Israel: ಇಸ್ರೇಲ್‌ನಲ್ಲಿ ಶಂಕಿತ ಭಯೋತ್ಪಾದಕ ದಾಳಿ; ಪಾದಚಾರಿಗಳ ಮೇಲೆ ಹರಿದ ವಾಹನ

ಇಸ್ರೇಲ್‌ನಲ್ಲಿ ಮತ್ತೊಮ್ಮೆ ಭಯೋತ್ಪಾದನಾ ಕೃತ್ಯ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಗುರುವಾರ ಉತ್ತರ ಇಸ್ರೇಲ್‌ನಲ್ಲಿ ಪಾದಚಾರಿಗಳ ಮೇಲೆ ವಾಹನ ಡಿಕ್ಕಿ ಹೊಡೆದಿದ್ದು ಕನಿಷ್ಠ ಏಳು ಜನ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಇದನ್ನು ಶಂಕಿತ ಭಯೋತ್ಪಾದಕ ದಾಳಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದು ಭಯೋತ್ಪಾದಕ ದಾಳಿ ಎನ್ನುವ ಶಂಕೆಯಿದ್ದು, ಹೈಫಾ ನಗರದ ದಕ್ಷಿಣ ಭಾಗದಲ್ಲಿರುವ ಕರ್ಕೂರ್ ಜಂಕ್ಷನ್‌ನಲ್ಲಿ ಪೊಲೀಸ್ ಪಡೆಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನವನ್ನು ತಡೆದಿದ್ದು, ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗುವ ಶಂಕಿತನನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Many injured after vehicle rams people terror attack israel

ಇಸ್ರೇಲ್‌ನ ಮೊದಲ ಪ್ರತಿಕ್ರಿಯೆ ನೀಡಿದ ಮ್ಯಾಗೆನ್ ಡೇವಿಡ್ ಅಡೋಮ್, ತಮ್ಮ ತಂಡವು ಘಟನೆಯ ಸ್ಥಳದಲ್ಲಿ ಏಳು ಬಲಿಪಶುಗಳಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದರು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಶಂಕಿತನ ಬಂಧಿಸಿದ ಪೊಲೀಸರು

ಪೊಲೀಸರು ಶಂಕಿತನನ್ನು 53 ವರ್ಷದ ಪ್ಯಾಲೆಸ್ಟೀನಿಯನ್ ಎಂದು ಗುರುತಿಸಿದ್ದಾರೆ. ಆತ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದ ಮತ್ತು ಇಸ್ರೇಲ್ ಪ್ರಜೆಯನ್ನು ಮದುವೆಯಾಗಿದ್ದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಹೈಫಾದ ದಕ್ಷಿಣದಲ್ಲಿರುವ ಪರ್ಡೆಸ್ ಹನ್ನಾ-ಕಾರ್ಕೂರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯವನ್ನು ಕಣ್ಣಾರೆ ನೋಡಿರುವ ಪ್ಯಾರಾಮೆಡಿಕ್ ಅವಿ ಕೋಹೆನ್ ಮಾಹಿತಿ ನೀಡಿದ್ದು, ನಾವು ಸ್ಥಳಕ್ಕೆ ಬಂದಾಗ ಗಾಯಗೊಂಡವರು ನೆಲದಲ್ಲಿ ಬಿದ್ದಿದ್ದರು, ರಕ್ತಸ್ರಾವ ನಿಲ್ಲಿಸುವ ಜೊತೆಗೆ ಗಾಯಗಳಿಗೆ ಬ್ಯಾಂಡೇಜ್ ಹಾಕುವುದು ಸೇರಿದಂತೆ ಎಲ್ಲಾ ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಮತ್ತು ಇಸ್ರೇಲ್ ನಡುವಿನ ಮೂರು ಹಂತದ ಕದನ ವಿರಾಮದ ನಡುವೆಯೇ ಶಂಕಿತ ಭಯೋತ್ಪಾದಕ ದಾಳಿ ನಡೆದಿದ್ದು ಆತಂಕ ಮೂಡಿಸಿದೆ.

ಕದನ ವಿರಾಮದ ಆರಂಭವಾದಾಗ ಇಸ್ರೇಲಿ ಜೈಲುಗಳಲ್ಲಿ ಇರಿಸಲಾಗಿರುವ ಸುಮಾರು 2,000 ಪ್ಯಾಲೇಸ್ಟಿನಿಯನ್ ಕೈದಿಗಳು ಮತ್ತು ಬಂಧಿತರನ್ನು ಇಸ್ರೇಲ್ ಬಿಡುಗಡೆ ಮಾಡಿದ್ದು ಇದಕ್ಕೆ ಪ್ರತಿಯಾಗಿ 33 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡಿತ್ತು.

2023ರ ಅಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ ಇಸ್ರೇಲ್ ಗಾಜಾದಲ್ಲಿ ಹಮಾಸ್ ವಿರುದ್ಧ ತನ್ನ ಕಾರ್ಯಾಚರಣೆ ಪ್ರಾರಂಭಿಸಿತ್ತು, ಇಸ್ರೇಲ್ ಮಾಹಿತಿ ಪ್ರಕಾರ ಉಗ್ರಗಾಮಿಗಳು 1,200 ಇಸ್ರೇಲ್ ಪ್ರಜೆಗಳನ್ನು ಕೊಂದು 250 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಅಂದಿನಿಂದ, ಗಾಜಾದಲ್ಲಿ 47,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲ್ ಸೇನೆ ಕೊಂದಿದೆ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+