ನೇಪಾಳದಲ್ಲಿ ಜಲಪ್ರಳಯ: 1,643 ಮಕ್ಕಳ ಜೀವ ರಕ್ಷಿಸಿದ ಶಿಕ್ಷಕ: ಸಣ್ಣ ಎಚ್ಚರಿಕೆಯಿಂದ ನಡೆದ ಸಾಹಸಮಯ ರಕ್ಷಣೆ

ನೇಪಾಳದಲ್ಲಿ ಈಚೆಗೆ ಸಂಭವಿಸಿದ ಭೀಕರ ಜಲಪ್ರಳಯ - ಪ್ರವಾಹದಲ್ಲಿ ನೂರಾರು ಜನ ಮೃತಪಟ್ಟಿದ್ದಾರೆ. ಆದರೆ, ನೇಪಾಳದಲ್ಲಿ ಪ್ರವಾಹದ ಸಮಯದಲ್ಲಿ ಅಲ್ಲಿನ ಶಿಕ್ಷಕ - ಪ್ರಿನ್ಸಿಪಾಲ್‌ವೊಬ್ಬರು 1,643 ಮಕ್ಕಳ ಜೀವ ಉಳಿಸಿದ್ದಾರೆ. ನೇಪಾಳದ ತ್ರಿಶೂಲಿ ಕಣಿವೆಯಲ್ಲಿ ಪ್ರವಾಹದ ದಿನ ಬೆಳಿಗ್ಗೆ ಇಲ್ಲಿನ ಶಾಲೆಯೊಂದರಲ್ಲಿ ರಾಜೇಂದ್ರ ದಾವಡಿ ಎನ್ನುವವರು ಆ ಶಾಲೆಯ ಮಕ್ಕಳನ್ನು ಪ್ರವಾಹದ ಕೂಪದಿಂದ ಕಾಪಾಡಿದ್ದಾರೆ.

ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಮಾಧ್ಯಮಿಕ ಶಾಲೆಯ 47 ವರ್ಷದ ಶಿಕ್ಷಕ ಮತ್ತು ಪ್ರಾಂಶುಪಾಲರಾಗಿರುವ ರಾಜೇಂದ್ರ ದಾವಡಿ ಅವರು ಪ್ರವಾಹದ ದಿನ ಬೆಳಿಗ್ಗೆ 9.20ಕ್ಕೆ ಸ್ನೇಹಿತರೊಬ್ಬರು ಎಚ್ಚರಿಕೆ ನೀಡಿದರು. ಅವರು ಹಳ್ಳಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಅಲ್ಲದೆ ನದಿಯಿಂದ ಇಡೀ ಹಳ್ಳಿಯೇ ಆವೃತವಾಗಿದೆ. ಬೇಗ ನೀನು ಇರುವ ಜಾಗದಿಂದ ಓಡಿ ಹೋಗು ಎಂದು ಪ್ರಿನ್ಸಿಪಾಲ್‌ಗೆ ಎಚ್ಚರಿಕೆ ನೀಡಿದ್ದರು.

Nepal Flood


ಈ ಸಂದರ್ಭದಲ್ಲಿ ರಾಜೇಂದ್ರ ಅವರು ಪ್ರವಾಹ ಪೀಡಿತ ನುವಕೋಟ್‌ನಲ್ಲಿರುವ ಮೂರು ಅಂತಸ್ತಿನ ಶಾಲೆಯಲ್ಲಿದ್ದರು. ಈ ಶಾಲೆಯಲ್ಲಿ 1,643 ಮಕ್ಕಳಿದ್ದರು. ಹಿಮನದಿ ಕುಸಿತದಿಂದ ಉಂಟಾದ ಹಠಾತ್ ಪ್ರವಾಹವು ಪರ್ವತ ನದಿ ವ್ಯವಸ್ಥೆಗಳನ್ನು ಹರಿದು, ನೇಪಾಳದಲ್ಲಿ 700 ಕ್ಕೂ ಹೆಚ್ಚು ಜನರು ಮತ್ತು ಟಿಬೆಟ್‌ನಲ್ಲಿ 16 ಜನ ಸಾವನ್ನಪ್ಪಿದ್ದಾರೆ. ಆದರೆ, ಮುಖ್ಯ ಶಿಕ್ಷಕರ ಮುಂಜಾಗ್ರತಾ ಕ್ರಮದಿಂದ 1,643 ಮಕ್ಕಳನ್ನು ಉಳಿಸಿದ್ದಾರೆ.

