ಅಮೆರಿಕದ ಫ್ಲೊರಿಡಾದಲ್ಲಿ ಶೂಟೌಟ್: ಐವರು ಬಲಿ

ಫ್ಲೋರಿಡಾ, ಜನವರಿ 24: ಅಮೆರಿಕದ ಫ್ಲೋರಿಡಾದ ಬ್ಯಾಂಕ್ ವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಐವರು ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.

21 ವರ್ಷ ವಯಸ್ಸಿನ ಝೆಪೆನ್ ಕ್ಸಾವರ್ ಎಂಬಾತನನ್ನು ಶಂಕಿತ ಎಂದು ಬಂಧಿಸಲಾಗಿದ್ದು, ಈತ ಫ್ಲೋರಿಡಾ ನಗರದ ಸೆಬ್ರಿಂಗ್ಸ್ ನ ಸನ್ ಟ್ರಸ್ಟ್ ಬ್ಯಾಂಕ್ ಬಳಿ ಬಂದು ಶೂಟೌಟ್ ನಡೆಸಿದ್ದಾನೆ ಎನ್ನಲಾಗಿದೆ.

Many dead after a gunman opens fire in Florida bank, America

ಘಟನೆಯ ನಂತರ ತಾನು ಬ್ಯಾಕ್ ಬಳಿ ಶೂಟೌಟ್ ನಡೆಸಿ, ಐವರನ್ನು ಕೊಂದಿರುವುದಾಗ ಕ್ಸಾವರ್ ಸ್ವತಃ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾನೆ.

ವರ್ಷಾರಂಭದಲ್ಲಿ ಅಂದರೆ ಜನವರಿ 5 ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದ ಶೂಟೌಟ್ ನಲ್ಲಿ ಮೂವರು ಹತರಾಗಿದ್ದರು.

ಅದಕ್ಕೂ ಮುನ್ನ ಡಿಸೆಂಬರ್ 20 ರಂದು ಅಮೆರಿಕದ ಟಲ್ಸಾದ ವಾಲ್ ಗ್ರೀನ್ಸ್ ನಲ್ಲಿ ನಡೆದ ಶೂಟೌಟ್ ನಲ್ಲಿ ಶೂಟರ್ ೃತನಾದ ಘಟನೆ ನಡೆದಿತ್ತು.

ನವೆಂಬರ್ 8 ರಂದು ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್ ನಗರದ ಮ್ಯೂಸಿಕ್ ಬಾರೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 13 ಜನರು ಸಾವಿಗೀಡಾಗಿದ್ದರು.

2018 ರ ಫೆಬ್ರವರಿ 15 ರಂದು ಅಮೆರಿಕದ ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನಲ್ಲಿರುವ ಪ್ರೌಢಶಾಲೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ 17 ಮಂದಿ ಸಾವಿಗೀಡಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+