3ನೇ ಮಹಾಯುದ್ಧ: ಮುಂದೈತೆ ಮಾರಿಹಬ್ಬ ಅಂದ್ಳು ಕಿಮ್ ತಂಗಿ!
ಪ್ಯೊಂಗ್ಯಾಂಗ್: ಅಮೆರಿಕ ಮಾಡುವ ಕೆಲಸಗಳೇ ಹೀಗೆ, ಏನೋ ಮಾಡಲು ಹೋಗಿ ಇನ್ನೇನೋ ಮಾಡಿಬಿಡುತ್ತೆ. ಒಂದೇ ಮಾತಿಗೆ ಉ.ಕೊರಿಯಾ ನಾಯಕರನ್ನ ನಡುಗಿಸುವ ಲೆಕ್ಕಾಚಾರದಲ್ಲಿ ಇದ್ದ ದಡ್ಡಣ್ಣ.. ಅಲ್ಲಲ್ಲ ದೊಡ್ಡಣ್ಣನಿಗೆ ಬಿಗ್ ಶಾಕ್ ಸಿಕ್ಕಿದೆ. ಉತ್ತರ ಕೊರಿಯಾ (North Korea) ನಾಶ ಮಾಡುವುದಾಗಿ ಪರೋಕ್ಷ ಎಚ್ಚರಿಕೆ ನೀಡಿದ್ದ ಅಮೆರಿಕಗೆ ಸರ್ವಾಧಿಕಾರಿ ತಂಗಿ ಪಂಚ್ ಕೊಟ್ಟಿದ್ದಾಳೆ.
ಹೌದು, ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡ ಪರಿಸ್ಥಿತಿ ದೊಡ್ಡಣ್ಣನಿಗೆ ಎದುರಾಗಿದೆ. ಕಿಮ್ ಜಾಂಗ್ ಉನ್ ಪರಮಾಣು ಅಸ್ತ್ರ ಪ್ರಯೋಗ ಮಾಡಲಿದ್ದಾನೆ ಎಂಬ ಆರೋಪದ ಹಿನ್ನೆಲೆ ಇತ್ತೀಚೆಗೆ ಅಮೆರಿಕ ವಾರ್ನಿಂಗ್ ಕೊಟ್ಟಿತ್ತು. ಈ ಬೆಳವಣಿಗೆ ನಂತರ ಚೀನಾ ಕೂಡ ಅಮೆರಿಕ ವಿರುದ್ಧ ತಿರುಗಿಬಿದ್ದು ಸೈಲೆಂಟ್ ಆಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದಿತ್ತು. ಇಷ್ಟೆಲ್ಲಾ ನಡೆದರೂ ಉತ್ತರ ಕೊರಿಯಾ ಸರ್ವಾಧಿಕಾರಿ ಮಾತ್ರ ತುಟಿ ಬಿಚ್ಚಿರಲಿಲ್ಲ. ಈಗಲೂ ಅಷ್ಟೇ ಅವನು ಮಾತು ಆಡದೆ, ತನ್ನ ಮುದ್ದಿನ ತಂಗಿ ಬಾಯಿಂದಲೇ ಅಮೆರಿಕಗೆ ವಾರ್ನಿಂಗ್ ಕೊಡಿಸಿದ್ದಾನೆ ಉತ್ತರ ಕೊರಿಯಾ ಸರ್ವಾಧಿಕಾರಿ.

ಏನ್ ನಾವು ಸುಮ್ನೆ ಇಲ್ಲಪ್ಪ!
