ಡ್ರಗ್ಸ್ ದಂಧೆ ಕೇಸ್ : ಉದ್ಯಮಿ ನೆಸ್ ವಾಡಿಯಾಗೆ 2 ವರ್ಷ ಶಿಕ್ಷೆ?
ಟೋಕಿಯಾ, ಏಪ್ರಿಲ್ 30: ಉದ್ಯಮಿ ನೆಸ್ ವಾಡಿಯಾ ಹಾಗೂ ಡಿಂಪಲ್ ಕೆನ್ನೆಯ ನಟಿ ಪ್ರೀತಿ ಜಿಂಟಾ ನಡುವಿನ ಮುನಿಸು, ಕಿತ್ತಾಟ ಐಪಿಎಲ್ ಅಂಗಳದಿಂದ ಕೋರ್ಟ್ ಮೆಟ್ಟಿಲೇರಿ ಇತ್ಯರ್ಥವಾದ ಬಳಿಕ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ವಾಡಿಯಾ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ವರದಿಗಳ ಪ್ರಕಾರ, ನೆಸ್ ವಾಡಿಯಾ ಅವರು ಮಾರ್ಚ್ ತಿಂಗಳಿನಲ್ಲಿ 25ಗ್ರಾಂನಷ್ಟು ಕ್ಯಾನಬೀಸ್ ರೆಸಿನ್ ಹೊಂದಿದ್ದ ಕಾರಣಕ್ಕೆ ಅವರಿಗೆ ಶಿಕ್ಷೆಯಾಗಿದೆ. ಮಾರ್ಚ್ ತಿಂಗಳಿನಲ್ಲೇ ಜಪಾನ್ ನಲ್ಲಿ ಬಂಧನವಾಗಿದ್ದು, ಈ ಬಗ್ಗೆ ತಡವಾಗಿ ತಿಳಿದು ಬಂದಿದೆ.
ನಸ್ಲಿ ವಾಡಿಯಾ ಅವರ ವಾಡಿಯಾ ಸಮೂಹ ಸಂಸ್ಥೆ ಮಾಲೀಕರಾದ ನೆಸ್ ವಾಡಿಯಾ ಅವರು ಹೊಕೈಡೋ ದ್ವೀಪದ ಚಿಂಟೋಸ್ ನ್ಯೂ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದು, ನಂತರ ವಿಚಾರಣೆ ನಡೆಸಿ ಬಂಧಿಸಲಾಗಿದೆ. ವಾಡಿಯಾ ಸಮೂಹ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಬಾಂಬೈ ಡೈಯಿಂಗ್, ಬಾಂಬೆ ಬರ್ಮನ್ ಟ್ರೆಂಡಿಂಗ್, ಬಿಸ್ಕಟ್ ಜೈಂಟ್ ಬ್ರಿಟಾನಿಯಾ ಇಂಡಸ್ಟ್ರೀಸ್ ಸೇರಿದಂತೆ ಹಲವು ಸಂಸ್ಥೆಗಳನ್ನು ಹೊಂದಿದ್ದು, 13.1 ಬಿಲಿಯನ್ ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.












Click it and Unblock the Notifications