ರಾಯಲ್ ಪ್ರಿನ್ಸೆಸ್ ಗೆ ಅಜ್ಜಿ ಡಯಾನಾ ಹೆಸರು
ಲಂಡನ್, ಮೇ.4: ಬ್ರಿಟನ್ ರಾಜಮನೆತನಕ್ಕೆ ಹೊಸ ಹರ್ಷ ತಂದ ಹೊಸ ಪ್ರಿನ್ಸೆಸ್ ಗೆ ಮುದ್ದಾದ ಹೆಸರಿಡಲಾಗಿದೆ. ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ ಮಿಡ್ಲೆಟನ್ ದಂಪತಿಗೆ ಹೆಣ್ಣು ಮಗುವಿಗೆ ಅಜ್ಜಿ ಡಯಾನಾ ಹೆಸರಿಟ್ಟು ನಾಮಕರಣ ಮಾಡಲಾಗಿದೆ.
ರಾಯಲ್ ಫ್ಯಾಮಿಲಿಯ ಹೊಸ ಸದಸ್ಯೆ ಹೆಸರು ಶಾರ್ಲೊಟ್ ಎಲಿಜಬೆತ್ ಡಯಾನಾ ಎಂದು ಕೆನ್ಸಿಂಗ್ಟನ್ ಪ್ಯಾಲೇಸ್ ಸೋಮವಾರ ಘೋಷಿಸಿದೆ. ರಾಣಿ ಎಲಿಜಬೆತ್ ಹಾಗೂ ಪ್ರಿನ್ಸೆನ್ ಡಯಾನಾ ಹೆಸರನ್ನು ಮಗುವಿಗೆ ಇಡಬೇಕು ಎಂದು ಕೇಟ್ ಮಿಡ್ಲೆಟನ್ ಆಸೆಪಟ್ಟ ಹಿನ್ನೆಲೆಯಲ್ಲಿ ಪ್ರಿನ್ಸ್ ವಿಲಿಯಮ್ ತಮ್ಮ ಪುತ್ರಿಗೆ ಅದೇ ಹೆಸರನ್ನಿಟ್ಟಿದ್ದಾರೆ. [ಪುಟ್ಟ ಪ್ರಿನ್ಸೆಸ್ ಗೆ ಸ್ವಾಗತ, ಬ್ರಿಟನ್ ರಾಜಮನೆತನದಲ್ಲಿ ಹರ್ಷ]

ನಾಮಕರಣಕ್ಕೂ ಮುನ್ನ ಸ್ಯಾಂಡ್ರಿಘಂನಲ್ಲಿ ರಾಜ ಪರಿವಾರದೊಡನೆ ಕ್ವೀನ್ ಎಲಿಜಬೆತ್ ರನ್ನು ಭೇಟಿ ಮಾಡಿ ಬಂದಿದ್ದರು. ವಿಶಿಷ್ಟ ಹೆಸರನ್ನು ಇಡುವ ಉದ್ದೇಶದಿಂದ ಎರಡು ದಿನಗಳ ಚರ್ಚೆ ನಡೆಸಿ ಹೆಸರನ್ನು ಆಯ್ಕೆ ಮಾಡಲಾಗಿದೆ.
ಪ್ರಿನ್ಸ್ ಚಾರ್ಲ್ಸ್ ಅವರ ಹೆಸರಿನ ಸ್ತ್ರೀ ವಾಚಕ ಶಬ್ದ ಶಾರ್ಲೆಟ್(Charlotte) ಪದ, ಅಜ್ಜ ಚಾರ್ಲ್ಸ್ ಹೆಸರು, ಎಲಿಜಬೆತ್ ರಾಣಿ ಹೆಸರು,ಅಜ್ಜಿ ಡಯಾನಾ ಹೆಸರು ಎಲ್ಲವನ್ನು ಸೇರಿಸಿ Charlotte Elizabeth Diana ಎಂದು ಇಡಲಾಗಿದೆ.
The Duke and Duchess of Cambridge are delighted to announce that they have named their daughter Charlotte Elizabeth Diana.
— Kensington Palace (@KensingtonRoyal) May 4, 2015 ಪ್ರಿನ್ಸ್ ವಿಲಿಯಮ್ ಪತ್ನಿ ಕೇಟ್(33) ಶನಿವಾರ ಲಂಡನ್ ನ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 8.34 (BST)ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ 3 ಗಂಟೆಯೊಳಗೆ ಕೇಟ್ ಗೆ ಹೆರಿಗೆಯಾಗಿತ್ತು. ಪ್ರಿನ್ಸ್ ಮತ್ತು ಕೇಟ್ ಅವರ ಹೆಣ್ಣು ಮಗು 8 ಪೌಂಡ್ 3 ಔನ್ಸ್ (3.7ಕೆಜಿ) ತೂಕ ಹೊಂದಿದೆ.
ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ 2011ರ ಏಪ್ರಿಲ್ ತಿಂಗಳಿನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 2013ರ ಜುಲೈನಲ್ಲಿ ಇದೇ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಕೇಟ್ ಗಂಡು ಮಗು(ಪ್ರಿನ್ಸ್ ಜಾರ್ಜ್)ವಿಗೆ ಜನ್ಮ ನೀಡಿದ್ದರು. (ಐಎಎನ್ಎಸ್)












Click it and Unblock the Notifications