ಪತ್ನಿಯ ಬುರ್ಖಾ ತೊಟ್ಟು ವಿಮಾನ ಏರಿದ್ದ ಕೊರೊನಾ ಸೋಂಕಿತ: ಸಿಕ್ಕಿ ಬಿದ್ದಿದ್ಹೇಗೆ?
ಟೆರ್ನೆಟ್, ಜುಲೈ 22: ಕೊರೊನಾ ಸೋಂಕಿತರ ವ್ಯಕ್ತಿಯೊಬ್ಬ ಪತ್ನಿ ಬುರ್ಖಾ ತೊಟ್ಟು ಮಾರುವೇಶದಲ್ಲಿ ವಿಮಾನ ಹತ್ತಿರುವ ಘಟನೆ ನಡೆದಿದೆ.
ವಿಮಾನದಲ್ಲಿ ತೆರಳಲು ಹೆಂಡತಿಯ ಗುರುತಿನ ಚೀಟಿ ಹಾಗೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಬಳಸಿದ್ದಾನೆ, ಅಲ್ಲದೆ ತನ್ನ ಮುಖವನ್ನು ಬುರ್ಖಾದಿಂದ ಮುಚ್ಚಿದ್ದ ಎಂದು ಹೇಳಲಾಗಿದೆ.
ವ್ಯಕ್ತಿ, ಹೆಂಡತಿಯ ಹೆಸರಿನಲ್ಲೇ ವಿಮಾನ ಟಿಕೆಟ್ ಖರೀದಿಸಿದ್ದಾನೆ, ಅಲ್ಲದೆ ಇದಕ್ಕಾಗಿ ಗುರುತಿನ ಚೀಟಿ, ಕೋವಿಡ್ ಪಿಸಿಆರ್ ಪರೀಕ್ಷೆಯ ವರದಿ ಮತ್ತು ಲಸಿಕಾ ಪ್ರಮಾಣಪತ್ರವನ್ನು ಕೂಡ ಬಳಸಿದ್ದಾನೆ. ಆತ ವಿಮಾನದಿಂದ ಇಳಿಯುತ್ತಿದ್ದಂತೆ ಬಂಧಿಸಲಾಗಿದೆ ಎಂದು ಟೆರ್ನೆಟ್ ಪೊಲೀಸ್ ಮುಖ್ಯಸ್ಥ ಆದಿತ್ಯ ಲಕ್ಷಿಮದ ಅವರು ತಿಳಿಸಿದ್ದಾರೆ.

ಈ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ, ಜಕಾರ್ತಾದಿಂದ ಟೆರ್ನೆಟ್‌ನತ್ತ ಪ್ರಯಾಣಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ ಶೌಚಾಲಯಕ್ಕೆ ತೆರಳಿ ಬಟ್ಟೆ ಬದಲಿಸಿದ್ದನ್ನು ಗಮನಿಸಿದ್ದಾರೆ.
ಆರೋಪಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗ ಆತನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂಡೋನೇಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ, ಕಳೆದ 24 ಗಂಟೆಯಲ್ಲಿ 33,772 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 1383 ಮಂದಿ ಮೃತಪಟ್ಟಿದ್ದಾರೆ.
ಇಲ್ಲಿಯವರೆಗೆ 2.9 ಮಿಲಿಯನ್ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 77,583 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications