ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯಗ್ರಹಣ: NASA ಕಳುಹಿಸಿದ ಅಪರೂಪದ ಚಿತ್ರಗಳು!

ನಾಸಾ ವತಿಯಿಂದ ಸೂರ್ಯಗ್ರಹಣದ ಅಪರೂಪದ ಛಾಯಾಚಿತ್ರಗಳ ಬಿಡುಗಡೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತಗೆಯಲ್ಪಟ್ಟ ಚಿತ್ರಗಳು.

|
Google Oneindia Kannada News

ಆಗಸ್ಟ್ 21ರಂದು ಅಮೆರಿಕದ ಕ್ಯೋಟ್ಯಂತರ ಜನರು ಈ ಬಾರಿಯ ಸೂರ್ಯಗ್ರಹಣ ವೀಕ್ಷಿಸಿದರು. ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ಅಂತೂ ಈ ಬಗ್ಗೆ ಹೆಚ್ಚು ತಯಾರಿ ಮಾಡಿಕೊಂಡು ಅದರ ಕೂಲಂಕಷ ಅಧ್ಯಯನ ನಡೆಸಿದೆ.

ಹಾಗಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೇ ಸೂರ್ಯ ಗ್ರಹಣವನ್ನು ಅಧ್ಯಯನ ನಡೆಸಲಾಗಿದೆ. ಗ್ರಹಣ ಸಂಭವಿಸಿದ ಸಮಯದಲ್ಲಿ ಭೂಮಿಯಲ್ಲಿರುವ ಜನರಿಗೆ ಮೇಲೆ ನೋಡಿದಾಗ ಕಾಣುವ ಫೋಟೋಗಳನ್ನೇ ನೋಡಿರುವ ನಮಗೆ ಇದಕ್ಕಿಂತ ಭಿನ್ನವಾದ ಛಾಯಾಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದೆ.

ಆ ಎಲ್ಲಾ ಛಾಯಾಚಿತ್ರಗಳೂ ಬಾಹ್ಯಾಕಾಶ ಕೇಂದ್ರದ ಡೀಪ್ ಸ್ಪೇಸ್ ಕ್ಲೈಮೇಟ್ ಅಬ್ಸರ್ವೇಟರಿ (ಡಿಎಸ್ ಸಿಒವಿಆರ್) ವಿಭಾಗದಿಂದ ಕ್ಲಿಕ್ಕಿಸಲಾಗಿದೆ. ಈ ವಿಭಾಗದಲ್ಲಿ ಅಳವಡಿಸಲಾಗಿರುವ ಅರ್ತ್ ಪಾಲಿಕ್ರೊಮ್ಯಾಟಿಕ್ ಇಮೇಜಿಂಗ್ ಕ್ಯಾಮೆರಾ (ಎಪಿಕ್) ಈ ವಿಭಿನ್ನ ಚಿತ್ರಗಳನ್ನು ಕ್ಲಿಕ್ಕಿಸಿದೆ.

ಈ ಛಾಯಾಚಿತ್ರಗಳಲ್ಲಿ ಐದನ್ನು ಹೆಕ್ಕಿ ತಂದು ಇಲ್ಲಿ ನೀಡಲಾಗಿದ್ದು, ಅವುಗಳ ಜತೆಯಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಸೂರ್ಯಗ್ರಹಣದ ಬಗ್ಗೆ ಹಂಚಿಕೊಂಡ ವಿವರಣೆಗಳನ್ನು ನೀಡಲಾಗಿದೆ.

ಒಂದೂವರೆ ಗಂಟೆವರೆಗಿದ್ದ ಗ್ರಹಣ

ಒಂದೂವರೆ ಗಂಟೆವರೆಗಿದ್ದ ಗ್ರಹಣ

ಭೂಮಿಯು ಪ್ರತಿ ಗಂಟೆಗೆ ಸಾವಿರಾರು ಕಿ.ಮೀ.ಗಳಷ್ಟು ವೇಗದಲ್ಲಿ ತಿರುಗುತ್ತದೆ. ಹಾಗಾಗಿ, ಸೂರ್ಯನ ಬೆಳಕಿಗೆ ಅಡ್ಡಿಯಾಗಿದ್ದ ಚಂದ್ರನ ನೆರಳು ಭೂಮಿಯ ಮೇಲೆ ದೀರ್ಘಕಾಲದಲ್ಲಿ ಉಳಿಯಲಿಲ್ಲ. ಹಾಗಾಗಿ, ಈ ಬಾರಿಯ ಸೂರ್ಯಗ್ರಹಣ ಸುಮಾರು ಒಂದೂವರೆ ಗಂಟೆಯಷ್ಟು ಮಾತ್ರವೇ ಇತ್ತು.

