ಭೂಮಿ ತಬ್ಬಲಿಯಲ್ಲ, 10 ಅವಳಿ ಸೋದರಿಯರು ಪತ್ತೆ!

Posted By:
Subscribe to Oneindia Kannada

ನ್ಯೂಯಾರ್ಕ್, ಜೂನ್ 20: ಭೂಮಿಯನ್ನೇ ಹೋಲುವ ಗ್ರಹವೊಂದನ್ನು ಪತ್ತೆ ಹಚ್ಚಿರುವುದಾಗಿ ನಾಸಾ ಪ್ರಕಟಿಸಿದೆ. ನಾಸಾದ ಹಳೆ ಟೆಲಿಸ್ಕೋಪ್ ಕೆಪ್ಲೆರ್ ಅವಿಷ್ಕಾರದ ಮಾಹಿತಿಯಂತೆ ಒಂದಲ್ಲ 10 ಗ್ರಹಗಳು ಪತ್ತೆಯಾಗಿವೆ.

ಹೊಸ ಗ್ರಹಗಳು ಭೂ ಗ್ರಹವನ್ನು ಎಲ್ಲಾ ರೀತಿಯಲ್ಲಿ ಹೋಲುತ್ತಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮಹತ್ತರವಾದ ಆವಿಷ್ಕಾರವನ್ನು ಸಾಧಿಸಿದೆ.

Nasa's Kepler telescope finds 10 Earth-like planets

ಕಳೆದ ಫೆಬ್ರವರಿ ತಿಂಗಳಿನಲ್ಲಿ ನಮ್ಮ ಸೌರಮಂಡಲದ ಆಚೆಗೆ ಮತ್ತೊಂದು ಸೌರಮಂಡಲವನ್ನು ಗುರುತಿಸಿರುವುದಾಗಿ ಘೋಷಿಸಿತ್ತು.

ಇದಾದ ಬಳಿಕ ಈಗ ಭೂಮಿಯನ್ನು ಹೋಲುವ ಗ್ರಹಗಳ ಸಮೂಹವನ್ನು ಪತ್ತೆ ಹಚ್ಚಿದೆ. ಕಲ್ಲು ಪದರ, ಹವಾಮಾನ ವಿವರಗಳು ಲಭ್ಯವಾಗಿದ್ದು, ಗಾತ್ರ ಭೂಮಿಗಿಂತ 1.75 ಹೆಚ್ಚಾಗಿದೆ, ಆದರೆ, ಜೀವಜಲ ಲಭ್ಯತೆ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ.

ಫೆಬ್ರವರಿಯ ಸಂಶೋಧನೆಯಂತೆ ಭೂಮಿಯಷ್ಟೇ ಗಾತ್ರವುಳ್ಳ ಏಳು ಹೊಸ ಗ್ರಹಗಳನ್ನು ಪತ್ತೆ ಹಚ್ಚಲಾಗಿತ್ತು, ಕುಬ್ಜ ನಕ್ಷತ್ರ(ನಮ್ಮ ಸೂರ್ಯನಂತೆ ಇರುವ)ವನ್ನು ಈ ಎಲ್ಲಾ ಗ್ರಹಗಳು ಸುತ್ತುತ್ತಲಿವೆ. ಈ ಹೊಸ ಸೌರವ್ಯೂಹ ಸರಿ ಸುಮಾರು 39 ಜ್ಯೋತಿರ್ ವರ್ಷ ದೂರದಲ್ಲಿದೆ ಎಂದು ನಾಸಾ(NASA) ಪ್ರಕಟಿಸಿತ್ತು. ಈಗ ಈ ಸಂಖ್ಯೆ ಇನ್ನಷ್ಟು ಹೆಚ್ಚಿದೆ.

1995ರಲ್ಲಿ ನಾಸಾದ ಕೆಪ್ಲರ್ ಟೆಲಿಸ್ಕೋಪ್ ಮೊಟ್ಟ ಮೊದಲ ಬಾರಿಗೆ ಮತ್ತೊಂದು ಸೌರ ಮಂಡಲ ಇರುವ ಬಗ್ಗೆ ಸುಳಿವು ನೀಡಿತ್ತು. ಕೆಪ್ಲರ್ 10 ಬಿ ಸಮಾರು 540 ಜ್ಯೋತಿರ್ ವರ್ಷಗಳ ದೂರದಲ್ಲಿದೆ ಎಂದು ಹೇಳಲಾಯಿತು. ಇದಾದ ಬಳಿಕ ಅನೇಕ ಸಂಶೋಧನೆಗಳು ನಡೆದರೂ ಈಗ ಮಹತ್ವದ ಫಲಿತಾಂಶ ಸಿಕ್ಕಿದೆ.

ಟೆಲಿಸ್ಕೋಪ್ ಗಳು: ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್, ಯುರೋಪಿಯನ ಇಎಸ್ ಒ ಟೆಲಿಸ್ಕೋಪ್, ಇಎಸ್ಎ/ ಸಿಎಸ್ ಎ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇನ್ಮುಂದೆ ಹೊಸ ಸೌರ ಮಂಡಲದಲ್ಲಿ ನೀರಿನ ಮೂಲ , ಪ್ರಮಾಣ, ಜೀವ ರಾಶಿ ನೆಲೆಸಲು ಸಾಧ್ಯವೇ? ಈಗಾಗಲೆ ಜೀವಿಗಳು ನೆಲೆಸಿದ್ದಾರೆಯೆ? ಎಂಬುದರ ಸಂಶೋಧನೆಯಲಿ ತೊಡಗಲಿವೆ. ಇದು ಅಂತ್ಯವಲ್ಲ ಆರಂಭ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nasa's Kepler telescope finds 10 Earth-like planets.Rocky worlds discovered by Kepler telescope are right distance from their parent stars for water to pool on the surface
Please Wait while comments are loading...