ಪ್ಲೂಟೋನಲ್ಲಿ ಕಂಡು ಬಂತು 'ತೇಲುವ ಪರ್ವತ'ಗಳ ಸಾಲು!
ನವದೆಹಲಿ, ಫೆಬ್ರವರಿ, 05: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೌರಮಂಡಲದ ಮತ್ತೊಂದು ವಿಶೇಷವನ್ನು ನಮ್ಮ ಮುಂದೆ ತೆರೆದಿರಿಸಿದೆ. ಪ್ಲೂಟೋ ಗ್ರಹದ ಮೇಲೆ 'ತೇಲುವ ಪರ್ವತ'ಗಳಿವೆ ಎಂದು ಹೇಳಿದ್ದು ಈ ಕುರಿತಾದ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ನಾಸಾದ ಹೊಸ ಹಾರಿಜನ್ ಸ್ಪೇಸ್ ಕ್ರಾಫ್ಟ್ ಚಿತ್ರಗಳನ್ನು ಸೆರೆಹಿಡಿದಿದೆ. ಪರ್ವತಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡುತತ್ತಿವೆ ಎಂದು ಹೇಳಿದೆ.[ಮಂಗಳ ಗ್ರಹದ ವಾತಾವರಣ ನಾಶವಾಗಲು ಏನು ಕಾರಣ?]

ಹಿಮ ಪರ್ವತಗಳ ರೀತಿಯಲ್ಲಿ ಕಂಡು ಬಂದಿರುವ ಸಾಲುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತವೆ ಎಂಬುದನ್ನು ಫೋಟೋಗಳ ಮೂಲಕ ಸಾಕ್ಷಿಕರೀಸಿದೆ.[ಬಾಹ್ಯಾಕಾಶದಿಂದ ಕಂಡ ಭಾರತ ಪಾಕಿಸ್ತಾನ ಗಡಿ ಭಾಗ]
ಪರ್ವತಗಳನ್ನು ಸಾರಜನಕತುಂಬಿದ ಹಿಮನದಿಗಳು ಹೊತ್ತೊಯ್ಯುತ್ತಿರುವಂತೆ ಕಂಡುಬರುತ್ತಿದೆ. ಒಮ್ಮೊಮ್ಮೊ 20 ಕಿಮೀಯಷ್ಟು ದೂರ ಸಂಚರಿಸಿದ ಪರ್ವತಗಳು ಸ್ಥಾನಪಲ್ಲಟ ಮಾಡಿದ್ದು ಇದೆ ಎಂದು ನಾಸಾ ಹೇಳಿದೆ.
ಪ್ಲೋಟೋದ ಉತ್ತರ ತುದಿಗೆ ಕಂಡುಬಂದಿರುವ ಈ ವೈಚಿತ್ರ ಮತ್ತಷ್ಟು ಹೊಸ ಸಂಶೋಧನೆಗಳಿಗೆ ಕಾರಣವಾಗಬಹುದು. ಕಳೆದ ವರ್ಷ ಜುಲೈ ನಲ್ಲಿ ಪ್ಲೂಟೋ ಅಂಗಳಕ್ಕೆ ಕಾಲಿಟ್ಟ ನಾಸಾದ ಉಪಗ್ರಹ ತೆಗೆದು ಕಳಿಸಿರುವ ಚಿತ್ರ ಇದಾಗಿದೆ.












Click it and Unblock the Notifications