Earthquake: ಗಡಗಡ ನಡುಗಿದ ಭೂಮಿ, 296 ಮಂದಿ ಸಾವು
ರಬಾತ್: ಪ್ರಾಕೃತಿಕ ವಿಕೋಪಗಳಿಂದ ಮಾನವ ತಪ್ಪಿಸಿಕೊಳ್ಳಲು ಆಗಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಇದೀಗ ಕೂಡ ಅಷ್ಟೇ ಮೊರಾಕ್ಕೊದಲ್ಲಿ ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪಕ್ಕೆ 296 ಜನ ಬಲಿಯಾಗಿದ್ದು, ಸಾವಿರಾರು ಮಂದಿ ಆಸ್ಪತ್ರೆಗೆ ಸೇರಿದ್ದಾರೆ. ನಿನ್ನೆ ರಾತ್ರಿಯ ತನಕ ತಣ್ಣಗೆ ಇದ್ದ ಮೊರಾಕ್ಕೊ ಬೆಳಗಾಗುವ ವೇಳೆಗೆ ಅಕ್ಷರಶಃ ನರಕವಾಗಿ ಬದಲಾಗಿದೆ.
#Watch...the moment the earthquake occurred in the city of #Agadir#Morocco #Earthquake #Morocco #Earthquake #Marrakesh #morocco #maroc #earthquake pic.twitter.com/hRa2H2swFN
— mishikasingh (@mishika_singh) September 9, 2023
ಅಷ್ಟಕ್ಕೂ ಮರ್ರಾಕೆಚ್‌ನ ನೈಋತ್ಯಕ್ಕೆ ಸುಮಾರು 71 ಕಿಲೋ ಮೀಟರ್ ದೂರದಲ್ಲಿ ಇದೀಗ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಪ್ರವಾಸಿ ನಗರ ಎಂದೇ ಖ್ಯಾತಿ ಪಡೆದ ಮರ್ರಾಕೆಚ್ ಪ್ರದೇಶದಲ್ಲಿ 28 ಜನ ಮೃತಪಟ್ಟಿದ್ದಾರೆ. ಔರ್ಜಾಜೆಟ್ ಪ್ರಾಂತ್ಯದಲ್ಲಿ 6 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಭೂಕಂಪದ ಬಳಿಕ ನೂರಾರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿ ನರಳಾಡಿದ್ದು ರಕ್ಷಣಾ ಕಾರ್ಯಾಚರಣೆ ಸಾಗಿದೆ. ಆದ್ರೆ ನೂರಾರು ಮಂದಿ ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಭೂಕಂಪದ ಭಯಾನಕತೆ ಹೇಗಿತ್ತು?
ಮೊರಾಕ್ಕೊ ಉತ್ತರ ಆಫ್ರಿಕಾದ ದೇಶವಾಗಿದ್ದು, ಇಲ್ಲಿಗೆ ಅತಿಹೆಚ್ಚು ಪ್ರಮಾಣದಲ್ಲಿ ಪ್ರವಾಸಿ ಪಡೆ ಬರುತ್ತದೆ. ಹಾಗೇ ಮೊರಾಕ್ಕೊ ದೇಶಕ್ಕೆ ಪ್ರವಾಸೋದ್ಯಮ ಸಾಕಷ್ಟು ಆದಾಯ ಕೂಡ ತಂದುಕೊಡತ್ತದೆ. ಹೀಗೆ ನಿನ್ನೆ ರಾತ್ರಿ ಪ್ರವಾಸಿಗರು ಆರಾಮವಾಗಿ ಓಡಾಡಿಕೊಂಡು ಇದ್ರು. ಇದ್ದಕ್ಕಿದ್ದಂತೆ ಭೂಮಿ ನಡುಗಲು ಶುರುವಾಗಿದ್ದು, ಪ್ರವಾಸಿಗರು ಓಡಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಕಟ್ಟಡಗಳು ಕೂಡ ಕುಸಿದಿವೆ. ಜನರಿಗೆ ಎಲ್ಲಿ ಹೋಗೋದು ದೇವರೆ ಅಂತಾ ಚಿಂತೆ ಶುರುವಾಗಿದೆ. ನೋಡ ನೋಡುತ್ತಲೇ ಮೊರಾಕ್ಕೊ ಸ್ಮಶಾನವಾಗಿ ಬದಲಾಗಿತ್ತು.
ಮನೆ, ಕಟ್ಟಡಗಳ ಅವಶೇಷಗಳ ಅಡಿ ಲೆಕ್ಕವಿಲ್ಲದಷ್ಟು ಜನರು ಸಿಲುಕಿ ಕೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಹೀಗಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಕಡೆ ಭೂಕಂಪನದ ವೇಳೆ ಸೆರೆ ಸಿಕ್ಕ ವಿಡಿಯೋ ಹಾಗೂ ಸಿಸಿ ಕ್ಯಾಮೆರಾ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮರ್ರಾಕೆಚ್‌ನ ನೈಋತ್ಯ ಭಾಗ ಪದೇ ಪದೆ ಭೂಕಂಪನಕ್ಕೆ ತುತ್ತಾಗಿ ನಿತ್ಯವೂ ಪರದಾಡುತ್ತಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ್ದ ಭೂಕಂಪದಲ್ಲೂ 628 ಜನರು ಮೃತಪಟ್ಟಿದ್ದರು.
A terrifying moment of a collapse captured by a security camera#Maroc #moroccoearthquake #Morocco #earthquakemorocco #earthquake pic.twitter.com/9aeA7XsmoS
— Kinetik (@KinetikNews) September 9, 2023
ಒಟ್ನಲ್ಲಿ ಪ್ರಕೃತಿ ಮುನಿಸಿಗೆ ಸಿಲುಕಿ ಬಡ ದೇಶ ಮೊರಾಕ್ಕೊ ಪರದಾಡಿದೆ. ಜಗತ್ತಿನಾದ್ಯಂತ ಜನ ಮೊರಾಕ್ಕೊ ನೋವಿಗೆ ಮಿಡಿದಿದ್ದಾರೆ. ಹಾಗೇ ಭಾರತ ಕೂಡ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದು, ಸಂಕಷ್ಟಕ್ಕೆ ಸಿಲುಕಿರುವ ಜನಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಕ್ಕಳು ಸಂಕಷ್ಟಕ್ಕೆ ಸಿಲುಕಿ ನರಳಾಡುತ್ತಿರುವ ವಿಡಿಯೋಗಳು ಕರಳು ಹಿಂಡುವಂತೆ ಮಾಡಿದೆ. ಹೀಗಾಗಿ ಪ್ರಪಂಚವೇ ಮೊರಾಕ್ಕೊ ನೋವಿಗೆ ಧ್ವನಿಯಾಗಿ ನಿಲ್ಲಬೇಕಿದೆ.












Click it and Unblock the Notifications