• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೇಷ್ಯಾ ಮಾಜಿ ರಾಜನಿಂದ ರಷ್ಯಾ ಸುಂದರಿಗೆ ತ್ರಿವಳಿ ತಲಾಖ್

|

ಕೌಲಾಲಂಪುರ, ಜುಲೈ 25: ಮಲೇಷ್ಯಾದ ಮಾಜಿ ರಾಜ ಸುಲ್ತಾನ್ ಮೊಹಮದ್ ವಿ ಅವರು ಅಧಿಕಾರದ ಆಸೆಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾರೆ.

ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚರ್ಚೆಯಲ್ಲಿರುವ ತ್ರಿವಳಿ ತಲಾಖ್ ಈಗ ಮುಸ್ಲಿಂ ರಾಷ್ಟ್ರ ಮಲೇಷ್ಯಾದಲ್ಲಿ ಆರಿ ಚರ್ಚೆಗೆ ಕಾರಣವಾಗಿದೆ.

ರಷ್ಯಾದ ಬ್ಯೂಟಿ ಕ್ವೀನ್ ರಿಹಾನಾ ಒಕ್ಸಾನಾ ಗೊರ್ಬಂತಿಕೋ ಅವರನ್ನು ಕಳೆದ ವರ್ಷ ಸುಲ್ತಾನಾ ಮದುವೆಯಾಗಿದ್ದರು. ಆದರೆ ಮದುವೆಯ ವರದಿ ಬಳಿ ಮಲೇಷ್ಯಾ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ರಾಜನನ್ನು ಅಧಿಕಾರದಿಂದ ಕಿತ್ತೆಸೆಯಲಾಗಿತ್ತು.

ಮತ್ತೆ ಅಧಿಕಾರ ಪಡೆಯುವ ಹಂಬಲದಲ್ಲಿ ಈಗ ಪ್ರೇಯಸಿ ಹಾಗೂ ಪತ್ನಿಗೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾರೆ.

ಸಿಂಗಾಪುರ ಮೂಲದ ವಕೀಲರೊಬ್ಬರು ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ಕಳೆದ ಜನವರಿ 22 ರಂದು ಸುಲ್ತಾನ್ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾರೆ.

ಷರಿಯತ್ ಕಾನೂನಿನ ಪ್ರಕಾರ ತ್ರಿವಳಿ ತಲಾಖ್ ನೀಡಲಾಗಿದೆ. ಮಲೇಷ್ಯಾದ ಇಸ್ಲಾಮಿಕ್ ಕೋರ್ಟ್‌ನಿಂದ ವಿಚ್ಛೇದನ ಪ್ರಮಾಣ ಪತ್ರವೂ ದೊರೆತಿದೆ ಎಂದು ಸುಲ್ತಾನ್ ಮೊಹಮ್ಮದ್ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದರು.

ಆದರೆ ಈ ತ್ರಿವಳಿ ವಿಚ್ಛೇದನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ನಾನು ಈಗಲೂ ಮೊಹಮ್ಮದ್ ಪತ್ನಿ ಎಂದು ರಿಹಾನಾ ಹೇಳಿಕೊಂಡಿದ್ದಾರೆ. ಇದಲ್ಲದೆ ಇನ್‌ಸ್ಟಾಗ್ರಾಂನಲ್ಲಿ ಪತಿ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ.

ಕಳೆದ ಜನವರಿಯಿಂದ ಇಲ್ಲಿಯವರೆಗೆ ವಿಚ್ಛೇದನಕ್ಕೆ ಸಂಬಂಧಿಸಿ ನನಗೆ ತ್ರಿವಳಿ ತಲಾಖ್ ಅಥವಾ ಯಾವುದೇ ನೋಟಿಸ್ ಬಂದಿಲ್ಲ. ನೇರವಾಗಿ ಅಥವಾ ಪರೋಕ್ಷವಾಗಿ ತ್ರಿವಳಿ ತಲಾಖ್ ಕೂಡ ಹೇಳಲಾಗಿಲ್ಲ, ಹೀಗಾಗಿ ನಾನಿನ್ನು ಅವರ ಅಧಿಕೃತ ಪತ್ನಿ ಎಂದು ರಿಹಾನಾ ಸ್ಪಷ್ಟಪಡಿಸಿದ್ದಾರೆ.

ರಿಹಾನಾ ಅವರೇ ಹೇಳಿಕೊಂಡಂತೆ ಕಳೆದ ಮೇ ನಲ್ಲಿ ದಂಪತಿಗೆ ಗಂಡು ಮಗುವಾಗಿತ್ತು.ಆದರೆ ಈ ಮಗು ಕೂಡ ತಮ್ಮದಲ್ಲ ಎಂದು ಮೊಹಮ್ಮದ್ ಆರೋಪ ಮಾಡಿದ್ದಾರೆ.
ಮಲೇಷ್ಯಾದಲ್ಲಿ ಮೊದಲ ಬಾರಿಗೆ ಇಂತಹದ್ದೊಂದು ಸನ್ನಿವೇಷ ಸೃಷ್ಟಿಯಾಗಿದೆ. ಈ ಕುರಿತು ಮಲೇಷ್ಯಾ ಸರ್ಕಾರ ಹಾಗೂ ರಾಜಕುಟುಂಬ ಮಧ್ಯಪ್ರವೇಶಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

English summary
Malaysias former king Sultan Muhammad gave Divorce to Ex Russian Queen by telling Triple Talaq
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X