ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ: ಕನ್ನಡಿಗರಿಗೆ ನಿರಾಸೆ!
ಕೆನಡಾದ ಹೊಸ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅವರು ಆಯ್ಕೆಯಾಗಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಜೀನಾಮೆ ಹಾಗೂ ರಾಜಕೀಯ ಹೈಡ್ರಾಮಾಗಳ ನಂತರ ನೂತನ ಪ್ರಧಾನಿಯ ಆಯ್ಕೆ ನಡೆದಿದೆ. ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಂದ ಭಾರತ ಹಾಗೂ ಕೆನಡಾದ ಸಂಬಂಧ ಹಳಸಿತ್ತು. ಅಲ್ಲದೇ ಕೆನಡಾದಲ್ಲಿ ಸಿಖ್ ಪ್ರತ್ಯೇಕವಾದಿ ಹೋರಾಟ ಇಲ್ಲಿ ವಿಕೃತ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಇದಕ್ಕೆ ಭಾರತ ತನ್ನ ವಿರೋಧವನ್ನು ದಾಖಲಿಸುತ್ತಲ್ಲೇ ಇದೆ.
ಇದೀಗ ಕೆನಡಾದ ಹೊಸ ಪ್ರಧಾನಿ ಮಾರ್ಕ್ ಅವರು ಭಾರತದೊಂದಿಗೆ ಯಾವ ರೀತಿ ನಡೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲವಿದೆ. ಅಲ್ಲದೆ ಅಮೆರಿಕದ ಟ್ಯಾಕ್ಸ್ ವಾರ್ ಅನ್ನು ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರು ಹೇಗೆ ಎದುರಿಸಲಿದೆ ಎನ್ನುವ ಆಸಕ್ತಿ ಹೆಚ್ಚಾಗಿದೆ. ಕೆನಡಾ ನೂತನ ಪ್ರಧಾನಿ ಹಾಗೂ ಭಾರತದ ಮೇಲೆ ಬೀರುವ ಪರಿಣಾಮಗಳ ವಿವರ ಇಲ್ಲಿದೆ.

ಕೆನಡಾದ ಲಿಬರಲ್ ಪಕ್ಷವು ಇಲ್ಲಿನ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅವರನ್ನು ಆಯ್ಕೆ ಮಾಡಲಾಗಿದ್ದು. ಬಹುಮತದಿಂದ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾದ ಟ್ಯಾಕ್ಸ್ ವಾರ್ ಶುರು ಮಾಡಿದ್ದಾರೆ. ಈ ರೀತಿ ಇರುವಾಗಲೇ ಕೆನಾಡದಲ್ಲಿ ನೂತನ ಪ್ರಧಾನಿ ಆಯ್ಕೆಯಾಗಿದ್ದು ಸಹಜವಾಗಿಯೇ ಟ್ರಂಪ್ ವಿರುದ್ಧ ಮಾರ್ಕ್ ಕಾರ್ನಿ ಅವರು ಕತ್ತಿ ಮಸೆದಿದ್ದಾರೆ.
ಮಾರ್ಕ್ ಕಾರ್ನಿ 59 ವರ್ಷದವರಾಗಿದ್ದಾರೆ. ಲಿಬರಲ್ ಪಕ್ಷದ ಸಂಸದರು ಅಪಾರ ಪ್ರಮಾಣದಲ್ಲಿ ಮತ ಚಲಾಯಿಸಿ ಇವರನ್ನು ಆಯ್ಕೆ ಮಾಡಿದ್ದಾರೆ.
ನಾಯಕತ್ವ ಆಯ್ಕೆಯ ಪ್ರಕ್ರಿಯೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಶೇ 85.9 ಪ್ರತಿಶತ ಮತಗಳ ಮೂಲಕ ಅವರು ಗೆದ್ದರು. ಮಾರ್ಕ್ ಅವರು ನಿರ್ಗಮಿತ ನಾಯಕ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ಕೆನಡಾದಲ್ಲಿ ಇದೇ ವರ್ಷ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಯಲಿದೆ. ಈ ಅವಧಿಯ ಒಳಗೆ ಪರಿಸ್ಥಿತಿಯನ್ನು ಸುಧಾರಿಸಬೇಕಾದ ಹಾಗೂ ಚುನಾವಣೆಗೂ ಸಿದ್ಧರಾಗಬೇಕಾದ ಸಂಕಷ್ಟ ಹಾಗೂ ಸವಾಲುಗಳು ಮಾರ್ಕ್ ಅವರ ಮುಂದಿದೆ.

