• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಿಂದ ಅಮೆರಿಕ ಯುದ್ಧನೌಕೆಗಳ ಪ್ರತಿರೂಪ ತಯಾರಿಸಿ ತರಬೇತಿ

|
Google Oneindia Kannada News

ಬೀಜಿಂಗ್, ನವೆಂಬರ್ 08: ಚೀನಾದ ಸೇನೆಯು ಅಮೆರಿಕ ಯುದ್ಧನೌಕೆಗಳ ಪ್ರತಿರೂಪ ತಯಾರಿಸಿ ತರಬೇತಿ ಶುರು ಮಾಡಿದೆ.

ಅಮೆರಿಕ ನೌಕಾಪಡೆಯ ಯುದ್ಧ ವಿಮಾನಗಳು, ಇತರೆ ಯುದ್ಧ ಹಡುಗುಗಳ ಮಾದರಿಯನ್ನು ಚೀನಾ ಸೇನೆಯು ಅಲ್ಲಿನ ಮರುಭೂಮಿ ಕ್ಸಿನ್‌ಜಿಯಾಂಗ್‌ನಲ್ಲಿ ರೂಪಿಸಿದೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಭೆ ಆರಂಭಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಭೆ ಆರಂಭ

ತರಬೇತಿ ಗುರಿಯಾಗಿ ಬಳಸುವುದು ಇದರ ಉದ್ದೇಶ ಎನ್ನಲಾಗಿದೆ, ಮಕ್ಸರ್ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಯು ಉಪಗ್ರಹ ಆಧರಿಸಿ ಸೆರೆಹಿಡಿದಿರುವ ಚಿತ್ರಗಳಲ್ಲಿ ಇದು ದೃಢಪಟ್ಟಿದೆ.

ಚೀನಾದ ಹಡಗು ನಿರೋಧಕ ಕ್ಷಿಪಣಿ ಕಾರ್ಯಕ್ರಮದ ಉಸ್ತುವಾರಿಯನ್ನು ಅಲ್ಲಿನ ಪೀಪಲ್ಸ್ ಲಿಬರೇಷನ್ ಆರ್ಮಿ ರಾಕೆಟ್ ಫೋರ್ಸ್ ಹೊಂದಿದೆ. ಚೀನಾದ ರಕ್ಷಣಾ ಸಚಿವಾಲಯ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕ ನೌಕಾಪಡೆಯ ಯುದ್ಧ ವಿಮಾನಗಳ ಪೂರ್ಣ ಮಾದರಿ, ಅರ್‌ಲೀಗ್ ಬರ್ಕ್ ಮಾರ್ಗದರ್ಶಿ ಕ್ಷಿಪಣಿ ಧ್ವಂಸಕದ ಎರಡು ಮಾದರಿಗಳು, 6 ಮೀಟರ್ ಉದ್ದದ ರೈಲು ವ್ಯವಸ್ಥೆ, ಅದರ ಮೇಲೆ ಹಡಗು ಗಾತ್ರದ ನಿರ್ದಿಷ್ಟ ಗುರಿ ಇರುವಂತೆ ಮಾದರಿಯನ್ನು ರೂಪಿಸಲಾಗಿದೆ.

ಈ ಸಂಕೀರ್ಣವನ್ನು ಭೂಮಿಯಿಂದ ಭೂಮಿಗೆ ಉಡಾವಣೆ ಮಾಡಬಹುದಾದ ಕ್ಷಿಪಣಿಗಳ ಪ್ರಯೋಗಕ್ಕೆ ಬಳಸಲಾಗುತ್ತಿದೆ ಎಂದು ಜಿಯೋಸ್ಪೆಷಲ್ ಇಂಟೆಲಿಜೆನ್ಸ್ ಕಂಪನಿಯ ಮೂಲಗಳನ್ನು ಆಧರಿಸಿ ಅಮೆರಿಕದ ನೌಕಾಸಂಸ್ಥೆಯು ತಿಳಿಸಿದೆ.

ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಮೇಲೆ ವಾಷಿಂಗ್ಟನ್‌ನೊಂದಿಗೆ ಉದ್ವಿಗ್ನತೆ ಹೆಚ್ಚಿರುವ ಕಾರಣ, ನಿರ್ದಿಷ್ಟವಾಗಿ ಅಮೆರಿಕ ನೌಕಾಪಡೆಯ ವಿರುದ್ಧ ವಾಹಕ-ವಿರೋಧಿ ಸಾಮರ್ಥ್ಯಗಳನ್ನು ನಿರ್ಮಿಸಲು ಚೀನಾದ ಪ್ರಯತ್ನಗಳನ್ನು ಈ ಪ್ರತಿರೂಪಗಳು ಪ್ರತಿಬಿಂಬಿಸುತ್ತವೆ. ಉಪಗ್ರಹ ಚಿತ್ರಗಳು ಅಮೆರಿಕ ವಾಹಕದ ಪೂರ್ಣ-ಪ್ರಮಾಣದ ರೂಪರೇಖೆಯನ್ನು ತೋರಿಸಿದೆ.

