ಉಕ್ರೇನ್-ರಷ್ಯಾ ಗಡಿಯಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಮಾಸ್ಕೋ, ಫೆಬ್ರವರಿ 24:ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಮತ್ತಷ್ಟು ಸನ್ನಿಹಿತವಾಗಿದೆ ಎಂಬುದನ್ನು ಸೂಚಿಸುವ ಮತ್ತಷ್ಟು ಬೆಳವಣಿಗೆಗಳು ಬುಧವಾರ ಗೋಚರಿಸಿದೆ.

ಉಕ್ರೇನ್ ಗಡಿಯಲ್ಲಿ ರಷ್ಯಾವು ಸುಮಾರು 2 ಲಕ್ಷ ಸೈನಿಕರನ್ನು ನಿಯೋಜಿಸಿರುವುದು ಸ್ಯಾಟಲೈಟ್ ಮೂಲಕ ತಿಳಿದುಬಂದಿದೆ. ಹಾಗೆಯೇ ಉಕ್ರೇನ್ ರಷ್ಯಾದಲ್ಲಿರುವ ತಮ್ಮ ನಾಗರಿಕರನ್ನು ದೇಶಕ್ಕೆ ಮರಳುವಂತೆ ಕೇಳಿಕೊಂಡಿದೆ.

ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ರಷ್ಯಾದ ರಾಯಭಾರ ಕಚೇರಿ ಇದೆ. ಜತೆಗೆ ಖರ್ಕೀವ್ , ಒಡೆಸಾ ಮತ್ತ ಲೀವ್‌ನಲ್ಲಿ ಉಪ ದೂತಾವಾಸ ಕಚೇರಿ ಹೊಂದಿದೆ. ಈ ಪೈಕಿ ಕೀವ್‌ನ ಕಚೇರಿ ಬುಧವಾರ ತೆರವುಗೊಂಡಿದೆ ಎಂದು ಹೇಳಲಾಗಿದೆ.

Nearly 200,000 Russian Troops On Border, Says Zelensky

ಇತ್ತೀಚಿನ ವರ್ಷಗಳಲ್ಲಿ ವಿಶ್ವವು ದೊಡ್ಡಮಟ್ಟದಲ್ಲಿ ಜಾಗತಿಕ ಶಾಂತಿ ಮತ್ತು ಭದ್ರತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಗುಟೆರಸ್ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಲು ಸೇನೆಯನ್ನು ಕಳುಹಿಸಿದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ನಾವು ಎಂದೂ ಅಪರೇಕ್ಷಿಸದ ಕ್ಷಣವನ್ನು ಈಗ ಎದುರಿಸಬೇಕಿದೆ ಎಂದಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದೆ ಎಂದು ಆರೋಪಿಸಿರುವ ಅಮೆರಿಕ ವಿದೇಶಾಂಗ ಸಚಿವ ಟೋನಿ ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಅವರ ಜತೆ ನಿಗದಿಯಾಗಿದ್ದ ಸಭೆ ರದ್ದುಗೊಳಿಸಲಾಗಿದೆ.

ರಷ್ಯಾ ದಾಳಿ ಭೀತಿ ಬೆನ್ನಲ್ಲೇ ಉಕ್ರೇನ್‌ನಲ್ಲಿ 30 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಧಿಸಲು ನಿರ್ಧರಿಸಿದೆ. ಈ ವೇಳೆ ವಾಹನಗಳ ಓಡಾಟ ನಿರ್ಬಂಧಿಸಲಾಗುತ್ತದೆ. ಯುದ್ಧ ಸಂಭವಿಸಿದರೆ ಸಾಮಾನ್ಯ ನಾಗರಿಕರು ಯುದ್ಧದಲ್ಲಿ ಭಾಗವಹಿಸಲು ಉಕ್ರೇನ್ ಅನುಮತಿ ನೀಡಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷವು ಕೇವಲ ಎರಡು ದೇಶಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಈ ಎರಡು ದೇಶಗಳ ನಡುವಿನ ಉದ್ವಿಗ್ನತೆ ಭಾರತ, ಅಮೆರಿಕ, ಫ್ರಾನ್ಸ್ ಮುಂತಾದ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ.

