪರಿಣಾಮವನ್ನು ಸಂಪೂರ್ಣವಾಗಿ ಈ ಓಮಿಕ್ರಾನ್ ತಗ್ಗಿಸುತ್ತದೆ ಎಂಬುವುದು ಅತ್ಯಂತ ಅಸಂಭವ," ಎಂದು ಪ್ರತಿಪಾದಿಸಿದ್ದಾರೆ. "ರಕ್ಷಣೆಯಲ್ಲಿ ಕೆಲವು ಕೊರತೆಗಳು ಇರಬಹುದು, ಆದರೆ ಸಂಪೂರ್ಣವಾಗಿ ಲಸಿಕೆಯ ರಕ್ಷಣೆ ಕುಗ್ಗಿಸಲು ಸಾಧ್ಯವಿಲ್ಲ," ಎಂದು ಕೂಡಾ ಹೇಳಿದ್ದಾರೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್ ಹಿನ್ನೆಲೆ ಎಲ್ಲಾ ದೇಶಗಳು ತಮ್ಮ ಜನರಿಗೆ ಲಸಿಕೆ ನೀಡಿಕೆಯನ್ನು ವೇಗಗೊಳಿಸುವಂತೆ ತಿಳಿಸಿದೆ. ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಹರಡುವಿಕೆ ಭೀತಿ ಹೆಚ್ಚಿದ ಈ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವುದರ ಬಗ್ಗೆ ಆಲೋಚಿಸುವುದರ ಬದಲಿಗೆ ಎಲ್ಲರಿಗೂ ಕೊವಿಡ್-19 ಲಸಿಕೆ ನೀಡುವತ್ತ ಲಕ್ಷ್ಯ ವಹಿಸುವಂತೆ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications