ಚೀನಾದ ಗಣಿ ಮೇಲ್ಛಾವಣಿ ಕುಸಿತ, 19 ಮಂದಿ ಬಲಿ
ಬೀಜಿಂಗ್, ಜನವರಿ 13: ಉತ್ತರ ಚೀನಾದ ಗಣಿಯೊದರ ಮೇಲ್ಛಾವಣಿ ಕುಸಿದಿದ್ದು, 19 ಮಂದಿ ಬಲಿಯಾಗಿದ್ದು, ಇಬ್ಬರು ಗಣಿಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಶಾಂನ್ಷಿ ಪ್ರಾಂತ್ಯದ ಗಣಿಯಲ್ಲಿ ದುರಂತ ಸಂಭವಿಸಿದ ವೇಳೆ 87 ಮಂದಿ ಕಾರ್ಯನಿರತರಾಗಿದ್ದರು ಎಂದು ತಿಳಿದು ಬಂದಿದೆ. ಗಣಿಯಲ್ಲಿ ಸಿಲುಕಿರುವ ಸಿಬ್ಬಂದಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಅಕ್ರಮ ಗಣಿಗಾರಿಕೆ, ಗಣಿ ದುರಂತ ಚೀನಾದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಅಕ್ಟೋಬರ್ ನಲ್ಲಿ ಪೂರ್ವ ಶಾನ್ ಡೊಂಗ್ ಪ್ರಾಂತ್ಯದಲ್ಲಿ ನಡೆದ ದುರಂತದಲ್ಲಿ 21 ಮಂದಿ ಮೃತಪಟ್ಟಿದ್ದರು.

2017ರಲ್ಲಿ ಸರಿ ಸುಮಾರು 375ಕ್ಕೂ ಅಧಿಕ ಮಂದಿ ಗಣಿದುರಂತದಲ್ಲಿ ಮೃತಪಟ್ಟಿದ್ದು, ಕಳೆದ ವರ್ಷ ಈ ಪ್ರಮಾಣ ಶೇ 28.7ರಷ್ಟು ಇಳಿಕೆಯಾಗಿತ್ತು.












Click it and Unblock the Notifications