Kim Jong Un: ಸರ್ವಾಧಿಕಾರಿ ಕಿಮ್ ನಾಡಲ್ಲಿ ಜಡೆ ಜಗಳ ಬಲು ಜೋರು!
ಕಿಮ್ ಜಾಂಗ್ ಉನ್ ಅಂದ್ರೆ ಸರ್ವಾಧಿಕಾರಿ, ಕ್ರೂರತ್ವಕ್ಕೆ ಮತ್ತೊಂದು ಹೆಸರೇ ಈ ಕಿಮ್ಮಣ್ಣ ಅನ್ನೋ ಆರೋಪ ಇದೆ. ಅದರಲ್ಲೂ ತನ್ನ ಮಾತು ಕೇಳದ ಪ್ರತಿಯೊಬ್ಬರನ್ನೂ ಕೊಲೆ ಮಾಡಿ ಬಿಸಾಕುವುದು, ಮೊಸಳೆ & ನಾಯಿಗಳಿಗೆ ಆಹಾರವಾಗಿ ನೀಡುವುದು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್‌ಗೆ ಕಾಯಿಲೆ ಆಗಿದೆ. ಆದರೆ ಇಂತಿಪ್ಪ ಕಿಮ್ ಜಾಂಗ್ ಉನ್‌ಗೆ ಕೂಡ ಜಡೆ ಜಗಳ ದೊಡ್ಡ ಸಮಸ್ಯೆ ತಂದಿಟ್ಟಿದೆ ಅಂದ್ರೆ ನೀವು ಕೂಡ ನಂಬಲೇಬೇಕು!
ಅಂದಹಾಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ತನವನ್ನು ಮುಂದುವರಿಸಿಕೊಂಡು ಬಂದಿರುವ ಕಿಮ್ ಜಾಂಗ್ ಉನ್, ಇಡೀ ಜಗತ್ತಿನಲ್ಲಿ ಪರಮಾಣು ಯುದ್ಧದ ಭಯ ಹುಟ್ಟು ಹಾಕಿದ್ದಾನೆ. ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಹಲವು ದೇಶಗಳನ್ನು ಎದುರು ಹಾಕಿಕೊಂಡಿರುವ ಕಿಮ್ ಪದೇ ಪದೇ ಜಗತ್ತಿನ ಗಮನ ಸೆಳೆಯುತ್ತಿರುತ್ತಾನೆ. ಇಂತಿಪ್ಪ ಕಿಮ್ ಜಾಂಗ್ ಉನ್‌ಗೆ ಒಬ್ಬಳು ತಂಗಿ ಕೂಡ ಇದ್ದು, ಆಕೆಯ ಹೆಸರು ಕಿಮ್ ಯೋ ಜಾಂಗ್. ಇವಳೇ ಮುಂದೆ ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. ಆದರೆ ಆಕೆಯನ್ನು ಮೂಲೆಗುಂಪು ಮಾಡಿದ್ದು ಯಾವ ಕಾರಣಕ್ಕೆ ಗೊತ್ತಾ?

ಸರ್ವಾಧಿಕಾರಿಗೆ ಜಡೆ ಜಗಳದ ಕಾಟ!
ಹೌದು, ಯಾವ ಸರ್ವಾಧಿಕಾರಿ ಆಗಿದ್ದರೇನು & ಅದೆಷ್ಟು ಕ್ರೂರತನ ಇದ್ದರೇನು. ಹೆಂಡತಿಯ ಎದುರು ತಲೆ ತಗ್ಗಿಸಿ ನಡೆಯಬೇಕು ಎಂಬುದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿಚಾರದಲ್ಲಿ ನಿಜವಾಗಿದೆ. ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಎಂದು ಯಾವಾಗ ಜಗತ್ತು ಆತನ ತಂಗಿಯನ್ನ ಬಿಂಬಿಸಲು ಶುರು ಮಾಡಿತ್ತೋ, ಆ ನಂತರ ದೊಡ್ಡ ಗಲಾಟೆಯೇ ಕಿಮ್ ಕುಟುಂಬದಲ್ಲಿ ನಡೆದಿದೆ. ಅಲ್ಲದೆ ತಂಗಿಯ ಬದಲಾಗಿ ಮಗಳನ್ನು ಬೆಳೆಸಬೇಕು ಎಂಬ ಆಜ್ಞೆ ಕಿಮ್ ಜಾಂಗ್ ಉನ್ ಹೆಂಡತಿಯ ಕಡೆಯಿಂದ ಬಂದಿದೆಯಂತೆ.
ಹೀಗಾಗಿ ಕೊನೆಗೆ ಕಿಮ್ ಜಾಂಗ್ ಉನ್ ತಂಗಿ ಕಿಮ್ ಯೋ ಜಾಂಗ್‌ನ ಮೂಲೆಗೆ ತಳ್ಳಿ ಪದೇ ಪದೇ ತನ್ನ ಜೊತೆಯಲ್ಲಿ ಮಗಳನ್ನು ಸುತ್ತಾಡಿಸಿ, ಇಡೀ ಜಗತ್ತಿಗೆ ತನ್ನ ಮಗಳನ್ನು ಕಿಂಗ್ ಜಾಂಗ್ ಉನ್ ಪರಿಚಯ ಮಾಡಿಕೊಟ್ಟಿದ್ದಾನೆ ಎನ್ನಲಾಗಿದೆ. ಮತ್ತೊಂದು ಕಡೆ ಈ ವಿಚಾರದಲ್ಲಿ ಅಂದ್ರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಕುಟುಂಬದಲ್ಲಿ ದೊಡ್ಡ ಬಿರುಕು ಮೂಡಿದೆ ಎಂದು ಆರೋಪ ಮಾಡಲಾಗಿದೆ. ಇದು ಶತ್ರು ದೇಶಗಳಿಗೆ ಸಹಾಯವನ್ನ ಮಾಡುವ ನಿರೀಕ್ಷೆ ಇದೆ.












Click it and Unblock the Notifications