ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಪ್ರಳಯಕ್ಕೆ ಹೊಸ ದಿನಾಂಕ ನಿಗದಿ, ನವೆಂಬರ್ 19!

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ನವೆಂಬರ್ 19ರಂದು ಪ್ರಪಂಚ ಪ್ರಳಯ | ಇಲ್ಲಿದೆ ಫುಲ್ ಡೀಟೇಲ್ಸ್ | Oneindia Kannada

    ಬೆಂಗಳೂರು, ಅಕ್ಟೋಬರ್ 28 : ನವೆಂಬರ್ 19, ಭಾನುವಾರ! ಇದು ಹಲವರ ಪಾಲಿಗೆ ಕ್ಯಾಲೆಂಡರ್ ಮೇಲಿರುವ ಒಂದು ಸಾಮಾನ್ಯ ಸಂಖ್ಯೆ, ಒಂದು ದಿನಾಂಕ ಮಾತ್ರ. ಜೋರಾಗಿ ಗಾಳಿಬೀಸಿ ಪಟಪಟ ಹಾರಿದರೆ ಆ ಒಂದು ದಿನದ ಪಟವೂ ಹಾರಿಹೋಗಲು ಎಷ್ಟು ಸಮಯ ಬೇಕು?

    ಆದರೆ, ಈ ದಿನ ಪ್ರಳಯದ ಮೇಲೆ ಅಪಾರ ನಂಬಿಕೆ ಇಟ್ಟವರಿಗೆ ಸಾಮಾನ್ಯ ದಿನವಾಗಿರಲಾರದು. ಏಕೆಂದರೆ, ಸೆಪ್ಟೆಂಬರ್ 23ರಂದು ಇಡೀ ವಿಶ್ವವೇ ಮುಳುಗಿಹೋಗುತ್ತದೆ ಎಂದು ಷರಾ ಬರೆದಿದ್ದ ಡೇವಿಡ್ ಮೇಡೆ ಎಂಬಾತ ಈಬಾರಿ ಪ್ರಳಯಕ್ಕೆ ಮತ್ತೊಂದು ದಿನಾಂಕವನ್ನು ನಿಗದಿ ಪಡಿಸಿದ್ದಾರೆ. ಅದೇ ನವೆಂಬರ್ 19.

    ಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ

    ನವೆಂಬರ್ 19ರಂದು ಭಾರೀ ಭೂಕಂಪಗಳಾಗಿಬಿಡುತ್ತವೆ, ಸುನಾಮಿಗಳೆದ್ದುಬಿಡುತ್ತವೆ, ಅಗ್ನಿಪರ್ವತ ಸಿಡಿಯುತ್ತದೆ, ಎಂದೂ ಕಂಡಿರದಂಥ ಅಗ್ನಿ ಅವಘಡ ಸಂಭವಿಸಿಬಿಡುತ್ತದೆ, ಬಿರುಗಾಳಿಯೆದ್ದು ರಾತ್ರೋರಾತ್ರಿ ಎಲ್ಲ ಸರ್ವನಾಶವಾಗಿಬಿಡುತ್ತದೆ ಎಂಬಿತ್ಯಾದಿಗಳನ್ನೇನೂ ಆತ ಹೇಳಿಲ್ಲ. ಆತ ಕೊಟ್ಟಿರುವುದು ಆ ದಿನಾಂಕ ಮಾತ್ರ.

    ಅಷ್ಟರಲ್ಲಿ, ದೇವರು ದಿಂಡರುಗಳಲ್ಲಿ ಅಪಾರ ನಂಬಿಕೆಯಿಟ್ಟಿರುವ ಹಲವಾರು ಪ್ರಳಯವಾದಿಗಳು, ಚಕಚಕನೆ ಟೆಲಿಸ್ಕೋರ್ ಹಿಡಿದು ವಿಜ್ಞಾನಿಗಳು ಬಿಟ್ಟಸ್ಥಳ ತುಂಬಲು ಆರಂಭಿಸಿದ್ದಾರೆ. ಭಯಂಕರ ಭೂಕಂಪಗಳು ಭೂಮಿಯನ್ನು ತಲ್ಲಣಿಸುವಂತೆ ಮಾಡುತ್ತವೆ ಎಂದು ಭವಿಷ್ಯ ನುಡಿಯಲು ಆರಂಭಿಸಲಾಗಿದೆ.

