ಇರಾನಿನಲ್ಲಿ ಇಂಧನ ಟ್ಯಾಂಕ್ ಸ್ಫೋಟ: 13 ಕ್ಕೂ ಹೆಚ್ಚು ಮಂದಿ ಬಲಿ
ತೆಹ್ರಾನ್, ಜುಲೈ 11: ಇರಾನಿನ ತೆಹ್ರಾನ್ ನ ಸನಂದಾಜ್ ಎಂಬಲ್ಲಿ ಇಂಧನ ಟ್ಯಾಂಕರ್ ವೊಂದು ಸ್ಫೋಟಿಸಿದ ಪರಿಣಾಮ 13 ಜನ ಬಲಿಯಾಗಿದ್ದಾರೆ.
ಕುರ್ದಿಸ್ತಾನ್ ಸನಂದಾಜ್ ಬಸ್ ಟರ್ಮಿನಲ್ ನಿಂದ ಹೊರಟಿದ್ದ ಬಸ್ಸಿನ ಹಿಂಭಾಗದಲ್ಲಿ ಬರುತ್ತಿದ್ದ ಇಂಧನ ಟ್ಯಾಂಕರ್ ಬಸ್ಸಿಗೆ ಗುದ್ದಿದ ಪರಿಣಾಮ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ.
A huge fire erupts after accident involving bus and fuel tanker in the Iranian city of Sanandaj (Sine) in Irani Kurdistan, initial reports of over 30 dead. pic.twitter.com/mCP7OvZZ0E
— Raveen Aujmaya (@raveenaujmaya) July 10, 2018
ಇದರಿಂದಾಗಿ ಬಸ್ಸು ಸೇರಿದಂತೆ ರಸ್ತೆಯಲ್ಲಿದ್ದ ಇನ್ನುಳಿದ ಎರಡು ವಾಹನಗಳೂ ಸಂಪೂರ್ಣ ಸುಟ್ಟಿವೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ 12 ಜನ ಸೇರಿದಂತೆ ಒಟ್ಟು 13 ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಘಟನೆಯಲ್ಲಿ ಸುಮಾರು 18,000 ಲೀಟರ್ ಇಂಧನ ಸುಟ್ಟಿದೆ ಎನ್ನಲಾಗಿದೆ. ಇಂಧನ ಟ್ಯಾಂಕರ್ ಸ್ಫೋಟಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications