ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಜೀರಿಯಾದಲ್ಲಿ ಹೊಸ ಕೊರೊನಾ ರೂಪಾಂತರ ಪತ್ತೆ!

|
Google Oneindia Kannada News

ನೈರೋಬಿ, ಡಿಸೆಂಬರ್ 25: ಬ್ರಿಟನ್‌ನಲ್ಲಿ ಹೊಸ ಕೊರೊನಾವೈರಸ್ ಪತ್ತೆಯಾದ ಬೆನ್ನಲ್ಲೇ ಆಫ್ರಿಕನ್ ರಾಷ್ಟ್ರ ನೈಜೀರಿಯಾದಲ್ಲಿ ಕೊರೊನಾವೈರಸ್‌ನ ಮತ್ತೊಂದು ರೂಪಾಂತರವು ಕಂಡುಬಂದಿದೆ ಎಂದು ಆಫ್ರಿಕಾದ ಉನ್ನತ ಆರೋಗ್ಯ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾದ ಹೊಸ ರೂಪಾಂತರಗಳು ಕಂಡು ಬಂದ ನಂತರ, ನೈಜೀರಿಯಾದ ಸಾಂಕ್ರಾಮಿಕ ರೋಗದಲ್ಲಿ ಹೊಸ ರೂಂಪಾತರವು ಚಿಂತೆಗೀಡುಮಾಡಿದ್ದು, ಆದರೆ ಈ ಕುರಿತು ಹೆಚ್ಚಿನ ತನಿಖೆ ಅಗತ್ಯ ಎಂದಿದ್ದಾರೆ.

ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ!ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ!

''ಇದು ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಂತಹ ವೈರಸ್‌ನ ಪ್ರತ್ಯೇಕ ವಂಶಾವಳಿಯಾಗಿದೆ. ತನಿಖೆಗೆ ನಮಗೆ ಸ್ವಲ್ಪ ಸಮಯ ನೀಡಿ'' ಎಂದು ಆಫ್ರಿಕಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮುಖ್ಯಸ್ಥ ಜಾನ್ ನ್ಕೆನ್ಗಾಸೊಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

New Virus Variant Appears To Emerge In Nigeria

ಕೊರೊನಾವೈರಸ್ ಹೊರ ರೂಪಾಂತರವು ಎರಡು ಅಥವಾ ಮೂರು ಅನುವಂಶಿಕ ಅನುಕ್ರಮಗಳನ್ನು ಆಧರಿಸಿದೆ. ನೈಜೀರಿಯಾದಲ್ಲಿನ ರೂಪಾಂತರವು ಆಗಸ್ಟ್ 3 ಮತ್ತು ಅಕ್ಟೋಬರ್ 9 ರಂದು ಒಸುನ್ ರಾಜ್ಯದಲ್ಲಿ ಸಂಗ್ರಹಿಸಿದ ಎರಡು ರೋಗಿಗಳ ಮಾದರಿಗಳಲ್ಲಿ ಕಂಡುಬಂದಿದೆ ಎಂದು ಸಂಶೋಧನಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬ್ರಿಟನ್‌ನಲ್ಲಿ ಕಂಡುಬಂದಿರುವಂತಹ ರೂಪಾಂತರಕ್ಕಿಂತ ಭಿನ್ನವಾಗಿದ್ದು, ಇದರ ತ್ವರಿತ ಏರಿಕೆಯನ್ನು ನಾವು ಗಮನಿಸಿಲ್ಲ. ಜೊತೆಗೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಆರಂಭಿಕವಾಗಿ ಕಾಣಿಸುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Another new variant of the coronavirus appears to have emerged in Nigeria, Africa's top public health official said Thursday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X