ಮದುವೆಯ ನಂತರ 3ನೇ ವರ್ಷ ಅತಿ ಮಧುರ! 5ನೇ ವರ್ಷ?

5ನೇ ವರ್ಷದಲ್ಲಿ ವೈವಾಹಿಕ ಜೀವನ ದಂಪತಿಗೆ ಅತ್ಯಂತ ದುರ್ಗಮವಾಗಿರುತ್ತದಂತೆ.
ಬ್ರಿಟನ್ನಿನ ಕಾನೂನು ಸಂಸ್ಥೆಯೊಂದು ಇಂತಹ ಸಮೀಕ್ಷೆಯನ್ನು ಕೈಗೊಂಡಿದೆ. ಸಮೀಕ್ಷೆಯಲ್ಲಿ ಉತ್ತರಿಸಿದ ಬಹುತೇಕ ದಂಪತಿಗಳು ಮೊದಲನೆಯ ವರ್ಷ ನಿಜಕ್ಕೂ ಸೂಪ್ ಸೂಪರ್ ಆಗಿರುತ್ತದೆ. 3ನೆಯ ವರ್ಷ ಮಧುರವಾಗಿ ಕೆನೆಗಟ್ಟುತ್ತದೆ. ಆದರೆ 5ನೆಯ ವರ್ಷಕ್ಕೆ ಬರುವ ವೇಳೆಗೆ ಅಸಮಾಧಾನ ಮಡುವುಗಟ್ಟಿರುತ್ತದೆ ಎಂದಿದ್ದಾರೆ. ನ್ಯೂಸ್ ಪೋರ್ಟಲ್ ನಲ್ಲಿ ಸಮೀಕ್ಷಾ ವರದಿ ಪ್ರಕಟವಾಗಿದೆ.
ಸಮೀಕ್ಷೆಗಾಗಿ 2000 ಜೋಡಿಗಳನ್ನು ಸಂದರ್ಶಿಸಲಾಯಿತು. ಮದುವೆಯಾದ ನಂತರದ ವರ್ಷಗಳಲ್ಲಿ ಸಂಸಾರದಲ್ಲಿ ಏಕೆ ಬಿರುಕು ಕಾಣಿಸಿಕೊಳ್ಳತೊಡಗುತ್ತದೆ ಅಂದರೆ ಉದ್ಯೋದ ಅವಾಂತರ ಮನೆಯ ಮೇಲೆ ಕಾಡತೊಡಗುತ್ತದೆ. ಅತಿ ದುಡಿತ, ಸಾಕಪ್ಪಾ ಸಾಕು ಅನ್ನಿಸುವಷ್ಟು ಕೆಲಸದ ಒತ್ತಡ ಸಂಸಾರದ ಮೇಲೆ ಪ್ರಭಾವ ಬೀರತೊಡಗುತ್ತದೆ.
The seven-year itch
ಏಳನೆಯ ವರ್ಷ ಇದೆಯಲ್ಲಾ ಅದೊಂದು ರೀತಿ ನಿಜಕ್ಕೂ ದೊಡ್ಡ ಹರ್ಡಲ್ ಆಗಿರುತ್ತದೆ. ಆ ತಡೆಗೋಡೆಯನ್ನು ಯಶಸ್ವಿಯಾಗಿ ದಾಟಿದರೆ ಮುಂದಿನದು ದೀರ್ಘ ಕಾಲದ ಬಾಂಧವ್ಯಕ್ಕೆ ಬುನಾದಿಯಾಗುತ್ತದೆ ಎಂದು ದಂಪತಿಗಳು ತಮ್ಮ ಪ್ರಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications