Pakistan News: ಒಬ್ಬ ಮಾಜಿ ಪ್ರಧಾನಿ ಒಳಗೆ.. ಮತ್ತೊಬ್ಬರು ಹೊರಗೆ!
ಪಾಕಿಸ್ತಾನದ ಪರಿಸ್ಥಿತಿ ಬೇರೆ ಎಲ್ಲೂ ಸಿಗಲ್ಲ, ಕಾಣೋದಕ್ಕೂ ಆಗಲ್ಲ. ಯಾಕಂದ್ರೆ ಪಾಕ್ ಅನ್ನೋ ದೇಶದ ಸ್ಥಿತಿ ಅಂತಹದ್ದು. ಒಂದ್ಕಡೆ ಒಬ್ಬ ಮಾಜಿ ಪ್ರಧಾನಿ ಜೈಲಿಗೆ ಹೋಗ್ತಾರೆ, ಈ ಹೊತ್ತಲ್ಲೇ ಮತ್ತೊಬ್ಬ ಭ್ರಷ್ಟಾಚಾರ ಆರೋಪಿ ಮಾಜಿ ಪಿಎಂ ದೇಶಕ್ಕೆ ಮರಳುತ್ತಿದ್ದಾರೆ. ಹೀಗೆ ಪಾಕಿಸ್ತಾನದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಏನೇನೋ ಆಗುತ್ತಿದೆ.
ಅಂದಹಾಗೆ ಇಮ್ರಾನ್ ಖಾನ್ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿರುವ ವೇಳೆಯೇ ಮತ್ತೊಬ್ಬ ಮಾಜಿ ಪ್ರಧಾನಿ ಹಾಗೂ ಭ್ರಷ್ಟಾಚಾರ ಆರೋಪಿ ಪಾಕ್‌ಗೆ ಮರಳುತ್ತಿದ್ದಾರೆ. ಈ ಬೆಳವಣಿಗೆ ಪಾಕಿಸ್ತಾನದಲ್ಲಿ ಕಿಚ್ಚು ಹೊತ್ತಿಸುತ್ತಿದೆ. ಈಗ ನವಾಜ್ ಪಕ್ಷವೇ ಅಧಿಕಾರದಲ್ಲಿದೆ, ಹೀಗಾಗಿ ಪಾಕ್‌ನಲ್ಲಿ ಸರ್ಕಾರ ವಿಸರ್ಜನೆ ಮಾಡುವ ಮೊದಲು ನವಾಜ್ ಷರೀಫ್ ಮರಳಲು ಅಗತ್ಯವಿದ್ದ ಕ್ರಮ ಕೈಗೊಂಡಿತ್ತು ಶೆಹಬಾಜ್ ಷರೀಫ್ ಸರ್ಕಾರ. ನವಾಜ್ ಷರೀಫ್ ಮರಳಿ ಬರೋದು ಯಾವಾಗ? ಪಾಕಿಸ್ತಾನದಲ್ಲಿ ಭ್ರಷ್ಟರಿಗೆ ಶಿಕ್ಷೆ ಇಲ್ವಾ? ಆ ಕುರಿತು ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಪಾಕಿಸ್ತಾನದಲ್ಲಿ ಸರ್ಕಾರ VS ನ್ಯಾಯಾಲಯ!
ಹೌದು ಭಾರತದ ವಿರುದ್ಧ ಸದಾ ಕಿರಿಕ್ ಮಾಡುವ ಪಾಕಿಸ್ತಾನದಲ್ಲಿ ರಾಜಕಾರಣಿಗಳು ಎಲ್ಲಿ ದುಡ್ಡು ಸಿಕ್ಕರೂ ಬಿಡೋದಿಲ್ಲ ಎಂಬ ಆರೋಪವಿದೆ. ಹೀಗೆ ನವಾಜ್ ಷರೀಫ್ ವಿರುದ್ಧವೂ ಭಾರಿ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜೈಲಿಗೂ ಹೊಗಿ, ರಾತ್ರೋರಾತ್ರಿ ದೇಶ ಬಿಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅವರದ್ದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದ ಕಾರಣಕ್ಕೆ ಮತ್ತೆ ಮರಳಿ ತಮ್ಮ ನಾಯಕನನ್ನ ಪಾಕ್‌ಗೆ ಕರೆಸಿಕೊಳ್ಳಲು ಸರ್ಕಸ್ ನಡೆದಿತ್ತು. ಅದರ ಫಲವಾಗಿ ಭ್ರಷ್ಟ ರಾಜಕಾರಣಿಗಳಿಗೆ ನೀಡುವ ಶಿಕ್ಷೆ ಪ್ರಮಾಣ ಕಡಿಮೆ ಮಾಡಿತ್ತು.
