ಭಾರತೀಯನನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್‌

ಬ್ರಿಟನ್, ಮಾರ್ಚ್ 11: ಕೊರೊನಾ ವೈರಸ್‌ಗೆ ಮೊದಲ ಭಾರತೀಯ ಬಲಿಯಾಗಿದ್ದಾರೆ. ಬ್ರಿಟನ್‌ನಲ್ಲಿ ವಾಸ ಮಾಡುತ್ತಿದ್ದ ಮನೋಹರ್ ಕೃಷ್ಣ ಪ್ರಭು ಎಂಬ ಭಾರತ ಮೂಲದ ವ್ಯಕ್ತಿ ಕೊರೊನಾದಿಂದ ಮೃತರಾಗಿದ್ದಾರೆ.

Recommended Video

      Man in 80s is second person to die of virus in UK

      ಮನೋಹರ್ ಕೃಷ್ಣ ಪ್ರಭು ರವರಿಗೆ 80 ವಯಸ್ಸಾಗಿತ್ತು. ಇಟಲಿಯ ವ್ಯಕ್ತಿಯಿಂದ ಇವರಿಗೆ ವೈರಸ್ ಹರಡಿತ್ತು. ಮನೋಹರ್ ಪುತ್ರನ ಬಳಿ ಇದ್ದ ಆಡಿಯೋ ಉಪಕರಣವೊಂದನ್ನು ಪಡೆಯುವ ವೇಳೆ ಇಟಲಿಯ ವ್ಯಕ್ತಿಯಿಂದ ವೈರಸ್ ಹರಡಿದೆ ಎಂದು ತಿಳಿದು ಬಂದಿದೆ.

      ಮನೋಹರ್ ಮಗನಿಗೂ ಸಹ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಕಳೆದ 10 ದಿನಗಳಿಂದ ಮನೋಹರ್ ವ್ಯಾಟ್ ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಇದ್ದರು. ಆದರೆ, ಕೊರೊನಾದಿಂದ ಗೆದ್ದು ಬರಲು ಸಾಧ್ಯ ಆಗಲಿಲ್ಲ.

      Manohar Krishna Prabhu Has Died From Coronavirus

      ಮನೋಹರ್ ಕುಟುಂಬ ತೀವ್ರ ದುಃಖದಲ್ಲಿ ಇದೆ. ಮನೆಯ ಹಿರಿಯನನ್ನು ಕಳೆದುಕೊಂಡು ಕಂಗಾಲಾಗಿದೆ. ಪತಿಯನ್ನು ಕಳೆದುಕೊಂಡು, ಮಗ ಕೂಡ ಚಿಕಿತ್ಸೆ ಪಡೆಯುತ್ತಿದ್ದು, ಇಡೀ ಕುಟುಂಬ ಕಣ್ಣೀರು ಹಾಕಿದೆ.

      ಕೊರೊನಾ ವೈರಸ್‌ನಿಂದ ಇಂಗ್ಲೆಂಡ್‌ನಲ್ಲಿ 6ನೇ ಸಾವು ಸಂಭವಿಸಿದೆ. ವೈರಸ್ ಯೂರೋಪಿನಾದ್ಯಂತ ವ್ಯಾಪಿಸಿದ್ದು, ಈ ಕುರಿತು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ ಸೋಂಕಿನ ಸಂಖ್ಯೆ 61ಕ್ಕೆ ಏರಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+