Sunita Williams: ಸುನಿತಾ ವಿಲಿಯಮ್ಸ್ ನಾಳೆಯೇ ಭೂಮಿಗೆ, ನಾಸಾ ಅಧಿಕೃತ ಘೋಷಣೆ!
ಭಾರತ ಮೂಲದ ಬಾಹ್ಯಾಕಾಶ ವಿಜ್ಞಾನಿ ಭೂಮಿಗೆ ಬರಲು ಪರದಾಡುತ್ತಿದ್ದರೆ, ಇತ್ತ ಭೂಮಿ ಮೇಲೆ ಇರುವ ವಿಜ್ಞಾನಿಗಳು ಚಿಂತೆ ಮಾಡುವಂತೆ ಆಗಿತ್ತು. ಕೆಲವೇ ಕೆಲವು ದಿನಗಳ ಕೆಲಸ ಅಂತಾ ಬಾಹ್ಯಾಕಾಶಕ್ಕೆ ಹಾರಿದ್ದ ಸುನಿತಾ ವಿಲಿಯಮ್ಸ್ ಬರೋಬ್ಬರಿ ಮುಕ್ಕಾಲು ವರ್ಷಗಳ ಕಾಲ ಅಂದ್ರೆ, 9 ತಿಂಗಳು ಆಕಾಶದಲ್ಲಿ ಸಿಲುಕಿ ಒದ್ದಾಡಿಬಿಟ್ಟರು. ಹೀಗಿದ್ದಾಗ ಸುರಕ್ಷಿತವಾಗಿ ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆತರಲು ಇದೀಗ ನಾಸಾ ಸಂಸ್ಥೆ ಮುಂದಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಜ್ಞಾನಿಗಳು ಅಧ್ಯಯನ ನಡೆಸುತ್ತಾರೆ. ಆ ಮೂಲಕ ಮನುಷ್ಯರ ಭವಿಷ್ಯಕ್ಕಾಗಿ ಪ್ರತಿದಿನವೂ ಹೊಸ ಹೊಸ ಅಧ್ಯಯನ ನಡೆಯುತ್ತಲೇ ಇರುತ್ತವೆ. ಹೀಗಿದ್ದಾಗ ಭೂಮಿ ಮೇಲಿಂದ ಆಗಾಗ ಬಾಹ್ಯಾಕಾಶ ವಿಜ್ಞಾನಿಗಳನ್ನು ಆಕಾಶಕ್ಕೆ ಕಳುಹಿಸುತ್ತದೆ ನಾಸಾ ಸಂಸ್ಥೆ. ಅದೇ ರೀತಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಅವರನ್ನ ಕೂಡ ನಾಸಾ ಸಂಸ್ಥೆ ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅಂತಿಮವಾಗಿ ಸುನಿತಾ ವಿಲಿಯಮ್ಸ್‌ರ ಸುರಕ್ಷತೆ ದೃಷ್ಟಿಯಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಬಿಟ್ಟು ಬರಲಾಗಿತ್ತು.

ನಾಳೆಯೇ ಸುನಿತಾ ವಿಲಿಯಮ್ಸ್ ಭೂಮಿಗೆ!
ಭಾರತ ಮೂಲದ ನಂಟು ಹೊಂದಿರುವ ಸುನಿತಾ ವಿಲಿಯಮ್ಸ್ ಅವರು ತಮ್ಮ ಬಾಹ್ಯಾಕಾಶ ಪ್ರವಾಸದಿಂದಲೇ ಖ್ಯಾತಿ ಪಡೆದಿದ್ದರು. ಹಲವು ಬಾರಿ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ. ಇದೀಗ 9 ತಿಂಗಳ ನಂತರ ಮರಳಿ ಭೂಮಿಗೆ ವಾಪಸ್ ಬರುತ್ತಿದ್ದಾರೆ ಸುನಿತಾ ವಿಲಿಯಮ್ಸ್. ಮಾರ್ಚ್ 18ರ ಮಂಗಳವಾರ ಅಮೆರಿಕದ ಸ್ಥಳೀಯ ಕಾಲಮಾನ ಸಂಜೆ 5.57ಕ್ಕೆ ಇವರಿಬ್ಬರೂ ಭೂಮಿಗೆ ಬರಲಿದ್ದಾರೆ ಎಂದು ನಾಸಾ ತಿಳಿಸಿದೆ.
ಬಾಹ್ಯಾಕಾಶದಲ್ಲಿ 9 ತಿಂಗಳಿಂದ ನರಳಾಟ
ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದ್ದರು. ಕೇವಲ 8 ದಿನಗಳ ಕಾಲ ಅಲ್ಲಿ ಉಳಿದು, ಕಾರ್ಯಾಚರಣೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ದಿಢಿರ್ ಅಂತಾ ತಾಂತ್ರಿಕ ಸಮಸ್ಯೆ ಎದುರಾಗಿ ಗಗನಯಾತ್ರಿಗಳನ್ನ ಬಾಹ್ಯಾಕಾಶದಲ್ಲಿಯೇ ಬಿಟ್ಟು ಸ್ಟಾರ್‌ಲೈನರ್ ಭೂಮಿಗೆ ಮರಳಿ ಬಂದಿತ್ತು. ಹೀಗಾಗಿ ಕಳೆದ 9 ತಿಂಗಳಿಂದ ಅಲ್ಲಿಯೇ ಸಿಲುಕಿ ಒದ್ದಾಡಿದ್ದರು ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಅವರು.
ನಾಳೆಯೇ ಭೂಮಿಗೆ ಬರಲಿದ್ದಾರೆ!
'ನಾಸಾ' ಸೇರಿ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ಸಮಸ್ಯೆ ಸರಿ ಮಾಡಲು ಪ್ರಯತ್ನಿಸಿದ್ದರು. ಇದು ವರ್ಕೌಟ್ ಆಗದೇ ಕೊನೆಗೆ 'ಸ್ಪೇಸ್ ಎಕ್ಸ್' ನೌಕೆ ಆಕಾಶಕ್ಕೆ ಹಾರಿತ್ತು. ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆ ಡ್ಯ್ರಾಗನ್ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿ, ಹಲವು ತಿಂಗಳಿಂದಲೂ ಕಾರ್ಯಾಚರಣೆಯನ್ನ ನಡೆಸಿದೆ. ಇದರ ಫಲವಾಗಿ ಮಾರ್ಚ್ 18 ರಂದು ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ ಭೂಮಿಗೆ ಬಂದು ಇಳಿಯಲಿದ್ದಾರೆ.












Click it and Unblock the Notifications