ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಿಪಣಿ ದಾಳಿಗೆ ಮಲೇಷ್ಯಾ ವಿಮಾನ ಪತನ, 295 ಸಾವು

|
Google Oneindia Kannada News

ಬೆಂಗಳೂರು, ಜು. 18 : ಮಲೇಷ್ಯಾ ಏರ್ ಲೈನ್ಸ್ ಕಂಪನಿಗೆ ಸೇರಿದ ವಿಮಾನ ರಷ್ಯಾ ಉಕ್ರೇನ್ ಗಡಿಯಲ್ಲಿ ಪತನಗೊಂಡಿದೆ. ಉಕ್ರೇನ್ ಬಂಡುಕೋರರು ಕ್ಷಿಪಣಿ ಮೂಲಕ ವಿಮಾನ ಹೊಡೆದುರುಳಿಸಿದ್ದು, ವಿಮಾನದಲ್ಲಿದ್ದ 280 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಪತನಗೊಂಡ ವಿಮಾನ ಅಮ್ ಸ್ಟರ್ ಡ್ಯಾಂನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ತೆರಳುತ್ತಿತ್ತು. ಬೋಯಿಂಗ್ 777 ವಿಮಾನದಲ್ಲಿದ್ದ 280 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಸಾವನ್ನಪ್ಪಿದ್ದು, 100 ಶವಗಳು ದೊರಕಿವೆ.

ಕಳೆದ ಕೆಲವು ತಿಂಗಳ ಹಿಂದೆ ಮಲೇಷ್ಯಾ ಏರ್ ಲೈನ್ಸ್ ಕಂಪನಿಗೆ ಸೇರಿದ ಎಂ.ಎಚ್.370 ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು. ಸದ್ಯ ಇದೇ ಕಂಪನಿಗೆ ಸೇರಿದ ಬೋಯಿಂಗ್ 777 ವಿಮಾನವನ್ನು ಬಂಡುಕೋರರು ಹೊಡದುರುಳಿಸಿದ್ದಾರೆ. [ಎಂಎಚ್370 ಕಣ್ಮರೆ ಪ್ರಕರಣ ದುರಂತ ಅಂತ್ಯ]

ಉಕ್ರೇನ್ ಮತ್ತು ರಷ್ಯಾ ಗಡಿ ಭಾಗದ ಡೋನೆಟ್ಕ್ ಎಂಬಲ್ಲಿ ವಿಮಾನ ಪತನಗೊಂಡಿದೆ. ವಿಮಾನ ಜನ ವಸತಿ ಪ್ರದೇಶದಲ್ಲಿ ಪತನಗೊಂಡಿಲ್ಲ. ಆದ್ದರಿಂದ ಯಾವುದೇ ಹಾನಿ ಉಂಟಾಗಿಲ್ಲ. ಯದ್ಧಪೀಡಿತ ಪ್ರದೇಶದಲ್ಲಿ ಬಂಡುಕೋರರು ನೆಲದಿಂದ ಕ್ಷಿಪಣಿ ದಾಳಿ ನಡೆಸಿ ವಿಮಾನವನ್ನು ಹೊಡೆದುರುಳಿಸಿದ್ದಾರೆ.

ಕೃತ್ಯ ಒಪ್ಪಿಕೊಂಡ ಬಂಡುಕೋರರು : ರಷ್ಯಾದ ಬಂಡುಕೋರ ನಾಯಕರು ವಿಮಾನವನ್ನು ಹೊಡೆದುರುಳಿಸಿದ್ದು ನಾವೇ ಎಂದು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ನಮ್ಮ ವಾಯು ಪ್ರದೇಶದಲ್ಲಿ ಹಾರಾಟ ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದೆವು. ಅದನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಅದನ್ನು ಹೊಡೆದುರುಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

plane crashe

ತನಿಖೆಗೆ ಆದೇಶ : ವಿಮಾನವನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ ಎಂದು ಹೇಳಿರುವ ಉಕ್ರೇನ್ ಅಧ್ಯಕ್ಷ ಪೊರೋಶೇಂಕೊ ಹೇಳಿದ್ಧು ಈ ಕುರಿತು ಅಂತರಾಷ್ಟ್ರೀಯಮಟ್ಟದ ತನಿಖೆಯಾಗಬೇಕೆಂದು ಹೇಳಿದ್ದಾರೆ.

English summary
A Malaysian Airline has crashed with 295 passengers on board. The civilian plane may have been shot down by a BUK missile. Ukrainian interior ministry say that all 280 passengers and the crew members are dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X