NATO India: ‘ನ್ಯಾಟೋ’ ಒಕ್ಕೂಟಕ್ಕೆ ಭಾರತ ಕೂಡ ಸೇರುತ್ತಾ?

ವಾಷಿಂಗ್ಟನ್: ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಭಾರತವನ್ನು ತಮ್ಮ ಜೊತೆ ಸೇರಿಸಿಕೊಳ್ಳಲು ಅಮೆರಿಕ & ಟೀಂ ಪ್ರಯತ್ನಪಡ್ತಿದೆ. ಇದರ ಮೊದಲ ಭಾಗವಾಗಿ ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟಕ್ಕೆ ಭಾರತವನ್ನೂ ಸೇರಿಸಿಕೊಳ್ಳಲು ಪ್ರಯತ್ನಗಳು ಸಾಗಿವೆ. ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಗೆ ಮೊದಲು ಇಂತಹ ಮಾತು ಕೇಳಿಬರುತ್ತಿರುವುದು ಕುತೂಹಲ ಕೆರಳಿಸಿದೆ.

ಭಾರತ ಈಗ ವಿಶ್ವಗುರು ಆಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಸ್ಥಾನಮಾನ ಸಿಕ್ಕಿದೆ. ಆದರೂ ಅಮೆರಿಕ ಮತ್ತು ಗ್ಯಾಂಗ್ ಜೊತೆ ಭಾರತ ಅಷ್ಟಾಗಿ ಬೆರೆಯೋದಿಲ್ಲ. ಇದಕ್ಕೆ ಕಾರಣ ಹಲವು, ಅದ್ರಲ್ಲಿ ಮುಖ್ಯ ಕಾರಣ ಎಂದರೆ ಅಮೆರಿಕ ಯಾವ ಕ್ಷಣದಲ್ಲೂ ಭಾರತಕ್ಕೆ ಕೈಕೊಟ್ಟು ಹೋಗಬಹುದು. ಆದರೆ ರಷ್ಯಾ ಹಾಗೆ ಮಾಡಲ್ಲ. ಹೀಗಾಗಿ ರಷ್ಯಾ ಜೊತೆ ಉತ್ತಮ ಸಂಬಂಧ ಹೊಂದಿ, ಅಮೆರಿಕದ ಸ್ನೇಹವನ್ನೂ ಕಾಪಾಡಿಕೊಂಡು ಬರುತ್ತಿದೆ ಭಾರತ. ಆದರೆ ಈಗ ನ್ಯಾಟೋ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಅಮೆರಿಕ ಪ್ರಯತ್ನ ಶುರು ಮಾಡಿದೆ.

NATO alliance preparing

ಭಾರತ 'ನ್ಯಾಟೋ' ಒಕ್ಕೂಟಕ್ಕೆ ಸೇರುತ್ತಾ?

ಅಷ್ಟಕ್ಕೂ ನ್ಯಾಟೋ ಮಿತ್ರರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿ ಎಂದು ಅಮೆರಿಕದ ಉನ್ನತಮಟ್ಟದ ಸಮಿತಿ ಶಿಫಾರಸು ಮಾಡಿದೆ. ಇದೀಗ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್‌, ಇಸ್ರೇಲ್‌ ಮತ್ತು ದಕ್ಷಿಣ ಕೊರಿಯಾಗಳು ನ್ಯಾಟೋ ಜೊತೆ ಇವೆ. ಇವು ಪ್ರಮುಖ ರಾಷ್ಟ್ರಗಳೊಂದಿಗೆ ರಕ್ಷಣೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಂದಗಳನ್ನೂ ಮಾಡಿಕೊಂಡಿವೆ. ಹೀಗಾಗಿ ಅಮೆರಿಕದ ಮೈಕ್ ಗಲ್ಲಾಘರ್, ಸದಸ್ಯ ರಾಜಾ ಕೃಷ್ಣಮೂರ್ತಿ ನೇತೃತ್ವದ ಸಮಿತಿ ಈ ಶಿಫಾರಸು ಮಾಡಿದ್ದು, ಭಾರತವನ್ನೂ ನ್ಯಾಟೋಗೆ ಸೇರಿಸಿಕೊಳ್ಳುವ ಪ್ರಯತ್ನ ಶುರುವಾಗಿದೆ.

ಫಿನ್‌ಲ್ಯಾಂಡ್ ನಂತರ ಭಾರತದ ಸರದಿ?

ಅಂದಹಾಗೆ ಇನ್ನು ಕೆಲವೇ ದಿನದಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಇದು ತೀವ್ರ ಕುತೂಹಲ ಕೆರಳಿಸಿರುವ ವಿಚಾರ. ಪ್ರಧಾನಿ ಮೋದಿ ಅಮೆರಿಕ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲೇ ಈ ಕುರಿತು ಮಾತುಕತೆ ನಡೆದು, ನ್ಯಾಟೋ ಒಕ್ಕೂಟಕ್ಕೆ ಭಾರತ ಸೇರುತ್ತಾ? ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ. ಕಳೆದ ತಿಂಗಳಷ್ಟೇ ಫಿನ್‌ಲ್ಯಾಂಡ್‌ ಎಂಬ ಹೊಸ ಸದಸ್ಯನನ್ನೂ ನ್ಯಾಟೋ ಅಂಗೀಕರಿಸಿತ್ತು. ಇದೀಗ ಭಾರತಕ್ಕೆ ಅಂತಹ ಸ್ಥಾನಮಾನ ನೀಡಲು ನ್ಯಾಟೋ ಯೋಜಿಸುತ್ತಿದೆ.

