North Korea: ಜನರಿಗೆ ತಿನ್ನಲು ಅನ್ನವಿಲ್ಲ, ಎಲುಬು ಕಾಣುವ ದೇಹ ಅತ್ತ ಸರ್ವಾಧಿಕಾರಿ ಮಗಳ ವಿಲಾಸಿ ಜೀವನ

ಉತ್ತರ ಕೊರಿಯಾದ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಷ್ಟುದಿನ ತನ್ನ ಮಕ್ಕಳ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಭದ್ರತೆಯ ಕಾರಣಕ್ಕೆ ಇದೆಲ್ಲವನ್ನೂ ಗೌಪ್ಯವಾಗಿ ಇಟ್ಟುಕೊಂಡಿದ್ದ. ಆದರೆ ಈಗ ಕಿಮ್ ಜಾಂಗ್ ಉನ್ ಮಗಳ ಫೋಟೋ ರಿವೀಲ್ ಆಗಿ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಸರ್ವಾಧಿಕಾರಿಯ ಮಗಳು ಕಿಮ್ ಜು ಏ ಅದೆಂತಹ ಐಷಾರಾಮಿ ಜೀವನ ನಡೆಸುತ್ತಿದ್ದಾಳೆ ಅನ್ನೋ ವಿಚಾರವೂ ಜಗಜ್ಜಾಹೀರಾಗಿದೆ.

ಅಲ್ಲಿ ತಿನ್ನಲು ಅನ್ನವಿಲ್ಲ.. ಜನರಿಗೆ ಕನಿಷ್ಠ ವ್ಯವಸ್ಥೆ ಇಲ್ಲ.. ಯಾರ ಮುಖ ನೋಡಿದರೂ ಬಾಡಿ ಹೋದ ಕೆನ್ನೆ, ಎಲುಬು ಕಾಣುವ ದೇಹ. ಪರಿಸ್ಥಿತಿ ಇಷ್ಟು ಹೀನಾಯವಾಗಿದ್ದಾಗ ಅಲ್ಲಿನ ಅಧ್ಯಕ್ಷನ ಮಗಳು ಮಾತ್ರ ಐಷಾರಾಮಿ ಜೀವನ ನಡೆಸುತ್ತಾ, ಅದೇ ದೇಶದ ಇತರ ಮಕ್ಕಳ ಹೊಟ್ಟೆ ಉರಿಸುವ ರೀತಿ ಬದುಕುತ್ತಿದ್ದಾಳೆ.

North Korean Leader Kim Jong Un Daughter Appeared in Public Place With Father | ಕಿಮ್ ಫ್ಯಾಮಿಲಿ ವಿರುದ್ಧ ಕೊರಿಯನ್ನರ ಆಕ್ರೋಶ
Photo Credit: (Photo courtesy : PTI)

ಅತ್ತ ರಾಕ್ಷಸ ಸ್ವರೂಪಿ ಅಧ್ಯಕ್ಷನ ಈ ವಿಲಾಸಿ ಜೀವನದ ಬಗ್ಗೆ ಜನರು ಬಾಯಿ ಬಿಡಲಾಗದೆ, ಕಷ್ಟಗಳನ್ನ ನುಂಗಿಕೊಂಡು ಬದುಕಲೂ ಆಗದೆ ಪರದಾಡುತ್ತಿದ್ದಾರೆ. ಇದ್ಯಾವುದೋ ಬೇರೆ ಪ್ರಪಂಚದ ಕಥೆಯಲ್ಲ, ಭಾರತದಿಂದ ಕೇವಲ 5 ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಉತ್ತರ ಕೊರಿಯಾ ಜನರ ನಿತ್ಯದ ವ್ಯಥೆ.

