• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಮೋದಿ ಭಾಷಣ

|

ನವದೆಹಲಿ,ಸೆ. 2: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾರ್ಷಿಕ ಸಾಮಾನ್ಯ ಸಭೆ ಆನ್ಲೈನ್ ಮೂಲಕ ವರ್ಚ್ಯುವಲ್ ವೇದಿಕೆ ರೂಪುಗೊಳ್ಳಲಿದೆ.

   Indian Generic ‌ಔಷಧ ತಯಾರಕರಿಗೆ ಲಾಭ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಕೊರೊನಾವೈರಸ್ ಸೋಂಕು ಭೀತಿಯಿಂದ ಈ ಬಾರಿ ಸಭೆಯಲ್ಲಿ ದೇಶದ ಪ್ರತಿನಿಧಿಗಳು ಆನ್ ಲೈನ್ ಭಾಷಣದ ಮೂಲಕ ಪಾಲ್ಗೊಳ್ಳಲಿದ್ದಾರೆ. 75ನೇ ಸಾಮಾನ್ಯ ಸಭೆಯ ಗಣ್ಯರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಸೆಪ್ಟೆಂಬರ್ 26 ಎಂದು ನಿಗದಿಯಾಗಿದೆ.

   ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಇತಿಹಾಸ ನಿರ್ಮಿಸಿದ್ದ ಅನಂತ್

   ಸಾಮಾನ್ಯ ಸಭೆಯ ಚರ್ಚೆ ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 29ರ ತನಕ ನಡಲಿದೆ. ಜೀವ ವೈವಿಧ್ಯತೆ ಬಗ್ಗೆ ಸೆಪ್ಟೆಂಬರ್ 30, ಅಣ್ವಸ್ತ್ರ ಸಂಪೂರ್ಣ ನಿರ್ಮೂಲನೆ ಬಗ್ಗೆ ಅಕ್ಟೋಬರ್ 2ರಂದು ಸಭೆ ನಿಗದಿಯಾಗಿದೆ.

   ಬ್ರೆಜಿಲ್ ಅಧ್ಯಕ್ಷರಾದ ಜಾಯಿರ್ ಬೊಲ್ಸೊನಾರೋ ಮೊದಲ ಭಾಷಣಕಾರರಾಗಿದ್ದು, ಯುಎಸ್ ಅಧ್ಯಕ್ಷ ಟ್ರಂಪ್ ಅವರು ನಂತರ ಮಾತನಾಡುವ ಸಾಧ್ಯತೆಯಿದೆ.

   ಮಿಕ್ಕಂತೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಹಸನ್ ರೊಹಾನಿ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೊನ್ ಅವರು ವರ್ಚುಯಲ್ ಸಭೆಯಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ.

   English summary
   Prime Minister Narendra Modi is expected to address the UN General Assembly on 26 September, according to a provisional list of speakers issued by the world body for the high-level meeting.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X