ಅಂಟಿಗುವಾ To ಡೊಮಿನಿಕಾ: ಮೆಹುಲ್ ಚೋಕ್ಸಿ ಕಿಡ್ನಾಪ್ ಕೇಸ್ ರೋಚಕತೆ!
ನವದೆಹಲಿ, ಜೂನ್ 08: "ಅಂಟಿಗುವಾದ ಮೂವರು ಮತ್ತು ಭಾರತದ ಇಬ್ಬರು ಪ್ರಜೆಗಳು ನನ್ನನ್ನು ಅಪಹರಿಸಿ ಹಡಗಿನಲ್ಲಿ ಡೊಮಿನಿಕಾಗೆ ಕರೆದುಕೊಂಡು ಹೋಗಿದ್ದಾರೆ" ಎಂದು ಉದ್ಯಮಿ ಮೆಹುಲ್ ಚೋಕ್ಸಿ ಕಳೆದ ಜೂನ್ 2ರಂದು ಅಂಟಿಗುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಕಾನೂನು ತಜ್ಞರ ಸಲಹೆ ಮೇರೆಗೆ ಅಂಟಿಗುವಾ ಪೊಲೀಸರಿಗೆ ಮೆಹುಲ್ ಚೋಕ್ಸಿ ದೂರು ನೀಡಿದ್ದಾರೆ. ತಮ್ಮ ಅಪಹರಣದಲ್ಲಿ ಒಂದು ವರ್ಷದ ಹಿಂದೆಯಷ್ಟೇ ಪರಿಚಯವಾದ ಗೆಳತಿ ಬರ್ಬರಾದ ಜಬಾರಿಕಾ ಭಾರತೀಯ ಏಜೆಂಟ್ ಆಗಿ ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ದೂರಿನಲ್ಲಿ ದೂಷಿಸಲಾಗಿದೆ. ಮೇ 23ರ ರಾತ್ರಿ ಮೆಹುಲ್ ಚೋಕ್ಸಿ ನಾಪತ್ತೆಗೂ ಮೊದಲು ತಮ್ಮ ಗೆಳತಿ ಜಬಾರಿಕಾ ಭೇಟಿಗೆ ತೆರಳಿದ್ದರು ಎಂದು ಹೇಳಲಾಗಿದೆ.
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಬಹು ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ಪ್ರವೇಶಿಸಿರುವ ಹಿನ್ನೆಲೆ ಬಂಧಿಸಲಾಗಿತ್ತು. ಕಳೆದ ಜೂನ್ 24ರಿಂದ ಚೋಕ್ಸಿ ಡೊಮಿನಿಕಾ ಪೊಲೀಸರ ವಶದಲ್ಲಿದ್ದಾರೆ.

"ಬೋಟ್ ನಿಂದ ಹಡಗಿಗೆ ನನ್ನನ್ನು ಶಿಫ್ಟ್ ಮಾಡಿದರು"
"ನನ್ನನ್ನು ಅಪಹರಿಸಿ, ಕಣ್ಣುಮುಚ್ಚಿ, ಆಂಟಿಗುವಾ ಮತ್ತು ಬಾರ್ಬುಡಾದ ಜಬಾರಿಕಾ ಮನೆಯ ಹಿಂಭಾಗಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ "ಬಹಳ ಸಣ್ಣದಾದ ವಾಟರ್ ಕ್ರಾಫ್ಟ್" ನಲ್ಲಿ ಇರಿಸಲಾಗಿದ್ದು, ನಂತರ ಅವರನ್ನು "ದೊಡ್ಡ ಬೋಟ್"ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಇಬ್ಬರು ಭಾರತೀಯರು ಮತ್ತು ಕೆರಿಬಿಯನ್ ಮೂಲದ ಮೂವರು ವ್ಯಕ್ತಿಗಳಿದ್ದರು. ಕಾನೂನುಬಾಹಿರ ಹಾಗೂ ಕ್ರೂರ ರೀತಿಯಲ್ಲಿ ಬಂಧಿಸುವ ಉದ್ದೇಶದಿಂದ ಅನುಭವಿ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು" ಎಂದು ಮೆಹುಲ್ ಚೋಕ್ಸಿ ಹೇಳಿದ್ದಾರೆ.

ತಮ್ಮ ಮೇಲೆ ಗುತ್ತಿಗೆ ನೌಕರರ ಹದ್ದಿನ ಕಣ್ಣು
"ಕಳೆದ ಒಂದು ವರ್ಷದಿಂದ ತಮ್ಮ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ಬಗ್ಗೆ ಭಾರತೀಯ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ನಮ್ಮ ಮನೆಯ ಹಾಗೂ ಸುತ್ತಮುತ್ತಿಲನ ಪ್ರದೇಶಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳ ಬಗ್ಗೆ ಅವರು ತಿಳಿದುಕೊಂಡಿದ್ದರು. ನಾನು ಯಾವಾಗ ಮನೆಯಿಂದ ಹೊರ ಹೋಗುತ್ತೇನೆ, ನನ್ನ ಫೇವರೇಟ್ ರೆಸ್ಟೋರೆಂಟ್ ಯಾವುದು, ಹೀಗೆ ಎಲ್ಲ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡಿದ್ದರು. ಈ ಕುರಿತಾಗಿ ಭಾರತೀಯ ವ್ಯಕ್ತಿಯೇ ಹೇಳಿಕೊಂಡಿದ್ದಾರೆ" ಎಂದು ಮೆಹುಲ್ ಚೋಕ್ಸಿ ತಿಳಿಸಿದ್ದಾರೆ.

