ಜಪಾನ್ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 30 ಕ್ಕೆ ಏರಿಕೆ
ಹೊಕ್ಕ್ಯಾಡಿಯೋ, ಸೆಪ್ಟೆಂಬರ್ 08: ಜಪಾನಿನ ಹೊಕ್ಕ್ಯಾಡಿಯೋದಲ್ಲಿ ಗುರುವಾರ ಸಂಭವಿಸಿದ್ದ ಬೀಕರ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 30 ಕ್ಕೆ ಏರಿದೆ.
ರಿಕ್ಟರ್ ಮಾಪನದಲ್ಲಿ 6.6 ತೀವ್ರತೆ ದಾಖಲಾಗಿದ್ದು, ಭೂಕಂಪ ಸಭವಿಸಿದ ಒಂದು ದಿನದ ನಂತರವೂ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ.
ಭೂಕಂಪದ ನಂತರ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಈ ಹೆಚ್ಚಿನ ಜನರು ಮೃತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಯಲ್ಲಿ 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, 10,000 ಜನರನ್ನು ರಾತ್ರೋರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಕಳಲೆದ ಜೂನ್ ನಲ್ಲಿ ಜಪಾನಿನ ಓಸಾಕಾಸಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪದಲ್ಲಿ ಮೂವರು ಮೃತರಾಗಿದ್ದರು.
ಜನವರಿಯಲ್ಲಿ ಜಪಾನಿನ ಅಲಾಸ್ಕಾದಲ್ಲಿ 8.2 ತೀವ್ರತೆಯ ಭೂಕಂಪ ಸಂಭವಿಸಿತ್ತು.











Click it and Unblock the Notifications