Get Updates
Get notified of breaking news, exclusive insights, and must-see stories!

ನೇಪಾಳ ಸಂಸತ್ ವಿಸರ್ಜನೆ; 2021ರಲ್ಲಿ ಎರಡು ಹಂತದಲ್ಲಿ ಚುನಾವಣೆ

ಕಠ್ಮಂಡು, ಡಿ. 20: ನೇಪಾಳಿ ಕಮ್ಯೂನಿಸ್ಟ್ ಪಕ್ಷ(ಎನ್‌ಸಿಪಿ) ಬಿಟ್ಟು, ಬಂಡಾಯಗಾರ ಮಾವೋವಾದಿಗಳನ್ನು ಓಲೈಸುತ್ತಾ ಬಂದ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರು ಸ್ವಪಕ್ಷದ ಬೆಂಬಲ ಕಳೆದುಕೊಂಡಿದ್ದಾರೆ. ಡಿಸೆಂಬರ್ 20ರಂದು ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ನೇಪಾಳ ಸಂಸತ್ ವಿಸರ್ಜನೆ ಮಾಡಲು ಅಧಿಕೃತ ಸೂಚನೆ ಬಂದಿದೆ.

ಸಮಯ 5:15 ಅಪ್ಡೇಟ್: 2021ರಲ್ಲಿ ನೇಪಾಳ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದ್ದು, ಎರಡು ಹಂತದಲ್ಲಿ ಏಪ್ರಿಲ್ 30 ಹಾಗೂ ಮೇ 10 ರಂದು ನಡೆಯಲಿದೆ ಎಂದು ರಾಷ್ಟ್ರಾಧ್ಯಕ್ಷರ ಕಚೇರಿ ಪ್ರಕಟಿಸಿದೆ.

2017ರಲ್ಲಿ ನೇಪಾಳ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ 165ರಲ್ಲಿ 91 ಸ್ಥಾನಗಳನ್ನು ಗೆದ್ದುಕೊಂಡು ಭರ್ಜರಿ ಜಯ ದಾಖಲಿಸಿತ್ತು. ಈ ಜಯದೊಂದಿಗೆ ನೇಪಾಳದಲ್ಲಿ ರಾಜಕೀಯ ಸ್ಥಿರತೆಯ ಆಸೆ ಮತ್ತೆ ಚಿಗುರೊಡೆದಿತ್ತು. ಆದರೆ, ಆಡಳಿತರೂಢ ಎನ್‌ಸಿಪಿಯಲ್ಲೇ ಓಲಿ ವಿರೋಧಿಗಳು ಹೆಚ್ಚಳವಾಗಿದ್ದು, ಅಂತಿಮ ಹಂತ ತಲುಪಿದೆ. ಹೀಗಾಗಿ ಅಗತ್ಯ ಬೆಂಬಲ ಇಲ್ಲದ ಕಾರಣ ಸಂಸತ್ ವಿಸರ್ಜನೆಗೆ ಮನವಿ ಮಾಡಿ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

ಓಲಿ ಅವರು ಸುಗ್ರೀವಾಜ್ಞೆ ಹೊರಡಿಸಿ ಡಿಸೆಂಬರ್ 15ರಂದು ಜಾರಿಗೆ ತಂದ ಸಾಂವಿಧಾನಿಕ ಕಾಯ್ದೆ(Constitutional Council Act)ಗೆ ಎನ್‌ಸಿಪಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಷ್ಟ್ರಾಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಕಾಯ್ದೆಯನ್ನು ಅಂಗೀಕರಿಸಿದ್ದರು.

Nepal Prime Minister K P Oli recommends dissolution of Parliament: Media report

''ಓಲಿ ಅವರು ಕೊರೊನಾವೈರಸ್, ಪಕ್ಷ ಎರಡನ್ನು ನಿಭಾಯಿಸುವಲ್ಲಿ ಸೋತಿದ್ದಾರೆ. ಪಕ್ಷದ ಮುಂದಿನ ನಿರ್ಧಾರ ಶೀಘ್ರವೇ ಪ್ರಕಟಿಸಲಾಗುತ್ತದೆ'' ಎಂದು ಎನ್‌ಸಿಪಿಯ ಕೇಂದ್ರ ಸಮಿತಿಯ ಸದಸ್ಯ ಬಿಷ್ನು ರಿಜಾಲ್ ಅವರು ಪ್ರತಿಕ್ರಿಯಿಸಿದ್ದಾರೆ.

ನೇಪಾಳ ಸಂಸತ್ತಿನಲ್ಲಿ 275 ಸ್ಥಾನಗಳಿದ್ದು ಈ ಪೈಕಿ 165 ಸದಸ್ಯರನ್ನು ನೇರವಾಗಿ ಜನರೇ ಆಯ್ಕೆ ಮಾಡುತ್ತಾರೆ. ಉಳಿದ 110 ಜನರನ್ನು ಪರೋಕ್ಷವಾಗಿ ಆಯ್ಕೆ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+