ಭಾರತದ ಸೈನಿಕರು ಮಾಲ್ಡೀವ್ಸ್ ಬಿಟ್ಟು ಹೋಗೋದು ಗ್ಯಾರಂಟಿ: ಹಿಂಗೆ ಹೇಳಿದ್ದು ಯಾರು ಗೊತ್ತೆ?

ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಬಹುಶಃ ಸರಿ ಹೋಗದೇ ಇರುವ ಮಟ್ಟಕ್ಕೆ ಹಾಳಾಗಿ ಹೋಗಿದೆ. ಹೀಗಿದ್ದರೂ ಪ್ರತಿನಿತ್ಯ ಮಾಲ್ಡೀವ್ಸ್‌ನ ಹೊಸ ಅಧ್ಯಕ್ಷ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡ್ತಾನೆ ಇದ್ದಾರೆ. ಈಗಲೂ ಅಷ್ಟೇ ಭಾರತೀಯ ಸೈನಿಕರು ಮಾಲ್ಡೀವ್ಸ್ ಬಿಟ್ಟು ಹೋಗುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು.

ತನ್ನ ಜೇಬಲ್ಲಿ ಕವಡೆ ಕಾಸಿಲ್ಲ ಅಂದ್ರೂ, ಮಾಲ್ಡೀವ್ಸ್ ಕಿತಾಪತಿಗಳಿಗೆ ಕಡಿಮೆ ಏನು ಇಲ್ಲ. ಕಂಡ ಕಂಡ ದೇಶಗಳ ಬಳಿ ಬೀದಿ ಪರೋಡಿಗಳ ರೀತಿ ಸಾಲ ಮಾಡಿಕೊಂಡು ಪರದಾಡ್ತಾ ಇರುವ ಮಾಲ್ಡೀವ್ಸ್ ದೇಶಕ್ಕೆ ಆದಾಯವೇ ಇಲ್ಲ. ಅದ್ರಲ್ಲೂ ಭಾರತದ ಬಳಿ ಸಾವಿರ ಸಾವಿರ ಕೋಟಿ ದುಡ್ಡು ತಿಂದರೂ, ಭಾರತದ ವಿರುದ್ಧವೇ ಮಾತನಾಡುವ ಬುದ್ಧಿ ಬಿಡುತ್ತಿಲ್ಲ. ಈ ಕಾರಣಕ್ಕೆ ಭಾರತೀಯ ಪ್ರವಾಸಿಗರು ಕೂಡ ಮಾಲ್ಡೀವ್ಸ್ ದೇಶಕ್ಕೆ, ತಕ್ಕ ಪಾಠ ಕಲಿಸಿದ್ದಾರೆ. ಹೀಗಿದ್ದರೂ ಮತ್ತೊಮ್ಮೆ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಮಾಲ್ಡೀವ್ಸ್ ಅಧ್ಯಕ್ಷ ಹೇಳಿದ್ದೇನು? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

Maldives President Mohamed Muizzu Once Again Spoke About The Indian Army

ಭಾರತೀಯ ಸೈನಿಕರು ಮಾಲ್ಡೀವ್ಸ್ ಬಿಟ್ಟು...

ಅಷ್ಟಕ್ಕೂ ಮಾಲ್ದೀವ್ಸ್‌ನಲ್ಲಿ ಇರುವ ಭಾರತೀಯ ಸೈನಿಕರು ಸ್ವದೇಶಕ್ಕೆ ಮರಳುವ ಪ್ರಕ್ರಿಯೆ ಮೇ 10ರ ಒಳಗಾಗಿ ಪೂರ್ತಿ ಆಗುತ್ತೆ ಎಂದಿದ್ದಾನೆ ಮಾಲ್ಡೀವ್ಸ್ ಅಧ್ಯಕ್ಷ. ಈ ಹಿನ್ನೆಲೆಯಲ್ಲಿ, 2ನೇ ವಾಯು ನೆಲೆಯಿಂದ ಭಾರತೀಯ ಸೈನಿಕರು ಏಪ್ರಿಲ್ ತಿಂಗಳ ಅಂತ್ಯದ ಒಳಗೆ ನಿರ್ಗಮಿಸುತ್ತಾರೆ ಅಂತಾ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ನೀಡಿರುವ ಹೇಳಿಕೆ ಮತ್ತೊಮ್ಮೆ ಈಗ ಸಂಚಲನ ಸೃಷ್ಟಿಸಿದೆ.

ಅಲ್ಲದೆ ಮೊದಲೇ ಸೂಕ್ಷ್ಮವಾಗಿರುವ ಭಾರತ & ಮಾಲ್ಡೀವ್ಸ್ ದೇಶಗಳ ಸಂಬಂಧ ಮಾಲ್ಡೀವ್ಸ್ ಅಧ್ಯಕ್ಷನ ಈ ಹೇಳಿಕೆ ಬಳಿಕ ಮತ್ತಷ್ಟು ಸೂಕ್ಷ್ಮವಾಗಿದೆ. ಮಾಲ್ದೀವ್ಸ್‌ಗೆ ಭಾರತ ಉಡುಗೊರೆಯಾಗಿ ನೀಡಿದ್ದ ಹೆಲಿಕಾಪ್ಟರ್‌ ನಿರ್ವಹಣೆಗೆ ಅಲ್ಲಿ ಇದ್ದ, 25 ಭಾರತೀಯ ಸೈನಿಕ ಸಿಬ್ಬಂದಿ ಮೊದಲನೇ ಹಂತದಲ್ಲಿ ಮಾಲ್ಡೀವ್ಸ್ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಇದೀಗ ಮತ್ತೊಂದು ಹಂತದಲ್ಲಿ, ಭಾರತೀಯ ಸೇನಾ ಸಿಬ್ಬಂದಿ ನಿರ್ಗಮಿಸುತ್ತಾರೆ ಎಂದಿದ್ದಾನೆ ಮಾಲ್ಡೀವ್ಸ್ ಅಧ್ಯಕ್ಷ.

ಪರಿಸ್ಥಿತಿ ಕೈಮೀರಿ ಹೋಗಿರುವ...

ಮಾಲ್ಡೀವ್ಸ್ & ಭಾರತದ ಮಧ್ಯೆ ಉತ್ತಮ ಸಂಬಂಧ ಇತ್ತು. ಈಗಾಗಲೆ ಭಾರತ ಕೂಡ ಸಾವಿರಾರು ಕೋಟಿ ರೂಪಾಯಿ ದುಡ್ಡನ್ನ ಮಾಲ್ಡೀವ್ಸ್‌ಗೆ ಸಾಲವಾಗಿ ನೀಡಿದೆ. ಹೀಗಿದ್ದರು ಮಾಲ್ಡೀವ್ಸ್ ತಿಂದ ಮನೆಗೆ ದ್ರೋಹ ಬಗೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಾಲ್ದೀವ್ಸ್‌ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್‌ ಮುಯಿಝ ನೂತನವಾಗಿ ಆಯ್ಕೆಯಾಗಿ ಬಂದ ನಂತರ ಪ್ರತಿ ಹಂತದಲ್ಲೂ ತಾನು ಭಾರತ ವಿರೋಧಿ ಅನ್ನೋದನ್ನು ತೋರಿಸುತ್ತಿದ್ದಾರೆ. ಹೀಗಿದ್ದಾಗ, ಭಾರತ ಕೂಡ ಮಾಲ್ಡೀವ್ಸ್‌ಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಭಾರತದ ಬಳಿ ಮಾತುಕತೆ ನಡೆಸುವ ಬದಲು, ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+