ಚೀನಾದ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 22 ಮಂದಿ ಸಾವು
ಶಿಜಿಯಾಜುವಾಂಗ್(ಚೀನಾ), ನವೆಂಬರ್ 28: ಉತ್ತರ ಚೀನಾದ ಹೆಬೀ ಪ್ರಾಂತ್ಯದ ಶಿಜಿಯಾಜುವಾಂಗ್ ಎಂಬಲ್ಲಿ ನಡೆದ ಸ್ಫೋಟವೊಂದರಲ್ಲಿ 22 ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಬುಧವಾರ ಬೆಳಿಗ್ಗೆ ಇಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 22 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಕಳೆದ ತಿಂಗಳಷ್ಟೇ ಚೀನಾದ ಜಿಲಿನ್ ಎಂಬಲ್ಲಿ ಯಂತ್ರಗಳ ಕಾರ್ಖಾನೆಯೊಂದರಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಮೃತರಾಗಿ, 24 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ಘಟನೆಯಲ್ಲಿ ಕಾರ್ಖಾನೆಯ ಬಳಿ ಇದ್ದ 41 ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದವು.
ಕಳೆದ ವಾರ ದೆಹಲಿಯ ಕರೋಲ್ ಬಾಗ್ ಸಮೀಪ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟದ್ದರು. ಬಟ್ಟೆ ಒಗೆಯುವ ದ್ರಾವಕ ನೆಲದ ಮೇಲೆ ಚೆಲ್ಲಿದ ಪರಿಣಾಮ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು.












Click it and Unblock the Notifications