ಚೀನಾದ ಮಿಲಿಟರಿಯ ಕುರಿತು ಪೆಂಟಗನ್‌ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ ಪಿಎಲ್ಎಆರ್​​ಎಫ್ ತನ್ನ ಮೊದಲ ದೃಢೀಕೃತ ಲೈವ್-ಫೈರ್ ಉಡಾವಣೆಯನ್ನು ಜುಲೈ 2020 ರಲ್ಲಿ ದಕ್ಷಿಣ ಚೀನಾ ಸಮುದ್ರಕ್ಕೆ ನಡೆಸಿತು. ಸ್ಪ್ರಾಟ್ಲಿ ದ್ವೀಪಗಳ ಉತ್ತರದ ನೀರಿನಲ್ಲಿ ಆರು DF-21 ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತು. ಚೀನಾ ತೈವಾನ್ ಮತ್ತು ನಾಲ್ಕು ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಪ್ರಾದೇಶಿಕ ವಿವಾದಗಳನ್ನು ಹೊಂದಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ದಾಳಿಗೆ ಒಳಗಾದರೆ ಫಿಲಿಪೈನ್ಸ್ ಅನ್ನು ಯುನೈಟೆಡ್ ಸ್ಟೇಟ್ಸ್ ರಕ್ಷಿಸುತ್ತದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಈ ವರ್ಷ ಜುಲೈನಲ್ಲಿ ಹೇಳಿದ್ದು ಚೀನಾ ತನ್ನ "ಪ್ರಚೋದನಕಾರಿ ನಡವಳಿಕೆ" ಯನ್ನು ನಿಲ್ಲಿಸುವಂತೆ ಎಚ್ಚರಿಸಿದರು.

ಟಕ್ಲಾಮಕನ್ ಮರುಭೂಮಿಯಲ್ಲಿ ಹೊಸ ಗುರಿ ಶ್ರೇಣಿಯ ಸಂಕೀರ್ಣವಾಗಿ ಕಂಡುಬರುವ ಸ್ಥಳದಲ್ಲಿ ಕನಿಷ್ಠ ಎರಡು ಅರ್ಲೀ ಬರ್ಕ್-ಕ್ಲಾಸ್ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ತೋರಿಸಿದೆ.

ಇವುಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಾಗಿ ಬಳಸಲಾಗಿದೆ ಎಂದು ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಕಂಪನಿ ಆಲ್ ಸೋರ್ಸ್ ಅನಾಲಿಸಿಸ್ ಅನ್ನು ಉಲ್ಲೇಖಿಸಿ ಅಮೆರಿಕ ನೇವಲ್ ಇನ್ಸ್ಟಿಟ್ಯೂಟ್ ವರದಿ ಮಾಡಿದೆ.

ಸಮುದ್ರದ ಭಾಗದ ಗಡಿಯನ್ನು ಕುರಿತಂತೆ ಚೀನಾವು ಸದ್ಯ ತೈವಾನ್ ಹಾಗೂ ಏಷಿಯಾ ಪ್ರಾಂತ್ಯದ ಆಗ್ನೇಯ ಭಾಗದ ನಾಲ್ಕು ದೇಶಗಳ ಜತೆಗೆ ವಿವಾದವನ್ನು ಹೊಂದಿದೆ.
ಚೀನಾದ ಹಡಗು ವಿರೋಧಿ ಕ್ಷಿಪಣಿ ಕಾರ್ಯಕ್ರಮಗಳನ್ನು ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್ ನೋಡಿಕೊಳ್ಳುತ್ತದೆ. ಈ ಬಗ್ಗೆ ಚೀನಾದ ರಕ್ಷಣಾ ಸಚಿವಾಲಯವು ತಕ್ಷಣ ಪ್ರತಿಕ್ರಿಯಿಸಲಿಲ್ಲ.

English summary
China's military has built mockups in the shape of a U.S. Navy aircraft carrier and other U.S. warships, possibly as training targets, in the desert of Xinjiang, satellite images by Maxar showed on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X