ಭಾರತೀಯ ರಾಜಕಾರಣಿಯ ವಿಶೇಷ ಸಂದರ್ಶನದ ಬಗ್ಗೆ ಉಲ್ಲೇಖ
"ನಾವು 17 ಗಂಟೆಗಳ ಪ್ರವಾಸದ ನಂತರ ಬೆಳಗ್ಗೆ 10 ಗಂಟೆ ಸುಮಾರಿಗೆ ಡೊಮಿನಿಕಾ ತಲುಪಿದೆವು. ಭಾರತದ ಉನ್ನತ ರಾಜಕಾರಣಿಯೊಬ್ಬರು ಸಂದರ್ಶನ ಮಾಡುವ ಉದ್ದೇಶದಿಂದ ತಮ್ಮನ್ನು ಈ ವಿಶೇಷ ಸ್ಥಳಕ್ಕೆ ಕರೆದುಕೊಂಡು ಹೋಗಿರುವ ಬಗ್ಗೆ ಹೇಳಲಾಗಿತ್ತು. ಮೊದಲಿಗೆ ಅವರು ಕೇಳಿ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದೆನು. ಡೊಮಿನಿಕಾದಲ್ಲಿ ನನ್ನ ಪೌರತ್ವ ಇರುವುದರ ಹೊರತಾಗಿಯೂ ತಮ್ಮನ್ನು ಆದಷ್ಟು ಬೇಗ ಭಾರತಕ್ಕೆ ಗಡಿಪಾರು ಮಾಡುವ ಬಗ್ಗೆ ಹೇಳಿದ್ದರು" ಎಂದು ಮೆಹುಲ್ ಚೋಕ್ಸಿ ವಿವರಿಸಿದ್ದಾರೆ.

"ಅಪಾಯದ ಮುನ್ಸೂಚನೆಯು ಅಧಿಕಾರಿಗಳಿಗೆ ಸಿಕ್ಕಿತ್ತು"
"ನನ್ನನ್ನು ಅಪಹರಿಸಿ ಪ್ರಾಧಿಕಾರದ ಅಧಿಕಾರಿಗಳಿಗೆ ಒಪ್ಪಿಸುವುದಕ್ಕೆ ಅವರು ಆಯ್ದುಕೊಂಡಿರುವ ಮಾರ್ಗ ಉತ್ತಮವಾಗಿಲ್ಲ ಎಂಬುದು ಅವರಿಗೆ ಮನದಟ್ಟಾಗಿತ್ತು. ಈ ನನ್ನ ಕಾರ್ಯಾಚರಣೆಯು ಇನ್ನೂ ಏಕೆ ಪೂರ್ಣಗೊಂಡಿಲ್ಲ ಎಂಬ ರೇಡಿಯೋ ಕರೆಗಳು ಮೇಲಿಂದ ಮೇಲೆ ಬರುತ್ತಿದ್ದವು. ಇದರಿಂದ ಅಧಿಕಾರಿಗಳು ಬೇಸರಗೊಂಡರು. ಅಲ್ಲದೇ ಇನ್ನು ತಡವಾಗಿದ್ದಲ್ಲಿ ತಾವು ತೊಂದರೆಗೆ ಸಿಲುಕಬಹುದು ಎಂಬ ಮುನ್ಸೂಚನೆ ಅವರಿಗೆ ಸಿಕ್ಕಿತ್ತು" ಎಂದು ಮೆಹುಲ್ ಚೋಕ್ಸಿ ಹೇಳಿದ್ದಾರೆ.