ಹೌದು, ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂಗಿ ಕಿಮ್ ಯೋ ಜಾಂಗ್ ಅಮೆರಿಕ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ. ಅದೇನೆಂದರೆ, ಅಮೆರಿಕ ಇದೀಗ ದಕ್ಷಿಣ ಕೊರಿಯಾ ಜೊತೆ ಸೇರಿ ನಡೆಸುತ್ತಿರುವ ಬೆಳವಣಿಗೆ ಮುಂದೆ ದೊಡ್ಡ ಪರಿಣಾಮ ಬೀರುತ್ತದೆ. ಈಗಿನ ಪರಿಸ್ಥಿತಿಯನ್ನ ಇನಷ್ಟು ಕೆಡಿಸುವುದು ಬೇಡ, ಹಂಗೆ ಮಾಡಿದರೆ ನಾವು ಕೂಡ ಸುಮ್ಮನೆ ಇರೋದಿಲ್ಲ. ಉತ್ತರ ಕೊರಿಯಾ ಕೂಡ ಮತ್ತಷ್ಟು ಪರಮಾಣು ಅಸ್ತ್ರಗಳ ಪರೀಕ್ಷೆ ನಡೆಸಲಿದೆ ಎಂದಿದ್ದಾಳೆ. ಈ ಮೂಲಕ 'ಏನ್ ನಾವು ಸುಮ್ನೆ ಇಲ್ಲ' ಎಂಬ ಸಂದೇಶವನ್ನ ಅಮೆರಿಕ ನಾಯಕರಿಗೆ ರವಾನಿಸಿದ್ದಾಳೆ ಕಿಮ್ ತಂಗಿ.
ಸುಮ್ಮನೆ ಕಿಮ್‌ನ ಕೆಣಕಬೇಡಿ ಹುಷಾರ್!
ಅಮೆರಿಕ ಕೊಟ್ಟ ಎಚ್ಚರಿಕೆ ಪ್ರಕಾರ, ಪರಮಾಣು ಬಾಂಬ್ ಹಾಕಿದ ದಿನವೇ ಕಿಮ್ ಜಾಂಗ್ ಉನ್ ಆಡಳಿತ ಕೊನೆಯಾಗಲಿದೆ ಎಂದಿತ್ತು. ಅಮೆರಿಕದ ಈ ಮಾತಿಗೆ ಚೀನಾ ಪ್ರತಿಕ್ರಿಯಿಸಿ ಉತ್ತರ ಕೊರಿಯಾ ಜೊತೆ ಸಮಸ್ಯೆ ಇದ್ದರೆ ಕೂತು ಮಾತನಾಡಿ. ಅದು ಬಿಟ್ಟು ಎಚ್ಚರಿಕೆ ನೀಡುವುದು, ಪ್ರಚೋದನೆ ಕೊಡುವುದನ್ನು ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದಿತ್ತು ಚೀನಾ. ಹೀಗೆ ಚೀನಾ ಉತ್ತರ ಕೊರಿಯಾ ಬೆಂಬಲಕ್ಕೆ ನಿಂತ ಒಂದೇ ದಿನದಲ್ಲಿ ಸ್ವತಃ ಉತ್ತರ ಕೊರಿಯಾ ಕೂಡ ಅಮೆರಿಕದ ನಾಯಕರಿಗೆ ಎಚ್ಚರಿಕೆ ನೀಡಿದೆ. ಕಿಮ್ ಜಾಂಗ್ ಉನ್ ತಂಗಿ ದೊಡ್ಡಣ್ಣನ ವಿರುದ್ಧ ಗುಡುಗಿದ್ದಾಳೆ.

ಮೊದಲೇ ತಿಕ್ಕಲು, ಏನಾಗುತ್ತೋ ಗೊತ್ತಿಲ್ಲ!