ಅಷ್ಟಕ್ಕೂ ಪಾಕಿಸ್ತಾನದಲ್ಲಿ ಚುನಾಯಿತ ಸದಸ್ಯರ ಅನರ್ಹತೆ ಅವಧಿಯನ್ನ ಗರಿಷ್ಠ 5 ವರ್ಷಕ್ಕೆ ಸೀಮಿತಗೊಳಿಸುವ ಮಸೂದೆ ಪಾಕಿಸ್ತಾನ ಸಂಸತ್ ಅಂಗೀಕರಿಸಿತ್ತು. ಈ ಮೂಲಕ ಯಾವುದೇ ಜನಪ್ರತಿನಿಧಿ ಅಥವಾ ರಾಜಕಾರಣಿಯನ್ನ ಜೀವಿತಾವಧಿವರೆಗೂ ಅನರ್ಹ ಮಾಡಲು ಅವಕಾಶ ಇರುವುದಿಲ್ಲ. ಕೋರ್ಟ್ ತೀರ್ಪಿನ ಪ್ರಕಾರ ಜನಪ್ರತಿನಿಧಿ ಅನರ್ಹಗೊಂಡಲ್ಲಿ, ತೀರ್ಪು ಪ್ರಕಟ ಆದ ದಿನದಿಂದ ಒಟ್ಟಾರೆ 5 ವರ್ಷಕ್ಕೆ ಅನರ್ಹತೆ ಅನ್ವಯಿಸಲಿದೆ.

ಪಾಕಿಸ್ತಾನದ ನೆಮ್ಮದಿಗೆ ಬೆಂಕಿ ಬೀಳುವ ಭಯ
ಹೀಗೆ ಹೊಸ ಕಾಯ್ದೆ ಜಾರಿಗೆ ಬಂದು ಇನ್ನೂ ಒಂದೆರಡು ತಿಂಗಳು ಕಳೆದಿಲ್ಲ. ಆದಾಗಲೇ ಪಾಕಿಸ್ಥಾನದ ಮಾಜಿ ಪ್ರಧಾನಿ ಹಾಗೂ ಭ್ರಷ್ಟಚಾರ ಆರೋಪಿ ನವಾಜ್ ಷರೀಫ್ ವಾಪಸ್ ಬರಲು ಸಿದ್ಧರಾಗಿದ್ದಾರೆ. ಇನ್ನು ಈ ಹೊಸ ಕಾಯ್ದೆ ಪ್ರಕಾರ ಅನರ್ಹತೆ ಅವಧಿ 5 ವರ್ಷವನ್ನ ಮೀರುವಂತಿಲ್ಲ ಎಂದು ಹೊಸ ಮಸೂದೆ ತರಲಾಗಿದೆ. ಈ ಮೂಲಕ ಪಾಕಿಸ್ತಾನದಲ್ಲಿ ಭ್ರಷ್ಟ ರಾಜಕಾರಣಿಗಳನ್ನ ರಕ್ಷಿಸಲು ಹುನ್ನಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈಗ ನೋಡಿದರೆ ಸೆಪ್ಟಂಬರ್ ತಿಂಗಳಲ್ಲಿ ನವಾಜ್ ಪಾಕ್‌ಗೆ ಮರಳಿ ಬರುವ ಸಾಧ್ಯತೆ ಇದೆ. ಹೀಗೆ ಮುಂದಿನ ತಿಂಗಳು ನವಾಜ್ ಷರೀಫ್ ಪಾಕ್‌ಗೆ ಮರಳಿದರೆ ಪಾಕಿಸ್ತಾನದ ನೆಮ್ಮದಿಗೆ ಬೆಂಕಿ ಬೀಳುವ ಭಯವಿದೆ.
ನವಾಜ್ ಶರೀಫ್ ಈಗ ಎಲ್ಲಿ?
ಪಾಕಿಸ್ತಾನದ ರಾಜಕಾರಣಿಗಳು ಅದೆಷ್ಟು ಭ್ರಷ್ಟರು ಅಂದರೆ, ಪಾಕಿಸ್ತಾನದ ಬಹುತೇಕ ಮಾಜಿ ಪ್ರಧಾನಿಗಳಿಗೆ ಜೈಲಿನ ದರ್ಶನ ಆಗಿದೆ. ಹೀಗೆ ನವಾಜ್ ಶರೀಫ್ ಕೂಡ ಜೈಲೂಟ ತಿಂದು, ಬೇರೆ ದೇಶದಲ್ಲಿ ವಾಸಿಸುತ್ತಿದ್ದಾರೆ. 2019ರಿಂದ ಲಂಡನ್‌ನಲ್ಲಿ ವಾಸವಿರುವ ಮಾಜಿ ಪಿಎಂ ನವಾಜ್, ಪನಾಮಾ ಪೇಪರ್ಸ್ ಹಗರಣದ ಹಿನ್ನೆಲೆ ಪಾಕ್‌ಗೆ ಮರಳಿದರೂ ರಾಜಕೀಯ ಪಕ್ಷಗಳ ನೇತೃತ್ವ ವಹಿಸಲು ಆಗುವುದಿಲ್ಲ. ಆದರೆ ಇದನ್ನು ಮರುಪರಿಶೀಲಿಸಲು ಶೆಹಬಾಜ್ ಶರೀಫ್ ಅನುಮತಿ ಸಿಕ್ಕಿದೆ. ಈ ಮೂಲಕ ಪಾಕಿಸ್ಥಾನ ಸುಪ್ರೀಂಕೋರ್ಟ್‌ನಲ್ಲಿ ತಮ್ಮ ವಿರುದ್ಧದ ತೀರ್ಪು ಪ್ರಶ್ನಿಸಲು ನವಾಜ್ ಷರೀಫ್ ಪಾಕಿಸ್ತಾನಕ್ಕೆ ಮರಳಿ ಬರುತ್ತಿದ್ದಾರೆ. ಆದರೆ ಇದು ಜಗತ್ತಿನಾದ್ಯಂತ ಈಗ ಚರ್ಚೆಯ ವಿಷಯವಾಗಿದೆ.












Click it and Unblock the Notifications