ರಷ್ಯಾ ಮತ್ತು ಉಕ್ರೇನ್​ನಲ್ಲಿ ಇತ್ತೀಚೆಗೆ ಉದ್ವಿಗ್ನತೆ ಉಲ್ಬಣಗೊಂಡಿರುವುದರಿಂದ ಹಲವು ರಾಷ್ಟ್ರಗಳಿಗೆ ಆತಂಕ ಶುರುವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ಸ್ವತಂತ್ರ ದೇಶಗಳಾಗಿ ಘೋಷಿಸಿದ ನಂತರ ಆರ್ಥಿಕ ಅಸ್ಥಿರತೆಯು ಹೆಚ್ಚಾಯಿತು.

ಇದರಿಂದ ತೈಲದ ಬೆಲೆಯು 2014ರಿಂದ ಅತ್ಯಧಿಕ ಮಟ್ಟದಲ್ಲಿದೆ. ಭಾರತಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನರು ದಿನವೂ ಬಳಸುವ ಅನೇಕ ವಸ್ತುಗಳ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.

ರಷ್ಯಾವು ಜಗತ್ತಿಗೆ ಮೂರನೇ ಅತಿದೊಡ್ಡ ತೈಲ ಪೂರೈಕೆದಾರ ದೇಶವೆಂಬುದನ್ನು ನಾವು ಮರೆಯುವಂತಿಲ್ಲ. ಇದರಿಂದ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಮುಖವಾಗಿ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಭಾರತದಲ್ಲಿ ದುಬಾರಿಯಾಗಬಹುದಾದ ವಸ್ತುಗಳ ಪಟ್ಟಿ ಹೀಗಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಭಾರತದ ಒಟ್ಟು ಆಮದುಗಳಲ್ಲಿ ಶೇ. 25ರಷ್ಟು ಪಾಲನ್ನು ತೈಲ ಹೊಂದಿದೆ. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 98 ರೂ.ಗಿಂತ ಹೆಚ್ಚು ಮಾರಾಟವಾಗುತ್ತಿದೆ. ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈಗ, ಪ್ರತಿ ಬ್ಯಾರೆಲ್‌ನ ಬೆಲೆ ಏರಿಕೆಯೊಂದಿಗೆ, ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಬಹುದು.

ಭಾರತವು ಗೋಧಿಯ ಅತಿದೊಡ್ಡ ಗ್ರಾಹಕರಲ್ಲಿ ಒಂದಾಗಿದೆ ಮತ್ತು ರಷ್ಯಾವು ವಿಶ್ವಕ್ಕೆ ಧಾನ್ಯದ ಅತಿದೊಡ್ಡ ರಫ್ತುದಾರನಾಗಿದೆ. ಅಷ್ಟೇ ಅಲ್ಲ, ಉಕ್ರೇನ್ ಗೋಧಿಯ ರಫ್ತುದಾರರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಪ್ಪು ಸಮುದ್ರದ ಪ್ರದೇಶದಿಂದ ಗರಿಷ್ಠ ಗೋಧಿ ಪೂರೈಕೆ ನಡೆಯುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರತದಲ್ಲಿ ಗೋಧಿ ಬೆಲೆ ಕೂಡ ಶೀಘ್ರದಲ್ಲೇ ಹೆಚ್ಚಾಗಬಹುದು.

ರಷ್ಯಾ ಪಲ್ಲಾಡಿಯಂನ ಅತಿದೊಡ್ಡ ರಫ್ತುದಾರನಾಗಿದೆ. ಇದು ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ಬಳಸುವ ಲೋಹವಾಗಿದೆ. ಇದೀಗ ಹಲವಾರು ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಘೋಷಿಸಿರುವುದರಿಂದ ಪಲ್ಲಾಡಿಯಂ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+