ಅಮೆರಿಕದ ನ್ಯೂಸ್ ರೂಂ ನಲ್ಲಿ ಶೂಟೌಟ್: ಐವರು ಬಲಿ
ಮೇರಿಲ್ಯಾಂಡ್, ಜೂನ್ 29: ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ಐವರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಮೇರಿ ಲ್ಯಾಂಡ್ ನ ಅನ್ನಾಪೊಲಿಸ್ ನಲ್ಲಿರುವ 'ಕ್ಯಾಪಿಟಲ್ ಗೆಜೆಟ್' ಎಂಬ ವೃತ್ತಪತ್ರಿಕೆ ಕಚೇರಿ ಮೇಲೆ ಈ ದಾಳಿ ನಡೆದಿದ್ದು, ಗನ್ ಮ್ಯಾನ್ ವೊಬ್ಬ ಕಚೇರಿಯ ಗಾಜಿನ ಬಾಗಿಲಿಗೆ ಗುಂಡು ಹಾರಿಸಿ ಒಳಬಂದು, ಸಿಬ್ಬಂದಿ ಮೇಲೆ ಗುಂಡುಹಾರಿಸಿದ್ದಾನೆ.

ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಘಟನೆ ಬಗ್ಗೆ ಕೇಳಿ ಬಹಳ ನೋವಾಯಿತು. ಮೃತ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನನ್ನ ಪ್ರಾರ್ಥನೆ' ಎಂದಿದ್ದಾರೆ.












Click it and Unblock the Notifications