ಕೋವಿಡ್ ನೇಸಲ್ ಸ್ಪ್ರೇ ಎರಡು ರೀತಿಯಲ್ಲಿ ಉಪಯೋಗಕಾರಿ
ನೂತನ ಇನ್‌ಟ್ರಾ ನೇಸಲ್ ಕೋವಿಡ್ ಲಸಿಕೆಯು ಕೊರೊನಾ ಸೋಂಕನ್ನು ನಿಯಂತ್ರಿಸುವುದಷ್ಟೇ ಅಲ್ಲದೆ ಕೊರೊನಾ ಹರಡುವಿಕೆಯನ್ನು ತಡೆಯಬಲ್ಲದು ಎಂದು ತಜ್ಞರು ತಿಳಿಸಿದ್ದಾರೆ.
ಇಲಿಗಳ ಮೇಲೆ ಪ್ರಯೋಗ ನಡೆದಿದ್ದು, ಈ ಪ್ರಯೋಗದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ತಡೆ ಹಾಗೂ ಕೊರೊನಾ ಹರಡುವಿಕೆಯ ನಿಯಂತ್ರಣವನ್ನು ಮಾಡುತ್ತದೆ ಎಂದು ತಿಳಿದುಬಂದಿದೆ.
ಸೈನ್ಸ್ ಅಡ್ವಾನ್ಡ್ ಜರ್ನಲ್‌ನಲ್ಲಿ ವಿವರಿಸಲಾದ ಹೊಸ ಲಸಿಕೆಯನ್ನು ಇನ್‌ಫ್ಲುಯೆನ್ಜಾ ವಿರುದ್ಧ ಲಸಿಕೆ ಹಾಕಲು ಸಾಮಾನ್ಯವಾಗಿ ಮೂಗಿನ ಮೂಲ ಸಿಂಪಡಣೆ ಮಾಡಲಾಗುತ್ತದೆ.

ಆದರೆ ದೇಶದಲ್ಲಿ ಈವರೆಗೆ ಕೊರೊನಾ ಲಸಿಕೆಗೆ ಮಾತ್ರ ಅನುಮತಿ ನೀಡಲಾಗಿದೆ.ಕೋವಿಡ್ ವಿರುದ್ಧ ಪ್ರಸ್ತುತ ಲಭ್ಯವಿರುವ ಬಹಳಷ್ಟು ಲಸಿಕೆಗಳು ಯಶಸ್ವಿಯಾಗಿವೆ. ಆದರೆ ವಿಶ್ವದಲ್ಲಿರುವ ಬಹುತೇಕ ಮಂದಿ ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಮದೇಟು ಹಾಕುತ್ತಿದ್ದಾರೆ.
ಈಗಾಗಲೇ ರಷ್ಯಾದಲ್ಲಿ ಮೂಗಿನ ಮೂಲಕ ಸಿಂಪಡಿಸುವ ಲಸಿಕೆಯನ್ನು ಸಿದ್ಧಪಡಿಸುತ್ತಿದ್ದು, 8-12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿ ಪರೀಕ್ಷಿಸಲು ಪ್ರಾರಂಭಿಸಿದೆ.
ಸೆಪ್ಟೆಂಬರ್ 15ರೊಳಗೆ ಮಕ್ಕಳಿಗೆ ಸಿದ್ಧವಾಗಲಿದೆ ಎಂದು ಗಮಾಲೆ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್ ಬರ್ಗ್ ಹೇಳಿದ್ದಾರೆ.
ಮಕ್ಕಳಿಗೆ ಸೂಜಿಯ ಬದಲು ಸ್ಪ್ರೇ ಮಾಡುವ ಲಸಿಕೆ ಹಾಕಲಾಗುತ್ತದೆ, ಇಲ್ಲಿಯವರೆಗೆ ಯಾವುದೇ ಅಡ್ಡಪಡಿಣಾಮಗಳು ಕಂಡುಬಂದಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ಪರ್ಯಾಯವಾಗಿ ಮೂಗಿನ ಸಿಂಪಡಣೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಸಂಶೋಧನೆ ನಡೆಯುತ್ತಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟ್ರಾ ನೇಸಲ್ ಕೋವಿಡ್ 19 ಲಸಿಕೆಯು ಬಿಬಿವಿ 154ನ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ.












Click it and Unblock the Notifications