    ಕಪ್ಪು ನಕ್ಷತ್ರವೆಂದೇ ಖ್ಯಾತಿ ಗಳಿಸಿರುವ ನಿಬಿರು

    ಕಪ್ಪು ನಕ್ಷತ್ರವೆಂದೇ ಖ್ಯಾತಿ ಗಳಿಸಿರುವ ನಿಬಿರು

    ಕಪ್ಪು ನಕ್ಷತ್ರವೆಂದೇ ಖ್ಯಾತಿ ಗಳಿಸಿರುವ ನಿಬಿರು ಎಂಬ ಆಕಾಶಕಾಯ ನವೆಂಬರ್ 19ರ ಆಸುಪಾಸಿನಲ್ಲಿ ನಮ್ಮ ಸೌರಮಂಡಳದ ಬಳಿಯಿಂದ ಹಾದುಹೋಗಲಿದ್ದು, ಇದರಿಂದ ಭೂಮಿಯ ಹಲವಾರು ಭಾಗಗಳಲ್ಲಿ ಭೂಮಿ ಅದುರುತ್ತದೆ, ಸುನಾಮಿಗಳೇಳುತ್ತವೆ ಎಂಬ ಸುದ್ದಿಗಳು ಹರಿದಾಡಲು ಆರಂಭಿಸುತ್ತಿವೆ.

    ಭೂಕಂಪನದಂಥ ಅವಘಡ ಸಂಭವಿಸುವ ಸಾಧ್ಯತೆ

    ಭೂಕಂಪನದಂಥ ಅವಘಡ ಸಂಭವಿಸುವ ಸಾಧ್ಯತೆ

    ಈ ಬಾರಿ ನಿಬಿರು ಎಂಬ ಆಕಾಶಕಾಯ ಭೂಮಿಗೇನೂ ಅಪ್ಪಳಿಸುವುದಿಲ್ಲ. ಆದರೆ, ಅದು ಭೂಮಿ ಮತ್ತು ಸೂರ್ಯನೊಂದಿಗೆ ನೇರವಾದ ರೇಖೆಯಲ್ಲಿ ಇರುವುದರಿಂದ ಭೂಕಂಪನದಂಥ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಮೇಡೆ ಸುದ್ದಿಯನ್ನು ಅಪ್ಪಳಿಸಿದ್ದಾನೆ.

    ಕಲ್ಪನಾಲೋಕದ ಫೇರಿಟೇಲ್ ಕಥೆಗಳಿದ್ದ ಹಾಗೆ

    ಕಲ್ಪನಾಲೋಕದ ಫೇರಿಟೇಲ್ ಕಥೆಗಳಿದ್ದ ಹಾಗೆ

    ವಿಜ್ಞಾನಿಗಳು ಹೇಳುವುದೇ ಬೇರೆ. ಈ ನಿಬಿರು ಸುತ್ತ ಹೆಣೆಯಲಾಗಿರುವ ಕಥೆಗಳೆಲ್ಲ ಕಲ್ಪನಾಲೋಕದ ಫೇರಿಟೇಲ್ ಕಥೆಗಳಿದ್ದ ಹಾಗೆ. ಇದಕ್ಕೆ ತಲೆಬುಡ ಬಾಲಗಳೇ ಇರುವುದಿಲ್ಲ. ಯಾವಾಗಲೂ ಭ್ರಮಾಲೋಕದಲ್ಲಿ ಪರಿಭ್ರಮಣ ಮಾಡುವವರಿಗೆ ಈ ಥಿಯರಿಯಿಂದ ಒಂದು ಹೊಸ ಕಥೆ ಸಿಕ್ಕಂತಾಗಿದೆಯಷ್ಟೆ.

