ಭಾರತಕ್ಕೆ ಜಯ; ಯುರೋಪ್ ಸಂಸತ್‌ನಲ್ಲಿ ಸಿಎಎ ಪರ ಮತದಾನ ಇಲ್ಲ
ನವದೆಹಲಿ, ಜನವರಿ 29 : ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಭಾರತಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ. ಯುರೋಪಿಯನ್ ಸಂಸತ್‌ನಲ್ಲಿ ಸಿಎಎ ಕುರಿತು ಮತದಾನ ನಡೆಸದಿರಲು ತೀರ್ಮಾನಿಸಲಾಗಿದೆ.
ಯುರೋಪ್ ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಟ್ಟು 5 ನಿರ್ಣಯ ಮಂಡನೆ ಮಾಡಲಾಗಿತ್ತು. ಸಂಸತ್‌ನಲ್ಲಿ ಮೊದಲು ನಿರ್ಣಯಗಳ ಬಗ್ಗೆ ಚರ್ಚೆ ನಡೆಸಿ, ಮತಕ್ಕೆ ಹಾಕಲು ನಿರ್ಧರಿಸಲಾಗಿತ್ತು.

ಸಿಎಎ ವಿರೋಧಿಸಿ ಯುರೋಪ್ ಸಂಸತ್‌ನಲ್ಲಿ ನಿರ್ಣಯ ಮಂಡನೆ ಮಾಡಿರುವುದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸದ್ಯದ ಮಾಹಿತಿಯಂತೆ ಮತಕ್ಕೆ ಹಾಕುವುದನ್ನು ಮುಂದಕ್ಕೆ ಹಾಕಲಾಗಿದೆ. ಗುರುವಾರ ಸಿಎಎ ಪರ ಚರ್ಚೆ ಮತ್ತು ಮತದಾನ ನಡೆಯುವುದಿಲ್ಲ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧವಾಗಿ ನಿರ್ಣಯ ಮಂಡನೆ ಮಾಡಿದ್ದಕ್ಕೆ ಭಾರತ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಇದು ಭಾರತ ಆಂತರಿಕ ವಿಚಾರ, ದೇಶದ ಎರಡೂ ಸದನಗಳಲ್ಲಿ ಚರ್ಚಿಸಿ, ಪ್ರಜಾಸತ್ಮಾಕ ರೀತಿಯಲ್ಲಿಯೇ ಶಾಸನ ಜಾರಿಗೊಳಿಸಲಾಗಿದೆ ಎಂದು ಭಾರತ ಹೇಳಿತ್ತು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಯುರೋಪ್ ಪಾರ್ಲಿಮೆಂಟ್ ಅಧ್ಯಕ್ಷರಿಗೆ ಸಿಎಎ ವಿರುದ್ಧ ಆರು ನಿರ್ಣಯ ಅಂಗೀಕರಿಸಿದ್ದಕ್ಕೆ ಪತ್ರ ಬರೆದಿದ್ದರು. ಭಾರತದ ವಾದಕ್ಕೆ ಈಗ ಯುರೋಪ್‌ನಲ್ಲಿ ಬೆಲೆ ಸಿಕ್ಕಿದೆ.
ಕಳೆದ ವಾರ ಯುರೋಪ್ ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಗುರುವಾರ ಅದರ ಬಗ್ಗೆ ಚರ್ಚೆ ನಡೆಸಿ ಮತಕ್ಕೆ ಹಾಕಲು ತೀರ್ಮಾನಿಸಲಾಗಿತ್ತು.












Click it and Unblock the Notifications