ಫ್ರಾನ್ಸ್ ಬೇಕರಿಯಲ್ಲಿ ಗ್ಯಾಸ್ ಸ್ಫೋಟ: ಹಲವರ ಸಾವಿನ ಶಂಕೆ
ಪ್ಯಾರಿಸ್, ಜನವರಿ 11: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ರು ಡಿ ಟ್ರೆವಿಸ್ ಎಂಬಲ್ಲಿ ನಡೆದ ಸ್ಫೋಟವೊಂದರಲ್ಲಿ ಹಲವರು ಸಾವಿಗೀಡಾದ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಬೇಕರಿಯೊಂದರಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಗ್ಯಾಸ್ ಸೋರಿಕೆಯಾದ ಪರಿಣಾಮ ಈ ಸ್ಫೋಟ ಸಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಆರಂಭಿಸಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗಷ್ಟೇ ದೆಹಲಿಯ ಕಾರ್ಖಾನೆಯೊಂದರಲ್ಲಿ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಆರು ಮಂದಿ ಬಲಿಯಾಗಿದ್ದರು.
ಚೀನಾದ ಶಿಜಿಯಾಜುವಾಂಗ್ ಎಂಬಲ್ಲಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ್ದ ಭೀಕರ ಸ್ಫೋಟದಲ್ಲಿ ಸುಮಾರು 22 ಮಂದಿ ಬಲಿಯಾಗಿದ್ದರು.












Click it and Unblock the Notifications