NATO alliance preparing

ನ್ಯಾಟೋ ಸೇರಿದರೆ ರಷ್ಯಾ ಸ್ನೇಹ ಕಟ್?

ಇಡೀ ಜಗತ್ತಿನಲ್ಲಿ ಭಾರತಕ್ಕೆ ಈಗ ನಂಬಿಕಸ್ಥ ಶಕ್ತಿಶಾಲಿ ರಾಷ್ಟ್ರ ಎಂದರೆ ಅದು ರಷ್ಯಾ ಮಾತ್ರ. ಆದ್ರೆ ರಷ್ಯಾಗೆ ನ್ಯಾಟೋ ಒಕ್ಕೂಟ ದೊಡ್ಡ ಶತ್ರುವಾಗಿ ಕಾಡ್ತಿದೆ. ಈಗ ಉಕ್ರೇನ್ ಯುದ್ಧದಲ್ಲೂ ನ್ಯಾಟೋ ಪಡೆಯ ಕಾಟಕ್ಕೆ ರಷ್ಯಾ ಸುಸ್ತಾಗಿದೆ. ಹೀಗಾಗಿ ಸರಿಯಾದ ಸಮಯ ನೋಡಿ ಭಾರತವನ್ನು ತಮ್ಮ ಜೊತೆಯಲ್ಲಿ ಸೇರಿಸಿಕೊಳ್ಳಲು ನ್ಯಾಟೋ ಒಕ್ಕೂಟ ಪ್ರಯತ್ನ ಆರಂಭಿಸಿದೆ. ಆದ್ರೆ ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದೆ ಡೌಟ್ ಹುಟ್ಟಿರುವ ಸಂದರ್ಭದಲ್ಲೇ, ರಷ್ಯಾ ಕೂಡ ಎಲ್ಲಾ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಏಪ್ರಿಲ್‌ನಲ್ಲಿ ನ್ಯಾಟೋಗೆ ಸೇರಿದ್ದ ಫಿನ್‌ಲ್ಯಾಂಡ್‌

ನ್ಯಾಟೋ ಒಕ್ಕೂಟ ಸ್ಥಾಪನೆಯಾಗಿ ಏಪ್ರಿಲ್ 4ಕ್ಕೆ 74 ವರ್ಷ ತುಂಬಿದೆ. ನ್ಯಾಟೋ ಒಕ್ಕೂಟದ ವಾರ್ಷಿಕೋತ್ಸವದ ದಿನವೇ ಫಿನ್‌ಲ್ಯಾಂಡ್ 31ನೇ ಸದಸ್ಯ ರಾಷ್ಟ್ರವಾಗಿ ಎಂಟ್ರಿಕೊಟ್ಟಿತ್ತು. ಒಂದೆಡೆ ಉಕ್ರೇನ್ & ರಷ್ಯಾ ನಡುವೆ ಘೋರ ಯುದ್ಧ ನಡೆಯುವಾಗಲೇ ತನ್ನ ನಿಲುವು ಬದಲಿಸಿಕೊಂಡು ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಾದ ನ್ಯಾಟೋದ ಜೊತೆ ಫಿನ್‌ಲ್ಯಾಂಡ್ ಕೈಜೋಡಿಸಿತ್ತು. ಈ ಘಟನೆ ಬಳಿಕ ರಷ್ಯಾ ಕೂಡ ಕೆರಳಿ ಕೆಂಡವಾಗಿತ್ತು. ಇದೀಗ ಭಾರತ ಎಂಟ್ರಿ ಕೊಟ್ಟರೆ ನ್ಯಾಟೋ ಒಕ್ಕೂಟದ 32ನೇ ರಾಷ್ಟ್ರವಾಗಲಿದೆ.

NATO alliance preparing

ಒಟ್ಟಾರೆ ಹೇಳುವುದಾದ್ರೆ ರಷ್ಯಾ ಸ್ನೇಹವನ್ನ ಬಿಟ್ಟು ಭಾರತ ಈಗ ನ್ಯಾಟೋ ಒಕ್ಕೂಟ ಸೇರೋದು ಅನುಮಾನ ಅಂತಾ ಹೇಳಬಹುದು. ಯಾಕಂದ್ರೆ ರಷ್ಯಾ ಸ್ನೇಹ ಕಟ್ ಮಾಡಿ, ನ್ಯಾಟೋ ಜೊತೆ ಸೇರಿದರೆ ಭವಿಷ್ಯದಲ್ಲಿ ಈ ನಿರ್ಧಾರ ಅಪಾಯಕ್ಕೆ ಆಹ್ವಾನ ನೀಡಲಿದೆ. ಹೀಗಾಗಿಯೇ ಭಾರತ ಕೂಡ ಎಲ್ಲವನ್ನು ಅಳೆದು ತೂಗಿ ಎಚ್ಚರಿಕೆ ಹೆಜ್ಜೆಯನ್ನ ಇಡುತ್ತಿದೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+