ಅಮೆರಿಕಾ: ರಿಪಬ್ಲಿಕನ್ ಪಕ್ಷದ ಸಂಸತ್ ಸದಸ್ಯನನ್ನು ಗುಂಡಿಕ್ಕಿ ಹತ್ಯೆ

Posted By:
Subscribe to Oneindia Kannada

ವಾಷಿಂಗ್ಟನ್, ಜೂನ್ 13: ಅಮೆರಿಕದ ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಪಟ್ಟಣದಲ್ಲಿ ಅಭ್ಯಾಸ ನಿರತ ಬೇಸ್ ಬಾಲ್ ತಂಡವೊಂದರ ಆಟಗಾರರ ಮೇಲೆ ನಡೆದ ಹಠಾತ್ ಗುಂಡಿನ ದಾಳಿಯಲ್ಲಿ ಲೂಸಿಯಾನದಿಂದ ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಸಂಸತ್ತಿಗೆ ಆಯ್ಕೆಯಾಗಿದ್ದ ಸ್ಟೀವ್ ಸ್ಕಾಲಿಸ್ ಸಾವನ್ನಪ್ಪಿದ್ದಾರೆ.

ಗುಂಡಿನ ದಾಳಿಯಲ್ಲಿ ಸ್ಕಾಲಿನ್ ಸಾವನ್ನಪ್ಪಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲೂಸಿಯಾನದಿಂದ ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಸಂಸತ್ತಿಗೆ ಆಯ್ಕೆಯಾಗಿರುವ ಸ್ಟೀವ್ ಸ್ಕಾಲಿಸ್ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆಯೆಂದು ಆತ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ 5 ಆಟಗಾರರು ಗಾಯಗೊಂಡಿರಬಹುದೆಂದು ಶಂಕಿಸಲಾಗಿದೆ.

ಇ. ಮೊರ್ನೆ ಸ್ಟ್ರೀಟ್ ನಲ್ಲಿರುವ ಮೈದಾನದಲ್ಲಿ ಆಟಗಾರರು ಆಡುತ್ತಿದ್ದ ವೇಳೆ ಎಲ್ಲಿಂದಲೋ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ತಂದಿದ್ದ ರೈಫಲ್ ನಿಂದ ಗುಂಡಿನ ದಾಳಿ ನಡೆಸಿದ್ದಾನೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

'Multiple shooting' at congressional baseball game practice field

ಗುಂಡಿನ ಸದ್ದು ಕೇಳಿ ಮೈದಾನದ ಹತ್ತಿರದಲ್ಲೇ ಇದ್ದ ಮೂವರು ಪೊಲೀಸ್ ಅಧಿಕಾರಿಗಳು ಮೈದಾನದ ಕಡೆಗೆ ಆಗಮಿಸಿದ್ದಾರೆ. ಆದರೆ, ಅವರು ಕಾರ್ಯಾಚರಣೆಗೆ ತೊಡಗುವ ಮೊದಲೇ ಬಂದೂಕುಧಾರಿ ಅವರ ಮೇಲೂ ಗುಂಡಿನ ದಾಳಿ ನಡೆಸಿದ. ಆದರೆ, ಪೊಲೀಸರು ಇದರಿಂದ ತಪ್ಪಿಸಿಕೊಂಡರು. ನಂತರದ ಕಾರ್ಯಾಚರಣೆಯಲ್ಲಿ ದಾಳಿಕೋರನನ್ನು ಬಂಧಿಸಿದರು.

ಟ್ರಂಪ್ ಖೇದ: ಘಟನೆಯ ಬಗ್ಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಘಟನೆಯಿಂದ ತೀವ್ರ ಆಘಾತವಾಗಿದ್ದು, ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A "multiple shooting" was reported early Wednesday at a congressional baseball game practice field in Alexandria, Va. ABC 7 News reported a "multiple shooting" in the 400 block of E. Monroe Street.
Please Wait while comments are loading...