ಭೂಮಿಯ ಆಕಾರವೇ ಇದಕ್ಕೆ ಕಾರಣ

ಭೂಮಿಯ ಆಕಾರವೇ ಇದಕ್ಕೆ ಕಾರಣ

ಭೂಮಿಯ ಮೇಲಿನ ಚಂದ್ರನ ನೆರಳು ಕೆಲವು ಕಡೆ ವೇಗವಾಗಿ ಸಾಗಿದರೆ, ಮತ್ತೂ ಕೆಲವು ಕಡೆ ನಿಧಾನವಾಗಿ ಸಾಗಿದಂತೆ ಭಾಸವಾಯಿತು. ಇದಕ್ಕೆ ಕಾರಣ, ಚಂದ್ರನ ವೇಗದಲ್ಲಿನ ಬದಲಾವಣೆಯಲ್ಲ. ಚಂದ್ರನ ವೇಗದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಇದಕ್ಕೆ ಕಾರಣವಾಗಿದ್ದೂ, ಭೂಮಿಯ ಆಕಾರ. ಭೂಮಿ ಸಂಪೂರ್ಣ ದುಂಡಗಿಲ್ಲ. ಕಿತ್ತಳೆಯಾಕಾರದಲ್ಲಿದೆ. ಹಾಗಾಗಿ, ಚಂದ್ರನ ನೆರಳು ಕೆಲವು ಕಡೆ ಕೊಂಚ ದೀರ್ಘವಾಗಿದ್ದರೆ ಮತ್ತೆ ಕೆಲವು ಕಡೆ ಅಲ್ಪಾವಧಿವರೆಗೆ ಇತ್ತು.

ಉಪಗ್ರಹಗಳು ನೀಡಿದ ಉಷ್ಣಾಂಶ ಮಾಹಿತಿ

ಉಪಗ್ರಹಗಳು ನೀಡಿದ ಉಷ್ಣಾಂಶ ಮಾಹಿತಿ

ಸೂರ್ಯಗ್ರಹಣದ ನೆರಳು ಬಿದ್ದ ಭೂಮಿಯ ಭಾಗದಲ್ಲಿ ಉಷ್ಣಾಂಶ ಕೆಲ ಡಿಗ್ರಿಗಳವರೆಗೆ ಇಳಿದಿದ್ದನ್ನು ಉಪಗ್ರಹಗಳು ದಾಖಲಿಸಿವೆ. ಅದರಂತೆ, ಸೂರ್ಯಗ್ರಹಣವನ್ನು ದೀರ್ಘಕಾಲ ಅನುಭವಿಸಿದ ಮಧ್ಯ ಅಮೆರಿಕದ ಪ್ರಾಂತ್ಯಗಳಲ್ಲಿ ಉಷ್ಣಾಂಶ ಗಣನೀಯವಾಗಿ ತಗ್ಗಿದ್ದನ್ನು ಉಪಗ್ರಹಗಳ ದಾಖಲೆಗಳು ತಿಳಿಸುತ್ತಿವೆ.

ಬಾಹ್ಯಾಕಾಶ ಕಿಂಡಿಯಿಂದ ಅದ್ಭುತ ಛಾಯಾಚಿತ್ರ

ಬಾಹ್ಯಾಕಾಶ ಕಿಂಡಿಯಿಂದ ಅದ್ಭುತ ಛಾಯಾಚಿತ್ರ

ಬಾಹ್ಯಾಕಾಶ ನಿಲ್ದಾಣದ ಕಿಂಡಿಯಿಂದ ನೋಡಿದಾಗ ಚಂದ್ರನ ನೆರಳು ಕೆಲವು ಪ್ರದೇಶದ ಮೇಲಷ್ಟೇ ಬಿದ್ದಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕೇವಲ ಬಾಹ್ಯಾಕಾಶ ನಿಲ್ದಾಣದಿಂದ ಮಾತ್ರ ಇಂಥ ಅಪರೂಪದ ದೃಶ್ಯ ಸಿಗುತ್ತದೆ.

ಒರೆಗಾನ್ ನ ಅಂತರಿಕ್ಷದಲ್ಲಿ ಸಿಕ್ಕ ಚಿತ್ರ

ಒರೆಗಾನ್ ನ ಅಂತರಿಕ್ಷದಲ್ಲಿ ಸಿಕ್ಕ ಚಿತ್ರ

ಇದು ನಾಸಾದ ಗಲ್ಫ್ ಸ್ಟ್ರೀಮ್ 3 ಜೆಟ್ ಉಪಗ್ರಹ ಕಳುಹಿಸಿರುವ ಚಿತ್ರ. ಇದು, ಸೂರ್ಯಗ್ರಹಣ ಸಂಭವಿಸಿದ ಕಾಲಘಟ್ಟದಲ್ಲಿ ಗ್ರಹಣ ಮೊದಲು ಗೋಚರಿಸಿದ ಅಮೆರಿಕದ ಒರೆಗಾನ್ ನ ಮೇಲಿನ ಅಂತರಿಕ್ಷದಲ್ಲಿ ತಿರುಗುತ್ತಿತ್ತು. ಆಗ, ಅದು ತೆಗೆದ ಫೋಟೋ ಇದು.

English summary
NASA releases rare photos of Solar eclipse which happened recently and appeared in America. These photos are taken from International Space Station and they explain different story of eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X