ಮೆಹುಲ್ ಚೋಕ್ಸಿ ಡೊಮಿನಿಕಾಗೆ ಬಂದಿದ್ದು ಯಾವಾಗ?
ಕಳೆದ ಮೇ 23ರಂದು ರಾತ್ರಿ 10 ಗಂಟೆ ಸುಮಾರಿಗೆ ಆರ್ಕ್‌ನ ಯಾಚ್ ಕ್ಯಾಲಿಯೋಪ್‌ನಲ್ಲಿ ಚೋಕ್ಸಿಯನ್ನು ಡೊಮಿನಿಕಾಗೆ ಕರೆತರಲಾಯಿತು ಎಂದು ಡೊಮಿನಿಕಾ ವಿರೋಧ ಪಕ್ಷದ ನಾಯಕ ಲೆನಾಕ್ಸ್ ಲಿಂಟನ್ ಹೇಳಿಕೆ ನೀಡಿರುವ ಬಗ್ಗೆ ಅಸೋಸಿಯೇಟ್ಸ್ ಟೈಮ್ಸ್ನ ವರದಿ ಮಾಡಿದೆ. ಮೇ 23 ರಂದು ಸಂಜೆ 5 ಗಂಟೆಯವರೆಗೆ ಅವರು ಆಂಟಿಗಾದಲ್ಲಿದ್ದರು ಎಂದು ಚೋಕ್ಸಿ ಅವರ ಕುಟುಂಬ ಹೇಳಿಕೊಂಡಿದ್ದು, ನಾಲ್ಕರಿಂದ ಐದು ಗಂಟೆಗಳಲ್ಲಿ 120 ಮೈಲಿ ದೂರವನ್ನು ಕ್ರಮಿಸಲು ಅಸಾಧ್ಯವಾಗುತ್ತದೆ. ಅದಕ್ಕೆ ಕನಿಷ್ಠ 12-13 ಗಂಟೆ ಬೇಕಾಗುತ್ತದೆ. ಕಸ್ಟಮ್ಸ್ ದಾಖಲೆಯ ಪ್ರಕಾರ, ದೋಣಿ ಆಂಟಿಗಾದಿಂದ ಬೆಳಿಗ್ಗೆ 10 ಗಂಟೆಗೆ ಹೊರಟಿದೆ ಎಂದು ಹೇಳಿದ ವರದಿಗೆ ಇದು ವಿರುದ್ಧವಾಗಿದೆ. ಲಿಂಟನ್ ಹೇಳಿಕೊಳ್ಳುವ ದೋಣಿಯಲ್ಲಿ ಚೋಕ್ಸಿ ಪ್ರಯಾಣಿಸಲಿಲ್ಲ ಎಂಬುದನ್ನು ಈ ವ್ಯತ್ಯಾಸವೇ ಸೂಚಿಸುತ್ತದೆ.

ಮೆಹುಲ್ ಚೋಕ್ಸಿ ದೇಹದಲ್ಲಿ ಗಾಯದ ಗುರುತು
ಡೊಮಿನಿಕಾ ಚೀನಾ ಸೌಹಾರ್ದತೆ ಆಸ್ಪತ್ರೆಯ ವೈದ್ಯರು ಮೆಹುಲ್ ಚೋಕ್ಸಿಗೆ ಚಿಕಿತ್ಸೆ ನೀಡಿದ್ದಾರೆ. ಚೋಕ್ಸಿ ದೇಹದಲ್ಲಿ ಅಲ್ಲಿಲ್ಲಿ ಗಾಯ ಮತ್ತು ಉಗುರಿನಲ್ಲಿ ಗಾಯಗಳಾಗಿದ್ದು, ತಳ್ಳಾಡುವಿಕೆಯಿಂದಾಗಿ ಮೂಗೇಟು ಬಿದ್ದಿರಬಹುದು ಎಂದು ವಕೀಲರು ಉಲ್ಲೇಖಿಸಿದ್ದಾರೆ. ಕಳೆದ 2018ರಿಂದ ಆಂಟಿಗಾ ಮತ್ತು ಬರ್ಬುಡಾದಲ್ಲಿ ಪ್ರಜೆಯಾಗಿ ವಾಸವಾಗಿದ್ದ ಮೆಹುಲ್ ಚೋಕ್ಸಿ ಕಳೆದ ಮೇ 23ರಂದು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತದನಂತರದಲ್ಲಿ ತಮ್ಮ ಪ್ರೇಯಸಿ ಜೊತೆಗೆ ಪ್ರಣಯ ಪ್ರವಾಸಕ್ಕೆ ತೆರಳಿದ್ದು ಎಂದು ಹೇಳಲಾದ ಚೋಕ್ಸಿ ಅವರನ್ನು ನೆರೆಯ ಡೊಮಿನಿಕಾದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಜಾಲಿ ಹಾರ್ಬರ್ ಬಳಿ ಅವರನ್ನು ಆಂಟಿಗಾ ಪೊಲೀಸರು ಬಂಧಿಸಿ ಡೊಮಿನಿಕಾಗೆ ಕರೆದುಕೊಂಡು ಹೋಗಿದ್ದಾರೆ ಎಂದು ವಕೀಲು ಆರೋಪಿಸಿದ್ದಾರೆ.

ಪಿಎನ್ ಬಿ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಕೇಸ್?
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಭಾರತದಿಂದ ಯುರೋಪಿಗೆ ಓಡಿ ಹೋದ ನೀರವ್ ಮೋದಿ ಅಂತಿಮವಾಗಿ ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ 2017ರಲ್ಲೇ ಆಂಟಿಗಾ ಮತ್ತು ಬರ್ಬುಡಾ ರಾಷ್ಟ್ರಗಳ ನಾಗರಿಕತ್ವ ಪಡೆದುಕೊಂಡ ಮೆಹುಲ್ ಚೋಕ್ಸಿ ಇಲ್ಲಿಯವರೆಗೂ ಅದೇ ದೇಶದಲ್ಲಿ ವಾಸವಾಗಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications