ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಸ್ಪೀಕರ್ ಕುಟುಂಬಕ್ಕೂ ತಗುಲಿದ ಕೊರೊನಾ ಸೋಂಕು

|
Google Oneindia Kannada News

ಇಸ್ಲಾಮಾಬಾದ್, ಮೇ 1: ಇಡೀ ವಿಶ್ವವೇ ಕೊರೊನಾ ವೈರಸ್‌ನಿಂದ ಬಿಡಗಡೆ ಪಡೆಯಲಾಗದೆ ನರಳಾಡುತ್ತಿದೆ. ಈ ನಡುವಲ್ಲೇ ಪಾಕಿಸ್ತಾನದ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಾದ್ ಕೈಸರ್ ಸೇರಿದಂತೆ ಅವರ ಪುತ್ರ ಹಾಗೂ ಪುತ್ರಿಗೂ ವೈರಸ್ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಈ ವರೆಗೂ 16,817 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 385 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 4,315 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆಂದು ತಿಳಿದುಬಂದಿದೆ.

ಪಾಕಿಸ್ತಾನದಲ್ಲಿ ಸಂಜೆ 5 ಗಂಟೆಯ ವರೆಗೆ ಕೊರೊನಾ ವೈರಸ್ ಗೆ ವಿಶ್ರಾಂತಿ!ಪಾಕಿಸ್ತಾನದಲ್ಲಿ ಸಂಜೆ 5 ಗಂಟೆಯ ವರೆಗೆ ಕೊರೊನಾ ವೈರಸ್ ಗೆ ವಿಶ್ರಾಂತಿ!

ವೈದ್ಯಕೀಯ ವರದಿಯಲ್ಲಿ ವೈರಸ್ ದೃಢಪಟ್ಟಿದ್ದು, ಮನೆಯಲ್ಲಿ ಸ್ವಯಂ ದಿಗ್ಭಂಧನದಲ್ಲಿದ್ದೇನೆಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕೈಸರ್ ಅವರು ಹೇಳಿಕೊಂಡಿದ್ದಾರೆ. ಜಗತ್ತಿನಾದ್ಯಂತ ತಾಂಡವ ಆಡುತ್ತಿರುವ ಕೊರೊನಾ ವೈರಸ್‌ ಸೋಂಕಿಗೆ ದೇಶಗಳು ಕಂಗಾಲಾಗಿದೆ.

National Assembly Speaker Of Pakistan Along With His Son Daughter Test Positive For Coronavirus

ಲಾಕ್‌ಡೌನ್‌, ಸೋಶಿಯಲ್‌ ಡಿಸ್ಟೆನ್ಸ್‌ನಂತಹ ಕ್ರಮಗಳನ್ನ ಸರ್ಕಾರ ಕೈಗೊಳ್ಳುತ್ತಿದೆ. ಆದ್ರೂ ಕೆಲವೆಡೆ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನು ಪಾಕಿಸ್ತಾನದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

English summary
A work-from-home techie allegedly harassed an overworked pregnant doctor wife in a clear case of domestic violence in Jayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X