    ಅಮೆರಿಕ, ಕೆನಡಾಗಳಲ್ಲಿ ಚಂಡಮಾರುತ

    ಅಮೆರಿಕ, ಕೆನಡಾಗಳಲ್ಲಿ ಚಂಡಮಾರುತ

    ಕ್ರಾಫ್ಟ್ ಎಂಬಾತ ಈ ಪ್ರಳಯಕ್ಕೆ ಸಂಬಂಧಿಸಿದಂತೆ ಬರೆದ ಲೇಖನದಲ್ಲಿ, ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ಅದರುತ್ತಿರುವುದು, ಚಂಡಮಾರುತಗಳು ಅಪ್ಪಳಿಸುತ್ತಿರುವುದು, ಹೆಚ್ಚಾಗಿ ಅಮೆರಿಕ, ಕೆನಡಾ ಪ್ರದೇಶಗಳಲ್ಲಿ ಸಂಭವಿಸುತ್ತಿರುವುದು ಮುಂಬರುವ ಪ್ರಳಯದ ಮುನ್ಸೂಚನೆಯಾಗಿದೆ ಎಂದು ವಿವರಿಸಲಾಗಿದೆ.

    ಪ್ರಳಯದ ಬಗ್ಗೆ ಚರ್ಚೆ ಇದು ಮೊದಲೇನಲ್ಲ

    ಪ್ರಳಯದ ಬಗ್ಗೆ ಚರ್ಚೆ ಇದು ಮೊದಲೇನಲ್ಲ

    ಇಂಥಹ ಪ್ರಳಯದ ಬಗ್ಗೆ ಚರ್ಚೆ ನಡೆಯುತ್ತಿರುವುದು ಇದು ಮೊದಲೇನಲ್ಲ. 2003ರಲ್ಲಿಯೇ ಪ್ರಳಯದ ಸುದ್ದಿ ಬಿರುಗಾಳಿ ಎಬ್ಬಿಸಿ, ಜನರ ಹೃದಯ ಬಡಿತ ಹೆಚ್ಚಿಸಿ ನಂತರ ತಣ್ಣಗಾಗಿತ್ತು. ಸೆಪ್ಟೆಂಬರ್ 23ರ ಪ್ರಳಯ ದಿನವೂ ಕೂಡ ಯಾವುದೇ ಮುನ್ಸೂಚನೆ ನೀಡದಂತೆ ಇತಿಹಾಸದ ಪುಟಗಳನ್ನು ಸೇರಿದೆ.

    ಬಜ್ಜಿ ಬೋಂಡಾ ರೆಡಿಯಾಗಿಟ್ಟುಕೊಳ್ಳಿ

    ಬಜ್ಜಿ ಬೋಂಡಾ ರೆಡಿಯಾಗಿಟ್ಟುಕೊಳ್ಳಿ

    ನವೆಂಬರ್ 19 ಹತ್ತಿರ ಬರುತ್ತಿದ್ದಂತೆ, ನಮ್ಮ ಟಿವಿ ವಾಹಿನಿಗಳಲ್ಲಿ ಮಾತ್ರ ರಸವತ್ತಾದ ವ್ಯಾಖ್ಯಾನಗಳನ್ನು ನಿರೀಕ್ಷಿಸಬಹುದು. ಚಳಿಗಾಲ ಕೂಡ ಆರಂಭವಾಗಿರುವುದರಿಂದ ಬಜ್ಜಿ, ಬೋಂಡಾಗಳನ್ನು ರೆಡಿಯಾಗಿಟ್ಟುಕೊಂಡು ಕಾಫಿ ಚಹಾ ಹೀರುತ್ತ ಇವುಗಳ ಕುರಿತ ಚರ್ಚೆಯನ್ನು ಮನಸೋಇಚ್ಛೆ ಕೇಳಿ ಆನಂದಿಸಬಹುದು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    David Meade has predicted that Doomsday will occure on November 19, Saturday. He says the Nibiru, black star will come in alignment with earth and the sun, causing huge earthquakes in many regions. Some have termed it as fairytale by a mad person.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more