ಪ್ರವಾಹದಲ್ಲಿ ಶಾಲೆ ಅಪಾಯದಿಂದ ಪಾರಾಗಿದೆ ಎಂದು ದಾವಡಿ ನಂಬಿದ್ದರು. ವರದಿಯ ಪ್ರಕಾರ, ಮೂರು ಅಂತಸ್ತಿನ ಕಾಂಕ್ರೀಟ್ ಕಟ್ಟಡವು ನದಿಯಿಂದ ಸುಮಾರು 60 ಮೀಟರ್ ಎತ್ತರದಲ್ಲಿದ್ದು, ಗ್ರಾಮವು ಪೂರ್ವ ದಂಡೆಗೆ ಸಂಪರ್ಕಿಸುವ ಉಕ್ಕಿನ ಸೇತುವೆಯ ಮಟ್ಟದಲ್ಲಿತ್ತು. ನಂತರ ಒಬ್ಬ ಪೋಷಕರು ನೀರಿನ ಮಟ್ಟ ವೇಗವಾಗಿ ಏರುತ್ತಿದೆ ಎಂದು ಎಚ್ಚರಿಸಲು ಓಡಿ ಬಂದರು.

ರಾಜೇಂದ್ರ ಅವರು ಶಾಲೆಯ ಗಂಟೆಯನ್ನು ಬಾರಿಸಿ ಶಿಕ್ಷಕರಿಗೆ ಮಕ್ಕಳನ್ನು ತಮ್ಮ ತರಗತಿಗಳಿಂದ ಹೊರಗೆ ಕರೆದೊಯ್ಯುವಂತೆ ಹೇಳಿದರು. ಅವರು ಶಾಲಾ ಬಸ್ ಚಾಲಕರನ್ನು ಕರೆದು ಒಬ್ಬರನ್ನು ಹೊರತುಪಡಿಸಿ ಉಳಿದವರನ್ನು ಹಿಂತಿರುಗಿಸಲು ಕೇಳಿಕೊಂಡರು. ಆ ಹೊತ್ತಿಗೆ, ಸೇತುವೆ ದಾಟುವಾಗ ಅವರು ಸಂಪರ್ಕಿಸಲು ಸಾಧ್ಯವಾಗದ ಬಸ್ ಅನ್ನು ಗಮನಿಸಿದರು. ಇಷ್ಟೆಲ್ಲ ನಡೆಯುವ ಸಂದರ್ಭದಲ್ಲಿ ಮಕ್ಕಳು ತಾವು ಅಪಾಯದಲ್ಲಿದ್ದೇವೆ ಎನ್ನುವುದು ಅರಿತುಕೊಳ್ಳಲು ಪ್ರಾರಂಭಿಸಿದ್ದರು. ಒಬ್ಬ ಹುಡುಗಿ ಭಯಭೀತಳಾಗಿದ್ದಳು ಆಕೆಯನ್ನು ಮೋಟಾರ್ ಸೈಕಲ್‌ನಲ್ಲಿ ಕೂರಿಸಲಾಯಿತು. ಇತರರು ಓಡಿಹೋದರು ರಾಜೇಂದ್ರ ಅವರು ಹಿಂದೆಯೇ ಹಿಂಬಾಲಿಸಿದರು ಎಂದು ಟೈಮ್ಸ್ ವರದಿ ಮಾಡಿದೆ.

ಪ್ರವಾಹದಲ್ಲಿ ಶಾಲಾ ಕಟ್ಟಡಗಳು ಕೊಚ್ಚಿ ಹೋಗಿದೆ. ಅಷ್ಟರಲ್ಲಾಗಲೇ ಎಲ್ಲ ಮಕ್ಕಳನ್ನು ಸಮೀಪದ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ರಾಜೇಂದ್ರ ಅವರು 1,643 ಮಕ್ಕಳನ್ನು ಮತ್ತು ಒಬ್ಬ ಬೋಧನಾ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದವರನ್ನು ರಕ್ಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+