ರಷ್ಯಾ ವಿರುದ್ಧ ಅಖಾಡಕ್ಕೆ ಇಳಿಯುತ್ತಾ ‘ನ್ಯಾಟೋ’ ಪಡೆ?

ರಷ್ಯಾ & ಉಕ್ರೇನ್ ಯುದ್ಧ ಈಗಾಗಲೇ 2 ವರ್ಷ ಪೂರೈಸಿದ್ದು, 3ನೇ ವರ್ಷಕ್ಕೆ ಕಾಲಿಟ್ಟಿದೆ. ಉಕ್ರೇನ್ ಈಗ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರ ಬಳಿ ಸಾಕಷ್ಟು ಸಹಾಯ ಬೇಡುತ್ತಿದೆ ಉಕ್ರೇನ್. ಮತ್ತೊಂದು ಕಡೆ ಉಕ್ರೇನ್ ಈಗಾಗಲೇ ತನ್ನ ಲಕ್ಷಾಂತರ ಸೈನಿಕರು ಮತ್ತು ಪ್ರಜೆಗಳನ್ನ ಕಳೆದುಕೊಂಡಿದೆ. ಇದೇ ಕಾರಣಕ್ಕೆ ರಷ್ಯಾ ವಿರುದ್ಧ ಇದೀಗ 'ನ್ಯಾಟೋ' ಪಡೆ ನೇರ ಅಖಾಡ ಪ್ರವೇಶ ಮಾಡುತ್ತೆ ಅನ್ನೋ ಸುದ್ದಿ ಹಬ್ಬಿದೆ!

2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧವನ್ನ ಘೋಷಣೆ ಮಾಡಿತ್ತು. ಹೀಗೆ ಎರಡೂ ದೇಶಗಳ ನಡುವೆ ಭೀಕರ ಕದನ ಶುರುವಾಗಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಭೀಕರತೆ ಶುರುವಾಗಿ ಲಕ್ಷಾಂತರ ಜನ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದರೂ ಯುದ್ಧವನ್ನು ನಿಲ್ಲಿಸಲು ರಷ್ಯಾ ತಯಾರಿಲ್ಲ. ಹಾಗೇ ಉಕ್ರೇನ್ ಕೂಡ ಹಠ ಬಿಟ್ಟು ಸಂಧಾನಕ್ಕೆ ಬರ್ತಿಲ್ಲ ಅಂತಾ ರಷ್ಯಾ ಆರೋಪಿಸುತ್ತಿದೆ. ಈ ಗಲಾಟೆ ನಡುವೆ ಈ ಯುದ್ಧವನ್ನ ಮುಂದುವರಿಸಲು 'ನ್ಯಾಟೋ' ಪಡೆ ಸೈನಿಕರು ಖುದ್ದಾಗಿ ಅಖಾಡ ಪ್ರವೇಶ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಈ ಬಗ್ಗೆ ನ್ಯಾಟೋ ಸ್ಪಷ್ಟನೆ ನೀಡಿದೆ.

NATO Gave Clarification About Russia & Ukraine War

'ನ್ಯಾಟೋ' VS ರಷ್ಯಾ ಗ್ಯಾರಂಟಿ?

ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಉಕ್ರೇನ್‌ಗೆ ತನ್ನ ಸೇನಾ ಪಡೆ ಕಳುಹಿಸುವ ಯಾವುದೇ ಯೋಜನೆಗಳು ಇಲ್ಲ ಎಂದು 'ನ್ಯಾಟೋ' ಪಡೆ ತಿಳಿಸಿದೆ. 'ನ್ಯಾಟೋ' ಪ್ರಧಾನ ಕಾರ್ಯದರ್ಶಿ ಜೆನ್ಸ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೇ ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್‌ಗೆ 2014ರಿಂದ ಕೂಡ ಬೆಂಬಲ & ಸಹಕಾರ ನೀಡಿವೆ. ಆದ್ರೂ ಇದೀಗ ನ್ಯಾಟೊ ಪಡೆಗಳನ್ನು ಯುದ್ಧ ಭೂಮಿಗೆ ಕಳುಹಿಸುವ ಯಾವುದೇ ಯೋಜನೆ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಹೀಗಾಗಿ ರಷ್ಯಾ ವಿರುದ್ಧ ನೇರ ಯುದ್ಧಕ್ಕೆ ಸಿದ್ಧವಿಲ್ಲ ಎಂಬ ಸಂದೇಶವನ್ನ 'ನ್ಯಾಟೋ' ನೀಡಿದಂತಾಗಿದೆ.

1 ಲಕ್ಷ 20 ಸಾವಿರ ಜನರ ಸಾವು?

ಹೀಗೆ ಉಕ್ರೇನ್ & ರಷ್ಯಾ ನಡುವೆ ಘೋರ ಕಾಳಗ ನಡೆಯುತ್ತಿದೆ. ಈ ಯುದ್ಧದಿಂದ ಇದುವರೆಗು 50,000 ನಾಗರಿಕರು ಮೃತಪಟ್ಟರೆ ಉಕ್ರೇನ್‌ನ 70,000 ಸೈನಿಕರು ಜೀವ ಬಿಟ್ಟಿದ್ದಾರೆ ಎಂಬುದು, ಉಕ್ರೇನ್ ಆರೋಪ. ಈ ಮೂಲಕ ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಜೀವ ಹೋಗಿದೆ ಅಂತಾ ಉಕ್ರೇನ್ ಆರೋಪ ಮಾಡುತ್ತಿದೆ. ಈ ಎಲ್ಲಾ ಸಂಕಷ್ಟಗಳ ಮಧ್ಯೆ ಉಕ್ರೇನ್ & ರಷ್ಯಾ ಯುದ್ಧ 2 ವರ್ಷ ಪೂರೈಸಿದೆ ಹೀಗಿದ್ದಗ ನ್ಯಾಟೋ ಪಡೆ ಕೂಡ ರಷ್ಯಾ ವಿರುದ್ಧ ನಮ್ಮದು ನೇರ ಯುದ್ಧ ಇಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ.

NATO Gave Clarification About Russia & Ukraine War

ಜಗತ್ತಿಗೆ ನೆಮ್ಮದಿ ಸಿಗೋದೆ ಇಲ್ಲ!

ರಷ್ಯಾ & ಉಕ್ರೇನ್ ಯುದ್ಧ ನಿಲ್ಲದ ಹೊರತು ಜಗತ್ತು ನೆಮ್ಮದಿಯಾಗಿ ಇರಲು ಸಾಧ್ಯ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಹಲವು ಬಾರಿ ವಿಶ್ವಸಂಸ್ಥೆ ಕೂಡ ಈ ಪ್ರಯತ್ನ ಮಾಡುತ್ತಾ ವಿಫಲವಾಗಿದೆ. ಅಲ್ಲದೆ ಮುಂದಿನ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಯುದ್ಧವನ್ನು ಆದಷ್ಟು ಬೇಗ ನಿಲ್ಲಿಸಬೇಕು ಎಂಬ ಒತ್ತಡ ಜೋರಾಗಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+