ಹೌದು ಉತ್ತರ ಕೊರಿಯಾದ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಷ್ಟುದಿನ ತನ್ನ ಮಕ್ಕಳ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಭದ್ರತೆಯ ಕಾರಣಕ್ಕೆ ಇದೆಲ್ಲವನ್ನೂ ಗೌಪ್ಯವಾಗಿ ಇಟ್ಟುಕೊಂಡಿದ್ದ. ಆದರೆ ಈಗ ಕಿಮ್ ಜಾಂಗ್ ಉನ್ ಮಗಳ ಫೋಟೋ ರಿವೀಲ್ ಆಗಿ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಸರ್ವಾಧಿಕಾರಿಯ ಮಗಳು ಕಿಮ್ ಜು ಏ ಅದೆಂತಹ ಐಷಾರಾಮಿ ಜೀವನ ನಡೆಸುತ್ತಿದ್ದಾಳೆ ಅನ್ನೋ ವಿಚಾರವೂ ಜಗಜ್ಜಾಹೀರಾಗಿದೆ.

North Korean Leader Kim Jong Un Daughter Appeared in Public Place With Father | ಕಿಮ್ ಫ್ಯಾಮಿಲಿ ವಿರುದ್ಧ ಕೊರಿಯನ್ನರ ಆಕ್ರೋಶ
Photo Credit: (Photo courtesy : PTI)

ಕಿಮ್ ಜಾಂಗ್ ಉನ್ ತಾತ ಕಿಮ್ ಇಲ್ ಸಂಗ್ ನಂತರ ಕಿಮ್ ಜಾಂಗ್ ಇಲ್ ಉ. ಕೊರಿಯಾದ ಅಧಿಕಾರ ವಹಿಸಿಕೊಂಡಿದ್ದ. ತಂದೆಯ ಸಾವಿನ ಬಳಿಕ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದು ಇನ್ನೇನು 1 ದಶಕ ಪೂರೈಸಲಿದ್ದಾನೆ. ಆದರೆ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದ ನಂತರ ಉತ್ತರ ಕೊರಿಯಾದ ಪರಿಸ್ಥಿತಿ ಮೊದಲಿಗಿಂತ ಬಿಗಡಾಯಿಸಿದೆ.

ಒಂದು ಕಡೆ ತಿನ್ನಲು ಅನ್ನವಿಲ್ಲದೆ ಜನ ಪ್ರಾಣಬಿಡುತ್ತಿದ್ದರೆ, ಮತ್ತೊಂದ್ಕಡೆ ಉತ್ತರ ಕೊರಿಯಾ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ತನ್ನದೇ ದೇಶದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಧ್ಯಕ್ಷನಾದವನು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡು ಪರಿಹಾರ ಹುಡುಕುತ್ತಿಲ್ಲ. ಪ್ರಜೆಗಳು ಸಾಯುತ್ತಿದ್ದರೂ ತಾನು ಮಾತ್ರ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಡಕಲು ದೇಹ.. ಬಾಡಿದ ಮನಸ್ಸು!

ಹೌದು.. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಗಳು ಕಿಮ್ ಜು ಏ ಸಾರ್ವಜನಿಕವಾಗಿ ಕಂಡ ಬಳಿಕ ಅಲ್ಲಿನ ಪ್ರಜೆಗಳ ಪಿತ್ತ ನೆತ್ತಿಗೇರಿದೆ. ಜನರು ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೆ, ಅಧ್ಯಕ್ಷನ ಮಗಳು ಮಾತ್ರ ಕುದುರೆ ಸವಾರಿ ಮಾಡುತ್ತಾ, ತನಗೆ ಬೇಕಾದ ವಸ್ತುಗಳನ್ನ ಖರೀದಿಸುತ್ತಾ. ಶ್ರೀಮಂತಿಕೆಯ ಜೀವನ ನಡೆಸುತ್ತಿರುವುದು ಪಾಪ ಅಲ್ಲಿನ ಬಡ, ಒಂದು ಹೊತ್ತಿನ ಊಟಕ್ಕೂ ಪರದಾಡುವ ಕುಟುಂಬಗಳ ಕಣ್ಣಲ್ಲಿ ನೀರು ತರಿಸಿದೆ. ಈ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ಗುಟ್ಟಾಗಿ ಮಾಹಿತಿ ಕಲೆಹಾಕಿ, ಕಿಮ್ ಜಾಂಗ್ ಉನ್ ಜಾತಕ ಬಯಲಾಗುವಂತೆ ಮಾಡಿವೆ.