ಕನ್ನಡಿಗ ಚಂದ್ರ ಆರ್ಯ ಅವರಿಗೆ ಕೈತಪ್ಪಿದ ಅವಕಾಶ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಜೀನಾಮೆಯ ನಂತರ ನೂತನ ಪ್ರಧಾನಿ ರೇಸ್‌ನಲ್ಲಿ ಕನ್ನಡಿಗರಾದ ಚಂದ್ರ ಆರ್ಯ ಅವರ ಹೆಸರು ಕೇಳಿ ಬಂದಿತ್ತು. ಚಂದ್ರ ಆರ್ಯ ಅವರು ಕೆನಡಾದ ಸಂಸದರಾಗಿದ್ದು. ಆರ್ಯ ಅವರು ಸಹ ಪ್ರಧಾನಿ ರೇಸ್‌ನಲ್ಲಿ ಇದ್ದರು. ಆರ್ಯ ಅವರು ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ದ್ವಾರಾಳು ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಆದರೆ ಕನ್ನಡಿಗರಿಗೆ ನಿರಾಸೆ ಎದುರಾಗಿದೆ. ಇವರು ಸಹ ಪ್ರಧಾನಿ ರೇಸ್‌ನಲ್ಲಿ ಇದ್ದರು. ಸಂಸದರಾಗಿ ಆಯ್ಕೆಯಾದಾಗ ಇವರು ಕನ್ನಡದಲ್ಲಿಯೇ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು.
ಅಮೆರಿಕದ ಮೇಲೆ ಗರಂ ಆಗಿರುವ ನೂತನ ಪ್ರಧಾನಿ: ಮಾರ್ಕ್ ಕಾರ್ನಿ ಅವರು ಕೆನಡಾದ ನೂತನ ಪ್ರಧಾನಿಯಾಗುತ್ತಿದ್ದಂತೆಯೇ ಅಮೆರಿಕಾದ ಅಧ್ಯಕ್ಷರ ಮೇಲೆ ಹರಿಹಾಯ್ದಿದ್ದಾರೆ. ಕೆನಡಾದ ಕಾರ್ಮಿಕರು, ಕುಟುಂಬ ಮತ್ತು ವ್ಯವಹಾರಗಳ ಮೇಲೆ ಅಮೆರಿಕ ದಾಳಿ ನಡೆಸುತ್ತಿದೆ. ಈ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಮೆಕ್ಸಿಕೋ ಹಾಗೂ ಚೀನಾದ ಮೇಲೆ ವಿಪರೀತ ಟ್ಯಾಕ್ಸ್ ಹಾಕುತ್ತಿದ್ದಾರೆ. ಈ ರೀತಿಯ ಸಂಕಷ್ಟದ ಸಮಯದಲ್ಲೇ ನೂತನ ಪ್ರಧಾನಿಯಾಗಿ ಮಾರ್ಕ್ ಆಯ್ಕೆಯಾಗಿದ್ದಾರೆ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಆತಂರಿಕ ಸಮಸ್ಯೆ, ಆರ್ಥಿಕ ಸಂಕಷ್ಟ ಹಾಗೂ ಭಾರತ ಸೇರಿದಂತೆ ಪ್ರಮುಖ ದೇಶಗಳ ನಡುವೆ ಸಂಬಂಧ ಉತ್ತಮವಾಗಿಲ್ಲ. ವರ್ಷಾಂತ್ಯದಲ್ಲಿ ಚುನಾವಣೆಯೂ ಇದೆ. ಈ ಎಲ್ಲಾ ಸವಾಲುಗಳನ್ನು ಅವರು ಎದುರಿಸಬೇಕಿದೆ.












Click it and Unblock the Notifications