ಹೌದು, ಉತ್ತರ ಕೊರಿಯಾ ಸರ್ವಾಧಿಕಾರಿ ಮೊದಲೇ ತಿಕ್ಕಲು ಮನುಷ್ಯ. ಇಂತಹ ಮನುಷ್ಯನಿಗೆ ಅಮೆರಿಕ ಈ ರೀತಿ ಎಚ್ಚರಿಕೆ ನೀಡಿದೆ. ಹೀಗಾಗಿ ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ತನ್ನ ಬಳಿ ನೂರಾರು ಪರಮಾಣು ಕ್ಷಿಪಣಿಗಳನ್ನ ಇಟ್ಟುಕೊಂಡು ಕಾಯುತ್ತಿದ್ದಾನೆ ಉತ್ತರ ಕೊರಿಯಾ ಸರ್ವಾಧಿಕಾರಿ. ಈ ಹೊತ್ತಲ್ಲೇ ಅಮೆರಿಕ ಧಮ್ಕಿ ಹಾಕಿರೋದು ಕಿಮ್ ಜಾಂಗ್ ಉನ್‌ಗೆ ಹಾವಿನ ಬಾಲ ತುಳಿದಂತಾಗಿದೆ. ಇದಕ್ಕೆ ಮತ್ತೆ ಯಾವ ಮಿಸೈಲ್ ಮೂಲಕ ಕಿಮ್ ಜಾಂಗ್ ಉನ್ ಉತ್ತರ ಕೊಡುತ್ತಾನೋ ಗೊತ್ತಿಲ್ಲ.
ಉ.ಕೊರಿಯಾ ಬಳಿ ಡೆಡ್ಲಿ ವೆಪನ್ಸ್
ಸರ್ವಾಧಿಕಾರಿ ಕಿಮ್ ಸುಲಭವಾಗಿ ಪತ್ತೆ ಮಾಡಲು ಆಗದ ಮತ್ತು ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ ಕೆಲ ದಿನದಲ್ಲಿ ಗುಪ್ತಚರ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದ್ದಾನೆ. ಘನ-ಇಂಧನ ಬಳಸಿಕೊಂಡು ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿದೆ. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸುತ್ತಿದ್ದಾನೆ ಕಿಮ್. ಮತ್ತೊಂದು ಕಡೆ ಅಮೆರಿಕ ಬೇರೆ ಎಚ್ಚರಿಕೆ ನೀಡುತ್ತಿದೆ.

ಕಿಮ್ ಬಳಿ ಪರಮಾಣು ಕ್ಷಿಪಣಿಗಳ ರಾಶಿ
ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಕಿಮ್ ಜಾಂಗ್ ಉನ್ ಅದೆಷ್ಟು ಗರಂ ಆಗಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದ್ದಾನೆ. ಈ ಮೂಲಕ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ ಎಂದು ಉತ್ತರಿಸುತ್ತಿದ್ದಾನೆ. ಆದರೆ ಮೊನ್ನೆ ಮೊನ್ನೆ ತಾನೆ ಜಪಾನ್ ನಗರದಲ್ಲಿ ಕಿಮ್ ಹಾರಿಸಿದ ಕ್ಷಿಪಣಿ ಬೀಳಲಿದೆ ಎಂಬ ಆತಂಕ ಶುರುವಾಗಿತ್ತು. ಈ ಘಟನೆ ಬಳಿಕ ದಕ್ಷಿಣ ಕೊರಿಯಾ ಮತ್ತು ಜಪಾನ್ ಅಮೆರಿಕದ ಬಳಿ ದೂರು ನೀಡಿದ್ದವು. ಬಳಿಕ ಅಮೆರಿಕ ಕೂಡ ಉತ್ತರ ಕೊರಿಯಾಗೆ ಎಚ್ಚರಿಕೆ ಕೊಟ್ಟಿತ್ತು.
ಪರೋಕ್ಷವಾಗಿ ಚೀನಾ ಯುದ್ಧದ ಸೂಚನೆ?
