ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ

ಇಸ್ಲಾಮಾಬಾದ್, ಸೆಪ್ಟೆಂಬರ್ 19: ಭ್ರಷ್ಟಾಚಾರ ಆರೋಪ ಹೊತ್ತು ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನಾಜ್ ಷರೀಫ್ ಮತ್ತು ಅವರ ಮಗಳು ಮರ್ಯಾಮ್ ನವಾಜ್ ಅವರಿಗೆ ಬಂಧನದಿಂದ ಬಿಡುಗಡೆ ದೊರೆತಿದೆ.

ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನವಾಜ್ ಷರೀಫ್‌ಗೆ 10 ವರ್ಷ ಹಾಗೂ ಮರ್ಯಮ್ ನವಾಜ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇಸ್ಲಾಮಾದ್ ಹೈಕೋರ್ಟ್‌ ಶಿಕ್ಷೆಯನ್ನು ರದ್ದುಗೊಳಿಸಿ ಆರೋಪದಿಂದ ನವಾಜ್ ಷರೀಫ್ರನ್ನು ಮುಕ್ತಗೊಳಿಸಿದೆ.

ಜುಲೈ 6 ರಂದು ಕೆಳಹಂತದ ನ್ಯಾಯಾಲಯವು ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಿ ನವಾಜ್ ಷರೀಫ್ ಅವರಿಗೆ 10 ವರ್ಷ, ನವಾಜ್ ಅವರ ಪುತ್ರಿ ಮರ್ಯಾಮ್ ಷರೀಫ್ ಅವರಿಗೆ 7 ವರ್ಷ ಹಾಗೂ ತನಿಖೆಗೆ ಸಹಕರಿಸದ್ದಕ್ಕೆ ನವಾಜ್ ಷರೀಫ್ ಅವರ ಅಳಿಯನಿಗೆ ಒಂದುವ ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

Nawaz Sharif and his duagter released from Jail

ಪಾಕಿಸ್ತಾನ ಚುನಾವಣೆ ಕೆಲವೇ ದಿನಗಳ ಮುಂಚೆ ನವಾಜ್ ಷರೀಫ್ ಅವರ ಆರೋಪ ಸಾಬೀತಾಗಿ ಅವರನ್ನು ಜೈಲಿಗಟ್ಟಲಾಗಿತ್ತು. ಇದರಿಂದ ಅವರ ಪಕ್ಷಕ್ಕೆ ಭಾರಿ ಹಿನ್ನಡೆ ಆಗಿತ್ತು. ಆದರೆ ಈಗ ಅವರ ಮೇಲಿನ ಆರೋಪಗಳನ್ನು ಇಸ್ಲಾಮಾಬಾದ್ ಉಚ್ಛನ್ಯಾಯಾಲಯ ರದ್ದು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+