ಕಳ್ಳದಾರಿಯಲ್ಲಿ ಹಣ ಸಂಪಾದನೆ?

ಕಿಮ್ ಜಾಂಗ್ ಉನ್ ವಿರುದ್ಧ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ತಿನ್ನಲು ಅನ್ನವಿಲ್ಲದೆ ಜನ ಸಾಯುತ್ತಿದ್ದರೂ ಅದು ಹೇಗೆ ಐಷಾರಾಮಿ ಜೀನವವನ್ನು ನಡೆಸುತ್ತಿದ್ದಾನೆ ಅನ್ನೋ ಪ್ರಶ್ನೆ ಬಹುಪಾಲು ಜನರನ್ನ ಕಾಡುತ್ತಿದೆ. ಆದರೆ ಕಿಮ್ ಜಾಂಗ್ ಉನ್ ತನ್ನಲ್ಲಿರುವ ಬಹುಪಾಲು ಹಣವನ್ನ ಅಕ್ರಮವಾಗಿ ಸಂಪಾದನೆ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಡ್ರಗ್ ಡೀಲ್, ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯೂ ಸೇರಿದಂತೆ ಹಲವು ಅಕ್ರಮಗಳ ಮೂಲಕ ಕಳ್ಳದಾರಿಯಲ್ಲಿ ಕಿಮ್ ಜಾಂಗ್ ಉನ್ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂಬ ಆರೋಪವಿದೆ. ಇನ್ನು ತನ್ನ ಮಗಳ ಜೊತೆಯಲ್ಲಿ ಕಿಮ್ ನಗು ನಗುತ್ತಾ ಫೋಟೋಗೆ ಪೋಸ್ ನೀಡಿರುವುದು ಅಲ್ಲಿನ ಜನರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಜೆಗಳ ಬಗ್ಗೆ ತಲೆಕೆಡಸಿಕೊಂಡಂತೆ ಕಾಣುತ್ತಿಲ್ಲ

ಇದೆಲ್ಲವನ್ನೂ ನೋಡುತ್ತಿದ್ದರೆ ಕಿಮ್ ಜಾಂಗ್ ಉನ್ ಪ್ರಜೆಗಳ ಬಗ್ಗೆ ತಲೆಕೆಡಸಿಕೊಂಡಂತೆ ಕಾಣುತ್ತಿಲ್ಲ. ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರೆ, ತಾನು ಮಾತ್ರ ತನ್ನಿಷ್ಟದಂತೆ ಬದುಕುತ್ತಿದ್ದಾನೆ. ತನ್ನ ಮಕ್ಕಳಿಗೆ ಮನೆಯಲ್ಲೇ ಅತ್ಯುತ್ತಮ ದರ್ಜೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ಈತನಿಗೆ ಒಟ್ಟು 3 ಮಕ್ಕಳಿದ್ದಾರೆ ಎನ್ನಲಾಗಿದ್ದು, ಎಲ್ಲಿಯೂ ಅಧಿಕೃತವಾಗಿ ಬಹಿರಂಗವಾಗಿಲ್ಲ.

ಒಂದು ಮಗು 13 ವರ್ಷದ್ದು, ಇದೀಗ ಹೊರಜಗತ್ತಿಗೆ ಕಾಣಿಸಿಕೊಂಡಿರುವ 10 ವರ್ಷದ ಕಿಮ್ ಜು ಏ ಮತ್ತೊಂದು ಮಗುವಾದರೆ, 6 ವರ್ಷದ ಇನ್ನೊಂದು ಮಗು ಕೂಡ ಕಿಮ್ ಜಾಂಗ್ ಉನ್ಗೆ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅದು ಏನೇ ಇರಲಿ, ತನ್ನ ದೇಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ನಾಯಕನೇ ಈ ರೀತಿ ವಿಲಾಸಿ ಜೀವನ ನಡೆಸುತ್ತಿರುವುದು ವಿಪರ್ಯಾಸವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+