ಚೀನಾ ಅಮೆರಿಕಗೆ ಕೊಟ್ಟಿರುವ ಎಚ್ಚರಿಕೆಯನ್ನ ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲೊಂದು ಒಳಮರ್ಮ ಇರೋದು ಗ್ಯಾರಂಟಿ. ಅಮೆರಿಕ ಕೂಡ ಚೀನಾಗೆ ಕಾಟ ಕೊಡುತ್ತಲೇ ಇದೆ. ಚೀನಾ ಶತ್ರು ರಾಷ್ಟ್ರಗಳನ್ನ ಬುಟ್ಟಿಗೆ ಹಾಕಿಕೊಂಡು, ಚೀನಾ ವಿರುದ್ಧ ತಿರುಗಿಬೀಳುವಂತೆ ಮಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ಉತ್ತರ ಕೊರಿಯಾಗೆ ಅಮೆರಿಕ & ದೊಡ್ಡಣ್ಣನ ಫ್ರೆಂಡ್ಸ್ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾರೆ ಎಂಬ ಆರೋಪ ಮಾಡಿದೆ ಚೀನಾ. ಈ ಮೂಲಕ ಅಮೆರಿಕ ಏನಾದರೂ ಉತ್ತರ ಕೊರಿಯಾ ಮುಟ್ಟಿದರೆ, ಚೀನಾ ಸುಮ್ಮನಿರಲ್ಲ ಎಂಬ ಹೇಳಿಕೆ ನೀಡಿದಂತಿದೆ ಚೀನಾ ಮಾತಿನ ಶೈಲಿ.
ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕ ಈಗಾಗಲೇ ತನ್ನ ಪರಮಾಣು ಜಲಾಂತರ್ಗಾಮಿ ಅಥವಾ ಸಬ್ ಮರೀನ್ ಅನ್ನ ದಕ್ಷಿಣ ಕೊರಿಯಾಗೆ ಕಳುಹಿಸಿದೆ. ಹಾಗೇ ಉತ್ತರ ಕೊರಿಯಾ ಗಡಿಯ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಜಗತ್ತು ಮತ್ತೊಮ್ಮೆ ವಿನಾಶದ ಅಂಚಿಗೆ ತಲುಪುತ್ತಿರುವುದು ಪಕ್ಕಾ. ಹಿಂದೆ 1ನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧ ಆರಂಭವಾಗಿದ್ದು ಇದೇ ರೀತಿ ಕೋಳಿ ಜಗಳದಲ್ಲಿ. ಇದೀಗ 3ನೇ ಮಹಾಯುದ್ಧ ಕೂಡ ಹಾಗೇ ಶುರುವಾಗುತ್ತಾ? ಎಂಬ ಭಯ ಇಡೀ ಜಗತ್ತನ್ನು ಕಾಡುತ್ತಿದೆ.
ಒಟ್ನಲ್ಲಿ ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್ ಒಟ್ಟಾಗಿ ಉತ್ತರ ಕೊರಿಯಾ ವಿರುದ್ಧ ತಿರುಗಿಬಿದ್ದಿರುವ ಸಂದರ್ಭಕ್ಕೆ ಸರಿಯಾಗಿ ಚೀನಾ ಎಂಟ್ರಿ ಕೊಟ್ಟಿದೆ. ಉತ್ತರ ಕೊರಿಯಾ ಪರ ನಿಂತಿರುವ ಚೀನಾ ನಾಯಕರು, ಅಮೆರಿಕ ಮತ್ತದರ ಸ್ನೇಹಿತ ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಹೀಗೆ ಚೀನಾ ತಮ್ಮ ಪರ ಮಾತನಾಡಿದ ಮರು ದಿನವೇ ಉತ್ತರ ಕೊರಿಯಾ ಸರ್ವಾಧಿಕಾರಿ ತನ್ನ ಮುದ್ದಿನ ತಂಗಿ ಕಿಮ್ ಯೋ ಜಾಂಗ್ ಮೂಲಕ ವಾರ್ನಿಂಗ್ ಕೊಡಿಸಿದ್ದಾನೆ. ಇದು ಪರಿಸ್ಥಿತಿಯನ್ನ ಮತ್ತಷ್ಟು ಸೂಕ್ಷ್ಮವಾಗುವಂತೆ ಮಾಡಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications