ಅಮೆರಿಕಾ ಮಾರುಕಟ್ಟೆಯಲ್ಲಿ ಮೋದಿ ಮ್ಯಾಜಿಕ್ ಮೋಡಿ!
ನ್ಯೂಯಾರ್ಕ್, ನ.4 : ಭಾರತದ ಜನರಿಗೆ ಮೋಡಿ ಮಾಡಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ನ್ಯೂಯಾರ್ಕ್ ನಲ್ಲಿಯೂ ತಮ್ಮ ಪ್ರಭಾವ ತೋರಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮೋದಿ ಮ್ಯಾಜಿಕ್ ಎನ್ನುವ ತಿಂಡಿ ಮಾರುಕಟ್ಟಗೆ ಲಗ್ಗೆ ಇಟ್ಟಿದ್ದು, ಭರ್ಜರಿಯಾಗಿ ವ್ಯಾಪಾರವಾಗುತ್ತಿದೆ.
ನ್ಯೂಯಾರ್ಕ್ ನಲ್ಲಿನ ಭಾರತೀಯರು ದೀಪಾವಳಿ ಹಬ್ಬಕ್ಕೆ ಗುಲಾಜ್ ಜಾಮೂನ್ ಮತ್ತು ಇತರ ಸಿಹಿ ತಿಂಡಿಗಳ ಜೊತೆಗೆ ಮೋದಿ ಮ್ಯಾಜಿಕ್'ಖಾರದ ತಿನಸನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರಂತೆ. ಇದು ಒಂದು ಬಗೆಯ ಚೌಚೌ ಆಗಿದ್ದು, ಖಡಕ್ ಖಾರ ಹೊಂದಿರುವ ಇದಕ್ಕೆ ಮೋದಿ ಮ್ಯಾಜಿಕ್ ಎಂದು ಹೆಸರಿಟ್ಟು ಮಾರಾಟ ಮಾಡಲಾಗುತ್ತಿದೆ.

ನ್ಯೂಜೆರ್ಸಿಯ ರಾಜ್ ಭೋಗ್ ಸಿಗಿ ತಿಂಡಿ ಅಂಗಡಿಯ ಮಾಲೀಕರಾದ ಅರವಿಂದ್ ಪಟೇಲ್ ಈ ಮೋದಿ ಮ್ಯಾಜಿಕ್ ತಯಾರಿಸಿದ್ದಾರೆ. 10 ಲಕ್ಷ ಜನರಿಗೆ ಮೋದಿ ಮ್ಯಾಜಿಕ್ ಅನ್ನು ಉಚಿತವಾಗಿ ಹಂಚಲು ಅರವಿಂದ್ ಪಟೇಲ್ ತೀರ್ಮಾನಿಸಿದ್ದಾರೆ.
ನರೇಂದ್ರ ಮೋದಿ ಮೂರನೇ ಬಾರಿ ಗುಜರಾತ್ ಗದ್ದುಗೆ ಏರಿದಾಗ, ರಾಜ್ ಭೋಗ್ ಅಂಗಡಿಯವರು 11 ವರ್ಷಗಳ ಮೋದಿ ಆಳ್ವಿಕೆ ನೆನಪಿಯಲ್ಲಿ ಜನರಿಗೆ 11 ಬಗೆಯ ಪೇಡಾಗಳನ್ನು ತಯಾರಿಸಿ ಹಂಚಿದ್ದರು. ಸದ್ಯ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಮೋದಿ ಮ್ಯಾಜಿಕ್ ಖಾರದ ತಿನಿಸಿನ ಮೊರೆ ಹೋಗಿದ್ದಾರೆ.
ನರೇಂದ್ರ ಮೋದಿ ಅವರ ಅಪ್ಪಟ ಅಭಿಯಾನಿಯಾಗಿರುವ ಅರವಿಂದ್ ಪಟೇಲ್ ಲೋಕಸಭಾ ಚುಣಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಭಾರತಕ್ಕೆ ಮರಳಿ ಇಲ್ಲಿನ ಜನರಿಗೂ ಮೋದಿ ಮ್ಯಾಜಿಕ್ ನೀಡಲು ಮುಂದಾಗಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಮೋದಿ ಮ್ಯಾಜಿಕ್ ಗೆ ಸಖತ್ ಡಿಮಾಂಡ್ ಇದೆ. ಈ ಮೋದಿ ಮ್ಯಾಜಿಕ್ ಒಂದರ ಬೆಲೆ 45 ಸೆಂಟ್ ಇದ್ದು, ಉಚಿತವಾಗಿ 10 ಲಕ್ಷ ಜನರಿಗೆ ಹಂಚಲು 45 ಸಾವಿರ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ ಎಂದು ರಾಜ್ ಭೋಗ್ ಅಂಗಡಿಯವರು ಹೇಳಿದ್ದಾರೆ.












Click it and Unblock the Notifications