Russia & Ukraine: ಓಡೋ.. ಓಡೋ.. ಓಡೋಲೇ.. ಉತ್ತರ ಕೊರಿಯಾದ ಸೈನಿಕರು ಎಸ್ಕೇಪ್!

ಯುರೋಪ್ ನೆಮ್ಮದಿ ಹಾರಿ ಹೋಗಿದೆ, ಕೊನೇ ಪಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಜನರು ಕೂಡ ದಾರಿ ಕಾಣದೆ ನರಳುತ್ತಿದ್ದು, ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಿದ್ದಾಗಲೇ, ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಎಂಟ್ರಿ ಕೊಟ್ಟಿದ್ದ ಉತ್ತರ ಕೊರಿಯಾ ಸೈನಿಕರು ಈಗ ಓಡಿ ಹೋಗಿದ್ದಾರಂತೆ!

ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಇನ್ನೇನು 3 ವರ್ಷ ಕಳೆಯಲಿದೆ, ಇಂತಹ ಸಮಯಕ್ಕೆ ಸರಿಯಾಗಿ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಈಗ ಹುಸಿಯಾಗುತ್ತಿದೆ. ಒಂದು ಕಡೆ ಹಸಿವು, ಬಡತನ ಕಾಡುತ್ತಿರುವ ಸಮಯದಲ್ಲೇ ಉಕ್ರೇನ್ ಜನರಿಗೆ ದಿಕ್ಕೇ ತೋಚದಂತೆ ಆಗಿ ಹೋಗಿದೆ. ಈ ಸಮಯದಲ್ಲಿ ಉತ್ತರ ಕೊರಿಯಾ ಸೈನಿಕರು ಕೂಡ ಎಸ್ಕೇಪ್ ಆಗಿದ್ದಾರಂತೆ. ಯಾಕಂದ್ರೆ ಉಕ್ರೇನ್ ನೆಲದಲ್ಲಿ ಹೆಚ್ಚಾಗಿರುವ ದಾಳಿ ಬೆನ್ನಲ್ಲೇ ರಷ್ಯಾ ಸೈನಿಕರ ಸಾವು ಕೂಡ ಹೆಚ್ಚುತ್ತಿದೆ. ಇದರ ನಡುವೆ ಉತ್ತರ ಕೊರಿಯಾ ಸೈನಿಕರು ಕೂಡ ದಿಕ್ಕಾಪಾಲಾಗಿದ್ದಾರೆ.

North Koreans Reported Missing Amid High Russian Casualties in Ukraine

ಸತ್ತು ಹೋದರಾ? ಎಸ್ಕೇಪ್ ಆಗಿದ್ದಾರಾ?

ಒಂದು ಕಡೆ ಹೀಗೆ ಉತ್ತರ ಕೊರಿಯಾ ಸೈನಿಕರು ನಾಪತ್ತೆ ಆಗಿರುವ ಮ್ಯಾಟರ್ ಅನುಮಾನ ಮೂಡುವಂತೆ ಮಾಡಿದೆ. ಯಾಕಂದ್ರೆ ಉತ್ತರ ಕೊರಿಯಾ ಸೈನಿಕರನ್ನು ಮುನ್ನೆಲೆಗೆ ಬಿಟ್ಟು, ಹಿಂದೆಯಿಂದ ರಷ್ಯಾ ಸೇನೆ ಮುಂದೆ ನುಗ್ಗುತ್ತಿತ್ತು. ಹೀಗಾಗಿ ಉತ್ತರ ಕೊರಿಯಾ ಸೈನಿಕರು ಹೇಗೆ ನಾಪತ್ತೆ ಆಗಿದ್ದಾರೆ ಅನ್ನೋ ಅನುಮಾನ ಮೂಡಿದೆ. ಹಾಗೇ, ಉತ್ತರ ಕೊರಿಯಾ ಸೈನಿಕರು ಸತ್ತು ಹೋದರಾ? ಎಸ್ಕೇಪ್ ಆಗಿದ್ದಾರಾ? ಅಂತಾ ಚರ್ಚೆ ಶುರುವಾಗಿದೆ.

ವಿನಾಶಕಾರಿ ಅಸ್ತ್ರಗಳ ಬಳಕೆ ಗ್ಯಾರಂಟಿ?

ರಷ್ಯಾ ಮಿಲಿಟರಿ ಬಳಿ ಇರುವ ಅಸ್ತ್ರ ಒಂದೊಂದಲ್ಲ ರಷ್ಯಾ ತನ್ನಲ್ಲಿ ಇರುವ ಭಯಾನಕ ವೆಪನ್ಸ್ ಹೊರ ತೆಗೆದರೆ ಆಗುವುದೇ ಬೇರೆ. ಯಾಕಂದ್ರೆ ರಷ್ಯಾ ಬಳಿ ಆ ರೀತಿಯ ಅಸ್ತ್ರಗಳು ಕೊಳೆಯುತ್ತಿವೆ ಎಂಬ ಮಾತಿದೆ. ಹೀಗಿದ್ರೂ ಇಷ್ಟು ದಿನ ಸಾಮಾನ್ಯ ಅಸ್ತ್ರವನ್ನೇ ಬಳಸಿ ದಾಳಿ ಮಾಡ್ತಾ ಇರುವ ರಷ್ಯಾ ಸೇನೆ ಸಮಯಕ್ಕಾಗಿ ಕಾಯುತ್ತಿದೆ. ಹೀಗಾಗಿಯೇ ಉತ್ತರ ಕೊರಿಯಾ ಸೈನಿಕರ ಬಲವನ್ನು ಪಡೆದು ಮುಂದೆ ನುಗ್ಗುತ್ತಿದ್ದು, ಇದು ಉಲ್ಟಾ ಆಗುತ್ತಿದೆ ಎಂಬ ಆರೋಪ ಕೇಳಿ ಬರ್ತಿದೆ. ಸೂಕ್ತ ತರಬೇತಿ ಇಲ್ಲದ ಉತ್ತರ ಕೊರಿಯಾ ಸೈನಿಕರು ಯುದ್ಧ ಭೂಮಿಯಲ್ಲಿ ಪ್ರತಿದಿನ ಪರದಾಡುತ್ತಾ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕಿಮ್ ಜಾಂಗ್ ಉನ್‌ಗೆ ಕೂಡ ಇದು ತಲೆನೋವಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+