ಪಾಕಿಸ್ತಾನ ಸಂಸತ್‌ಗೆ ಆಯ್ಕೆಯಾದ ಮೊದಲ ಹಿಂದೂ ಅಭ್ಯರ್ಥಿ

ಇಸ್ಲಾಮಾಬಾದ್, ಜುಲೈ 28: ಪಾಕಿಸ್ತಾನದ ಸಂಸತ್ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.

ಈ ಐತಿಹಾಸಿಕ ಚುನಾವಣೆಯಲ್ಲಿ ಮತ್ತೊಂದು ಚಾರಿತ್ರ್ಯಿಕ ಘಟನೆಯೂ ದಾಖಲಾಗಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯಿಂದ (ಪಿಪಿಪಿ) ಸ್ಪರ್ಧಿಸಿದ್ದ ಮಹೇಶ್ ಕುಮಾರ್ ಮಲಾನಿ, 16 ವರ್ಷಗಳಲ್ಲಿ ಪಾಕ್ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ಹಿಂದೂ ಅಭ್ಯರ್ಥಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮಲಾನಿ ಅವರು ಪಾಕಿಸ್ತಾನದಲ್ಲಿ ಮುಸ್ಲಿಮೇತರರು ಕಳೆದ 16 ವರ್ಷಗಳಲ್ಲಿ ಮತದಾನದ ಹಕ್ಕು ಹಾಗೂ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದ ಬಳಿಕ ಗೆದ್ದ ಮೊದಲ ಅಭ್ಯರ್ಥಿಯೂ ಹೌದು.

mahesh kumar malani first hindu elected pakistan national assembly

ದಕ್ಷಿಣ ಸಿಂಧ್ ಪ್ರಾಂತ್ಯದ ತರ್ಪಾಕರ್ IIನಿಂದ ಸ್ಪರ್ಧಿಸಿದ್ದ ಮಲಾನಿ, ತಮ್ಮ 14 ಎದುರಾಳಿಗಳನ್ನು ಮಣಿಸಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಮಲಾನಿ ಅವರು 1,06,630 ಮತಗಳನ್ನು ಗಳಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ, ಗ್ರಾಂಡ್ ಡೆಮಾಕ್ರಟಿಕ್ ಅಲಾಯನ್ಸ್ ಅಭ್ಯರ್ಥಿ ಅರ್ಬಾಬ್ ಜಕಾವುಲ್ಲಾ 87,251 ಮತಗಳನ್ನು ಪಡೆದುಕೊಂಡರು.

ರಾಜಸ್ಥಾನಿ ಪುಷ್ಕರಣ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಲಾನಿ, 2003-08ರ ಅವಧಿಯಲ್ಲಿ ಮೀಸಲು ಸ್ಥಾನದಲ್ಲಿ ಸಂಸತ್‌ನ ಸದಸ್ಯರಾಗಿದ್ದರು. ಆಗ ಪಿಪಿಪಿ ಅವರನ್ನು ನಾಮನಿರ್ದೇಶನ ಮಾಡಿತ್ತು.

2013ರಲ್ಲಿ ಸಿಂಧ್ ಅಸೆಂಬ್ಲಿಯ ಥರ್ಪಾಕರ್ III ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರಾಂತೀಯ ಅಸೆಂಬ್ಲಿಯ ಮೊದಲ ಮುಸ್ಲಿಮೇತರ ಸದಸ್ಯರಾಗಿ ಆಯ್ಕೆಯಾಗಿದ್ದರು.

ಸಿಂಧ್ ಅಸೆಂಬ್ಲಿಯ ಆಹಾರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಅವರು, ಕಳೆದ ಸರ್ಕಾರದ ಆಡಳಿತದಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿದ್ದರು.

2002ರಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಮುಸ್ಲಿಮೇತರರು ಸಂಸತ್‌ನ ಸದಸ್ಯ ಸ್ಥಾನಗಳು ಹಾಗೂ ಪ್ರಾಂತೀಯ ಅಸೆಂಬ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಮತ್ತು ಮತಚಲಾಯಿಸುವ ಹಕ್ಕನ್ನು ನೀಡಿದ್ದರು.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅಲ್ಪಸಂಖ್ಯಾತರಿಗೆ ಹತ್ತು ಸೀಟುಗಳನ್ನು ಮೀಸಲಿಡಲಾಗಿದೆ. ಸಂಸತ್‌ನಲ್ಲಿ ಪಕ್ಷಗಳು ಹೊಂದಿರುವ ಸ್ಥಾನಗಳ ಆಧಾರದಲ್ಲಿ ಈ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಥರ್ಪಾಕರ್‌ನ ಕೃಷ್ಣ ಕುಮಾರಿ ಅವರು ಪಿಪಿಪಿ ಮೂಲಕ ಸೆನೆಟ್‌ಗೆ ಚುನಾಯಿತರಾದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಸಿಂಧ್‌ನಲ್ಲಿ ಮಹಿಳೆಯರಿಗೆ ಮೀಸಲಾದ ಕ್ಷೇತ್ರದಲ್ಲಿ ಅವರು ಗೆದ್ದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+