ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಅಂಗಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ

|
Google Oneindia Kannada News

ವಾಷಿಂಗ್ ಟನ್, ಫೆ. 26 : ಕೆಂಪು ಗ್ರಹದಲ್ಲಿ ಕಳೆದ 5 ತಿಂಗಳಿಂದ ಬೀಡುಬಿಟ್ಟಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ತನ್ನ ಸೆಲ್ಫಿ ಕ್ಲಿಕ್ಕಿಸಿದೆ. ಮಂಗಳ ಗ್ರಹದ ಮೌಂಟ್ ಶಾರ್ಪ್ ಪರ್ವತವನ್ನು ಕೊರೆದು ಅಲ್ಲಿನ ಪರಿಸರದ ವಸ್ತುಗಳನ್ನು ಸಂಗ್ರಹಿಸಿರುವ ಫೋಟೋವನ್ನು ವಿಜ್ಞಾನಿಗಳಿಗೆ ರವಾನಿಸಿದೆ.

ಐದು ತಿಂಗಳಿನಿಂದ ಮಂಗಳ ಗ್ರಹದ "ಪಹ್ರುಂಪ್ ಬೆಟ್ಟ'ಗಳ ಮೇಲೆ ಸಂಶೋಧನೆ ಮಾಡುತ್ತಿರುವ ರೋವರ್ ಕಳುಹಿಸಿರುವ ಈ ಚಿತ್ರ ಮಂಗಳನ ಅಂಗಳದ ಚಿತ್ರಣವನ್ನು ಸ್ಪಷ್ಟವಾಗಿ ಸೆರೆಹಿಡಿದು ನೀಡಿದೆ. ರೋವರ್ ನ ರೋಬೋಟಿಕ್ ಕೈಯ ಮೇಲಿರುವ ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್ (ಎಂಎಎಚ್ಎಲ್ಐ) ಈ ಚಿತ್ರವನ್ನು ತೆಗೆದಿದೆ. [ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

nasa

ಈ ಚಿತ್ರಗಳನ್ನು ಜನವರಿ ಕೊನೆಯ ಭಾಗದಲ್ಲಿ ತೆಗೆಯಲಾಗಿದೆ. ಮಂಗಳ ಗ್ರಹದ ಮೇಲೆ ಜೀವ ವೈವಿಧ್ಯತೆ ಸಾಧ್ಯವೇ ಎಂಬುದರ ಸಂಶೋಧನೆಗೆ ಈ ಸ್ಯಾಂಪಲ್ ಗಳು ಮತ್ತಷ್ಟು ಉತ್ತೇಜನ ನೀಡಲಿವೆ ಎಂದು ರೋವರ್ ತಂಡದ ಕರ್ಥನ್ ಸ್ಟಾಕ್ ತಿಳಿಸಿದ್ದಾರೆ.[ಸೆಲ್ಫಿ ತೆಗೆಯೋದು ಕಲಿಯೋಕೆ 10 ಸಾವಿರ ರು?!]

ಮಂಗಳ ಗ್ರಹದ ಮೇಲ್ಮೈ ಪರಿಸರ, ವಾತಾವರಣ ಮತ್ತು ಭೂಮಿಯ ಗುಣ ಅರಿಯಲು ಈ ಚಿತ್ರಗಳು ನೆರವಾಗಲಿದೆ. ಕಳಿಸಿರುವ ಚಿತ್ರಗಳನ್ನು ಆಧರಿಸಿ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎಂದು ನಾಸಾ ತಿಳಿಸಿದೆ.

ಮಂಗಳ ಗ್ರಹದ ಮಣ್ಣಿನ ವಿವಿಧ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಕೆಲವಡೆ ರಂಧ್ರ ಕೊರೆದು ಪರೀಕ್ಷೆ ನಡೆಸಲಾಗುತ್ತಿದೆ. ಇದು ಸ್ಪಷ್ಟ ನಿರ್ಧಾರವೊಂದಕ್ಕೆ ಬರಲು ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

English summary
NASA's Curiosity rover has clicked a selfie showing the vehicle at the "Mojave" site on the Red Planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X