• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಾ ಚಂಡಮಾರುತ; ನ್ಯೂಯಾರ್ಕ್‌ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 2: ಇಡಾ ಚಂಡಮಾರುತದ ಪ್ರಭಾವದಿಂದಾಗಿ ನ್ಯೂಯಾರ್ಕ್ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಹೀಗಾಗಿ ನ್ಯೂಯಾರ್ಕ್ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಬುಧವಾರ ರಾತ್ರಿ ನ್ಯೂಯಾರ್ಕ್ ನಗರದಾದ್ಯಂತ ಭಾರೀ ಪ್ರಮಾಣದ ಮಳೆ ಸುರಿದಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ನದಿಯಂತಾಗಿದ್ದು, ನ್ಯೂಯಾರ್ಕ್ ನಗರ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಬಿಲ್ ಡಿ ಬ್ಲಿಸಿಯೊ, ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

'ಇದು ನ್ಯೂಯಾರ್ಕ್‌ನಲ್ಲಿ ಐತಿಹಾಸಿಕ ಹವಾಮಾನ ದುರಂತ' ಎಂದು ಹೇಳಿದ್ದಾರೆ.

ಪ್ರವಾಹ ಕಾರಣವಾಗಿ ಸಬ್ ವೇ ರೈಲು ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ಸಂಜೆಯಿಂದ ಐದು ಬಾರಿ ತುರ್ತು ಪರಿಸ್ಥಿತಿ ಎಚ್ಚರಿಕೆಯನ್ನು ನ್ಯೂಯಾರ್ಕ್ ನಗರಕ್ಕೆ ರಾಷ್ಟ್ರೀಯ ಹವಾಮಾನ ಸೇವೆ ನೀಡಿದೆ.

ಭಾರೀ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ನೂರಾರು ವಿಮಾನಗಳಿಗೆ ತಡೆಹಿಡಿಯಲಾಗಿದೆ. ರಸ್ತೆಗಳಲ್ಲಿ ವಾಹನ ಓಡಾಟವನ್ನು ನಿರ್ಬಂಧಿಸಲಾಗಿದೆ. ಇಡಾ ಚಂಡಮಾರುತ ಈಶಾನ್ಯ ಅಮೆರಿಕಕ್ಕೆ ಅಪ್ಪಳಿಸಿದ್ದು, ಇದ್ದಕ್ಕಿದ್ದಂತೆ ಭಾರೀ ಮಳೆ ಉಂಟಾಗಿದೆ. ಲೂಸಿಯಾನಾದಲ್ಲಿ ಚಂಡಮಾರುತ ಪ್ರಭಾವ ಜೋರಾಗಿದ್ದು, ಭಾರೀ ಹಾನಿಯುಂಟಾಗಿರುವುದಾಗಿ ತಿಳಿದುಬಂದಿದೆ.

ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸೂಚನೆ ಕೊಟ್ಟ IMD ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸೂಚನೆ ಕೊಟ್ಟ IMD

'ಎಲ್ಲರೂ ಸೂಕ್ತ ಆಶ್ರಯ ಪಡೆಯಿರಿ. ಬಿರುಗಾಳಿ ಅಪ್ಪಳಿಸಿದ್ದು, ವಸ್ತುಗಳು ಗಾಳಿಯಲ್ಲಿ ಹಾರಾಡುತ್ತಿವೆ. ಅಪಾಯಕಾರಿ ಸನ್ನಿವೇಶ ಎದುರಾಗಿದ್ದು, ಸೂಕ್ತ ಆಶ್ರಯ ಪಡೆದುಕೊಳ್ಳಿ. ಹೊರಗೆ ಬರಬೇಡಿ. ಕಿಟಕಿಗಳ ಸಮೀಪ ನಿಲ್ಲದಿರಿ' ಎಂದು ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

 New York Declares Emergency Over Flooding Due To Storm Ida

ದಿಢೀರ್ ಪ್ರವಾಹ ಸಂಭವಿಸುವ ಮುನ್ನೆಚ್ಚರಿಕೆಯನ್ನು ನಗರಕ್ಕೆ ಈ ಮುನ್ನ ನೀಡಲಾಗಿತ್ತು. ನಿವಾಸಿಗಳು ಎತ್ತರದ ಜಾಗದಲ್ಲಿರುವಂತೆ ಸೂಚಿಸಲಾಗಿತ್ತು. ಮಧ್ಯ ಅಟ್ಲಾಂಟಿಕದಿಂದ ದಕ್ಷಿಣದ ನ್ಯೂ ಇಂಗ್ಲೆಂಡ್‌ಗೆ ಮಾರಕ ಪ್ರವಾಹ ಅಪ್ಪಳಿಸಲಿದೆ ಎಂದು ರಾಷ್ಟ್ರ ಹವಾಮಾನ ಸೇವೆ ಎಚ್ಚರಿಕೆ ರವಾನಿಸಿತ್ತು. ಇದರ ಬೆನ್ನಲ್ಲೇ ಭಾರೀ ಮಳೆಯಾಗಿ, ಇಡೀ ಪ್ರದೇಶ ಜಲಾವೃತವಾಗಿದೆ.

ಅಮೆರಿಕದ ರಾಜಧಾನಿಯಿಂದ ಮೂವತ್ತು ಮೈಲಿ ಅಂತರದಲ್ಲಿರುವ ಅನ್ನಪೊಲಿಸ್‌ನಲ್ಲಿಯೂ ಭಾರೀ ಮಳೆ ಗಾಳಿಯಿಂದಾಗಿ ಮರಗಳು ಉರುಳಿಬಿದ್ದು ಅವಾಂತರ ಸೃಷ್ಟಿಯಾಗಿದೆ.

ಉತ್ತರಾಖಂಡದಲ್ಲಿ ಭಾರಿ ಮಳೆ, ಹಲವೆಡೆ ಭೂಕುಸಿತ, ಜನಜೀವನ ಅಸ್ತವ್ಯಸ್ಥಉತ್ತರಾಖಂಡದಲ್ಲಿ ಭಾರಿ ಮಳೆ, ಹಲವೆಡೆ ಭೂಕುಸಿತ, ಜನಜೀವನ ಅಸ್ತವ್ಯಸ್ಥ

ನ್ಯೂಜೆರ್ಸಿ, ನ್ಯೂಯಾರ್ಕ್‌ನ ದಕ್ಷಿಣ ಭಾಗಗಳಲ್ಲಿ ಭಾರೀ ಬಿರುಗಾಳಿ ಎಚ್ಚರಿಕೆ ರವಾನಿಸಲಾಗಿದೆ. ಅತಿ ಅಪಾಯಕಾರಿ ಹಾಗೂ ಮಾರಕ ಪ್ರವಾಹ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಈ ಪ್ರವಾಹದಲ್ಲಿ ಇಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ.

ಹಲವು ಅಂಶಗಳು ಪ್ರವಾಹಕ್ಕೆ ಕಾರಣವಾಗಿವೆ. ಜಾಗತಿಕ ತಾಪಮಾನ ಏರಿಕೆಯಂಥ ಹವಾಮಾನ ವೈಪರೀತ್ಯ ಭಾರೀ ಮಳೆಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
State of emergency has been declared in New York City after hit by record rainfall and flash flooding as a result of Storm Ida
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X