ಭಾರತೀಯ ವಾಯುಸೇನೆಗೆ ರಾಫೆಲ್ ಯುದ್ಧವಿಮಾನದ ಶಕ್ತಿ
ಪ್ಯಾರಿಸ್, ಏ. 11 : ಫ್ರಾನ್ಸ್ ದೇಶಕ್ಕೆ ನೀಡಿದ ಮೊದಲ ಭೇಟಿಯಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಒಪ್ಪಂದಕ್ಕೆ ಕೈಹಾಕಿದ್ದು, ಫ್ರಾನ್ಸ್‌ನಲ್ಲಿ ನಿರ್ಮಿತವಾದ ಅತ್ಯಾಧುನಿಕ 36 ರಾಫೆಲ್ ಜೆಟ್ ಯುದ್ಧವಿಮಾನಗಳನ್ನು ಕೊಳ್ಳುವುದಾಗಿ ಘೋಷಿಸಿದ್ದಾರೆ. ಭಾರತದ ವಾಯುಪಡೆಗೆ ಈ ಯುದ್ಧವಿಮಾನಗಳು ಭಾರೀ ಶಕ್ತಿ ತುಂಬಲಿವೆ.
ಜಿ7 ರಾಷ್ಟ್ರಗಳ ಭೇಟಿಗಾಗಿ ವಿದೇಶಯಾತ್ರೆಯಲ್ಲಿರುವ ನರೇಂದ್ರ ಮೋದಿ ಅವರು, ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಘೋಷ್ಠಿಯಲ್ಲಿ ಶುಕ್ರವಾರ ಈ ವಿಷಯವನ್ನು ಪ್ರಕಟಿಸಿದರು. "ಹಾರಾಡುವ ಸ್ಥಿತಿಯಲ್ಲಿರುವ 36 ರಾಫೆಲ್ ಜೆಟ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ಫ್ರೆಂಚ್ ಸರಕಾರವನ್ನು ಕೇಳಿದ್ದೇವೆ" ಎಂದು ಅವರು ತಿಳಿಸಿದರು.

ಈ ಘೋಷಣೆಯೊಂದಿಗೆ, ಹಿಂದಿನ ಯುಪಿಎ ಸರಕಾರ 126 ಎಂಎಂಆರ್‌ಎಸಿ (ಮೀಡಿಯಂ-ಮಲ್ಟಿ ರೋಲ್ ಕಂಬ್ಯಾಟ್ ಏರ್ಕ್ರಾಫ್ಟ್) ಪೂರೈಕೆ ಮಾಡಲು ಮಾಡಿಕೊಂಡಿದ್ದ ಒಪ್ಪಂದ ನೆನೆಗುದಿಗೆ ಬಿದ್ದಂತಾಗುತ್ತದೆ. ಅದೂ ಅಲ್ಲದೆ, ಈ ಒಪ್ಪಂದದಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಕಂಪನಿಗೂ ಹಿನ್ನಡೆಯಾದಂತಾಗಿದೆ.
ರಾಫೆಲ್ ಯುದ್ಧವಿಮಾನಗಳ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆಯಾದರೂ, ಒನ್ಇಂಡಿಯಾಗೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಫ್ರಾನ್ಸ್ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿದರೂ ಮೊದಲ ರಾಫೆಲ್ ಯುದ್ಧವಿಮಾನ ಭಾರತದ ನೆಲದ ಮೇಲೆ ಇಳಿಯಲು ಇನ್ನೂ ಒಂದು ವರ್ಷ ತೆಗೆದುಕೊಳ್ಳಲಿದೆ.
I may have to go to court if the government clears the Raffale deal in which TDK got a hefty bribe. Better we buy Dassault company than that
— Subramanian Swamy (@Swamy39) April 10, 2015 4 ಬಿಲಿಯನ್ ಡಾಲರ್ ಒಪ್ಪಂದದ ವಿರುದ್ಧ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರೇ ಅಪಸ್ವರ ನುಡಿದಿದ್ದಾರೆ. ಈ ಯುದ್ಧ ವಿಮಾನಗಳನ್ನು ಯಾವ ದೇಶದವರೂ ಕೊಳ್ಳುವುದಿಲ್ಲ. ಒತ್ತಡಕ್ಕೊಳಗಾಗಿ ಮೋದಿಯವರು ಕಡಿಮೆ ಇಂಧನ ಸಾಮರ್ಥ್ಯವುಳ್ಳ ರಾಫೆಲ್ ಯುದ್ಧ ವಿಮಾನಗಳನ್ನು ಕೊಂಡರೆ ನಾನು ಕೋರ್ಟಿಗೆ ಹೋಗುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ.












Click it and Unblock the Notifications