ಇಂಡೋನೇಷ್ಯಾ ರಾಜಧಾನಿಯಲ್ಲಿ ಬಾಂಬ್ ಸ್ಫೋಟ, 3 ಸಾವು
ಜಕಾರ್ತಾ, ಜನವರಿ, 14: ಒಂದೆಡೆ ಭಾರತದ ಗಡಿಯ ಮೇಲೆ ಉಗ್ರರು ದಾಳಿ ನಡೆಸಿದ್ದ ಬೆನ್ನಲ್ಲೆ ಜಕಾರ್ತಾದ ವಿಶ್ವಸಂಸ್ಥೆಯ ಕಚೇರಿ ಬಳಿ ಬಾಂಬ್ ಸ್ಫೋಟವಾಗಿದೆ. ಗುರುವಾರ ಬೆಳಗ್ಗೆ ನಡೆದ ಸ್ಫೋಟದಲ್ಲಿ 3 ಮಂದಿ ಸಾವಿಗೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ.
ಪಶ್ಚಿಮ ಇಂಡೋನೇಷ್ಯಾದಲ್ಲಿ ಅಲ್ಲಿನ ಸಮಯ 10.40ಕ್ಕೆ ಬಾಂಬ್ ಸ್ಫೋಟವಾಗಿದೆ. ಪೊಲೀಸರು ಹೇಳುವಂತೆ 10-14 ಜನ ಉಗ್ರರ ತಂಡ ದಾಳಿ ಮಾಡಿದೆ.[ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಮಸೂದ್ ಸೆರೆ]

ಶಾಪಿಂಗ್ ಮಾಲ್ ಮತ್ತು ವಿಶ್ವಸಂಸ್ಥೆ ಕಚೇರಿ ನಡುವಣನ ಜಾಗದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ಸಹ ನಡೆದಿದ್ದು ಹೆಚ್ಚಿನ ಮಾಹಿತಿ ಸಿಗಬೇಕಿದೆ.[ಉಗ್ರವಾದ ಪ್ರಪಂಚಕ್ಕಂಟಿದ ಕ್ಯಾನ್ಸರ್: ಒಬಾಮಾ]
ಕಳೆದೆ ಡಿಸೆಂಬರ್ ನಲ್ಲಿ ಐಎಸ್ ಐಎಸ್ ಉಗ್ರ ದಾಳಿ ನಡೆಸುವ ಎಚ್ಚರಿಕೆ ನೀಡಿತ್ತು. ಅಮೆರಿಕದ ಅಧ್ಯಕ್ಷರಾಗಿ ಕೊನೆಯ ಭಾಷಣ ಮಾಡಿದ ಬರಾಕ್ ಒಬಾಮಾ ಸಹ ಉಗ್ರವಾದದ ಆತಂಕದ ಬಗ್ಗೆ ಮಾತನಾಡಿದ್ದರು.












Click it and Unblock the Notifications